ದೂರದ ಜರ್ಮನಿ ಮತ್ತು ಓಮನ್ ನಲ್ಲಿ ಕಾರ್ಯ ನಿರ್ವಹಿಸಿದ ಇವರು, ನಾಯಕರಾಗಿ ಮಿಂಚಲು ತಯಾರಾಗಿದ್ದಾರೆ !

in ಮನರಂಜನೆ/ಸಿನಿಮಾ 160 views

ಬಣ್ಣದ ಲೋಕದಲ್ಲಿ ಇಂದು ಅದೆಷ್ಟೋ ಜನ ತಮ್ಮ ನಟನಾ ಕಂಪನ್ನು ಪಸರಿಸುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಕಿರುತೆರೆ. ಕಿರುತೆರೆ ಮೂಲಕ ಹೊಸ ಹೊಸ ಪ್ರತಿಭೆಗಳು ನಟನಾ ರಂಗಕ್ಕೆ ಕಾಲಿಡುತ್ತಲೇ ಇದ್ದಾರೆ. ಆ ಸಾಲಿಗೆ ಸೇರಿದ ಈ ಪ್ರತಿಭೆಯ ಹೆಸರು ಗಗನ್ ಚಿನ್ನಪ್ಪ. ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಬಂದ ಗಗನ್ ಚಿನ್ನಪ್ಪ ಯಾರು ಎಂದು ಆಲೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ, ಕಿರುತೆರೆ ವೀಕ್ಷಕರಿಗೆ ಅವರ ನಿಜವಾದ ಹೆಸರು ಗಗನ್ ಎಂಬುದು ತಿಳಿದಿಲ್ಲ. ಯಾಕೆಂದರೆ ಅವರು ರಾಜೀವ್ ಆಗಿಯೇ ನಟನಾ ರಂಗದಲ್ಲಿ ಫೇಮಸ್ಸು! ಅದು ಮಂಗಳ ಗೌರಿ ಮದುವೆ ಧಾರಾವಾಹಿಯ ನಾಯಕ ರಾಜೀವ! ಕೊಡಗಿನ ಕುವರ ಗಗನ್ ಚಿನ್ನಪ್ಪ ಅವರು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಟನಾ ರಂಗಕ್ಕೆ ಬಂದರು. ಮುಂದೆ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಅವರು ನಾಯಕನಾಡಿ ಭಡ್ತಿಯನ್ನು ಪಡೆದರು. ಗಗನ್ ಚಿನ್ನಪ್ಪ ಅವರು ಸದ್ಯ ಕಿರುತೆರೆಯಲ್ಲಿ ಬ್ಯುಸಿ ನಿಜ, ಆದರೆ ಅವರು ತೀರಾ ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಬಂದರು. ಆಟೋಮೊಬೈಲ್ ಇಂಡಸ್ಟ್ರಿಯ ಮಾರ್ಕೆಟಿಂಗ್ ಹೆಡ್ ಆಗಿ ಸುಮಾರು ಮೂರು ವರ್ಷಗಳ ಕಾಲ ದೂರದ ಜರ್ಮನಿ ಮತ್ತು ಓಮನ್ ನಲ್ಲಿ ಕಾರ್ಯ ನಿರ್ವಹಿಸಿದ ಗಗನ್ ಮುಂದೆ ಭಾರತಕ್ಕೆ ವಾಪಸಾದರು. ಮತ್ತು ಐಟಿ ಕಂಪೆನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡರು.

Advertisement

Advertisement

ಇದರ ಜೊತೆಗೆ ಅವರಿಗೆ ಬಾಲ್ಯದಿಂದಲೂ ತಾನೊಬ್ಬ ಕಲಾವಿದನಾಗಬೇಕು, ನಟನಾಗಿ ಗುರುತಿಸಿಕೊಳ್ಳಬೇಕು ಎಂಬ ಬಯಕೆ ಇತ್ತು. ಅದನ್ನು ಈಡೇರಿಸುವ ಸಲುವಾಗಿ ಆಡಿಶನ್ ಗಳನ್ನು ಕೂಡಾ ನೀಡಲಾರಂಭಿಸಿದ್ದರು. ಕೊನೆಯದಾಗಿ ಪುಟ್ಟ ಗೌರಿ ಮದುವೆಯಿಂದ ಆರಂಭವಾದ ಬಣ್ಣದ ನಂಟು ಸದ್ಯ ಮಂಗಳ ಗೌರಿಗೆ ತಂದು ನಿಲ್ಲಿಸಿದೆ.ನಟನೆಯ ಗಂಧ ಗಾಳಿ ಗೊತ್ತಿರದ ಗಗನ್ ಚಿನ್ನಪ್ಪ ಕಿರುತೆರೆಗೆ ಬರುವ ಮೊದಲು ಯಾವುದೇ ರೀತಿಯ ತರಬೇತಿ ಪಡೆದವರಲ್ಲ. ನಟನೆಯ ಬಗ್ಗೆ, ಕ್ಯಾಮೆರಾದ ಬಗ್ಗೆ, ಡೈಲಾಗ್ ಡೆಲಿವರಿಯ ಬಗ್ಗೆ ಇವೆಲ್ಲವನ್ನು ಕೂಡಾ ಅವರು ಕಿರುತೆರೆಗೆ ಬಂದ ಮೇಲೆಯೇ ಕಲಿತದ್ದು. ” ನಟನೆಯ ಬಗ್ಗೆ ಏನೊಂದು ತಿಳಿಯದಿದ್ದ ನಾನು ಕಿರುತೆರೆಗೆ ಬಂದ ಮೇಲೆಯೇ ಸರಾಗವಾಗಿ ಕಲಿತದ್ದು. ನನ್ನ ಮೇಲೆ ನಂಬಿಕೆ ಇಟ್ಟು ಪ್ರಮುಖ ಪಾತ್ರವನ್ನು ನೀಡಿದ ನಿರ್ಮಾಪಕರು, ನಿರ್ದೇಶಕರುಗಳಿಗೆ ನಾನು ಅದೆಷ್ಟೋ ಚಿರ ಋಣಿ. ಮಾತ್ರವಲ್ಲ ನಿರ್ದೇಶಕರ ರಾಮ್ ಜೀ, ಹಿರಿಯ ಕಲಾವಿದರುಗಳು ನನ್ನ ತಪ್ಪನ್ನು ತಿದ್ದಿ ತೀಡಿದರು” ಎನ್ನುತ್ತಾರೆ ಗಗನ್.

Advertisement

Advertisement

“ಸಿಬಿಐ ಡಿಟೆಕ್ಟಿವ್‌ ಆಗಿದ್ದ ನನ್ನ ತಂದೆಗೆ ನಾನು ಪೊಲೀಸ್ ಅಧಿಕಾರಿಯಾಗಬೇಕು ಎಂಬ ಮಹಾದಾಸೆ ಇತ್ತು. ಆದರೆ ನಾನು ಕ್ರಿಕೆಟರ್ ಇಲ್ಲವೇ ನಟನಾಗಬೇಕು ಎಂಬ ಕನಸು ಕಾಣುತ್ತಿದ್ದೆ. ಕೊನೆಯಲ್ಲಿ ನಟನಾಗುವ ಮೂಲಕ ನನ್ನ ಆಸೆ ಈಡೇರಿಸಿದೆ. ಕಾಕಾತಾಳೀಯ ಎಂದರೆ ಮೊದಲ ಧಾರಾವಾಹಿಯಲ್ಲಿಯೇ ಪೊಲೀಸ್ ಅಧಿಕಾರಿ ಪಾತ್ರ ದೊರಕಿದೆ. ಆ ಮೂಲಕ ಅಪ್ಪನ ಇಷ್ಟವನ್ನು ನೆರವೇರಿಸಿದ ಖುಷಿ ನನಗಿದೆ” ಎಂದು ಹೇಳುತ್ತಾರೆ ಗಗನ್.

ಅಂದ ಹಾಗೇ ಗಗನ್ ಚಿನ್ನಪ್ಪ ಕೇವಲ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ನಾಯಕರಾಗಿ ಮಿಂಚಲು ತಯಾರಾಗಿದ್ದಾರೆ‌. ಹಿಂದು ಕೃಷ್ಣ ನಿರ್ದೇಶನದ ಅಲೆಗ್ಸಾಂಡರ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಲು ತಯಾರಾಗಿದ್ದಾರೆ ಕೊಡಗಿನ ಕುವರ.
– ಅಹಲ್ಯಾ


ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...