ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಗಟ್ಟಿಮೇಳ ಧಾರಾವಾಹಿಯ ಅದಿತಿ…..

in ಮನರಂಜನೆ/ಸಿನಿಮಾ 3,069 views

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರವನ್ನು ಮಾಡುತ್ತಿರುವ ನಟಿಯ ನಿಜವಾದ ಹೆಸರು ಪ್ರಿಯಾ ಆಚಾರ್.ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪ್ರಿಯಾ ಆಚಾರ್ ತುಂಬಾ ಸುದ್ದಿಯಲ್ಲಿದ್ದಾರೆ. ಇವರ ಟಿಕ್ ಟಾಕ್ ವಿಡಿಯೋಗಳು, ಫೋಟೋಗಳು, ಧಾರಾವಾಹಿ ಸಂಬಂಧಿತ ಸೀನ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಹರಿದಾಡುತ್ತಿರುತ್ತವೆ. ಮೂಲತಃ ದಾವಣಗೆರೆ ಹುಡುಗಿಯಾದ ಈ ನಟಿ ಈ ಬಾರಿ ಅಷ್ಟೇ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದ್ದಾರೆ. ಒಂದು ವಿಷಯದ ಬಗ್ಗೆ ಹೇಳಲೇ ಬೇಕು. ನಾವು ನೀವು ಅಂದುಕೊಂಡ ಹಾಗೆ ಪ್ರಿಯಾ ಆಚಾರ್ ನಟನೆಯ ಬಗ್ಗೆ ಯಾವುದೇ ಸಣ್ಣ ವಿಷಯವು ಗೊತ್ತಿರದ ನಟಿ. ನಟನೆಯನ್ನು ಕಲಿತಿಲ್ಲ ಮತ್ತು ಯಾವುದೇ ನಟನಾ ತರಭೇತಿಯನ್ನು ತೆಗೆದುಕೊಂಡಿಲ್ಲ. ಟಿಕ್ ಟಾಕ್ ವೀಡಿಯೋಗಳನ್ನು ಮಾಡುವ ಮೂಲಕ ಪ್ರಸಿದ್ದಿಯನ್ನು ಪಡೆದುಕೊಂಡ ಈ ನಟಿ ಸೋಶಿಯಲ್ ಮೀಡಿಯಾದ ಮೂಲಕವೇ ಧಾರಾವಾಹಿಗೆ ಪಾದಾರ್ಪಣೆ ಮಾಡಿದರು. ಬೃಹತ್ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದ ಧಾರಾವಾಹಿ ಒಂದಿದ್ದರೆ ಅದು ಬೇರೆ ಯಾವುದೂ ಅಲ್ಲ. ಮದ್ಯಮ ವರ್ಗಕ್ಕೆ ಸೇರಿದ 4 ಜನ ಹೆಣ್ಣುಮಕ್ಕಳ ಕಥೆಯಾದ ಗಟ್ಟಿಮೇಳ ಧಾರಾವಾಹಿ.

Advertisement

Advertisement

ನಿಶಾ ರವಿಕೃಷ್ನನ್ ಮತ್ತು ರಕ್ಷಿತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಪ್ರಿಯಾ ಆಚಾರ್ ನಿಶಾ ರವಿಕೃಷ್ಣನ್ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವಾಗಲೂ ತಮಾಷೆ ಮತ್ತು ತಂಗಿಯ ಜೊತೆ ಜಗಳ ಮಾಡಿಕೊಂಡು ಪಟಪಟನೆ ಮುದ್ದಾಗಿ ಮಾತನಾಡುವ ಪ್ರಿಯಾ ಆಚಾರ್ ಪ್ರೇಕ್ಷಕರ ಮನ ಗೆದ್ದಿರುವುದಂತು ನಿಜ. ಮುದ್ದು ಮುದ್ದಾದ ದುಂಡು ಕೆನ್ನೆಯ ಹುಡುಗಿ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ, ಎಲ್ಲರೂ ಇಷ್ಟ ಪಡುವ ಪಾತ್ರ. ಇವರ ವಯಸ್ಸಿಗೆ ಮತ್ತು ನಟನೆಗೆ ಸರಿ ಹೊಂದುವ ಪಾತ್ರ ಸಿಕ್ಕಿರುವುದಕ್ಕೆ ಪ್ರಿಯಾ ಆಚಾರ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

Advertisement


ನಟನೆಯ ಪರಿಕಲ್ಪನೆಯೇ ಇಲ್ಲದೆ ನಟನೆಯನ್ನು ಈಗ ಪ್ರಿಯಾ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ನಟನೆ ಮಾತ್ರವಲ್ಲದೇ ಡಾನ್ಸ್ ಮಾಡುವುದರಲ್ಲೂ ಇವರಿಗೆ ಆಸಕ್ತಿ ಇದೆ. ಟಿಕ್ ಟಾಕ್ ವಿಡಿಯೋ ಮೂಲಕ ನಟನಾ ವೃತ್ತಿಗೆ ಬಂದಿರುವ ಇವರು ಬಿಡುವಿರುವ ಸಮಯದಲ್ಲಿ ವಿಡಿಯೋ ಮಾಡುತ್ತಾರೆ.  ನಟನೆಯಲ್ಲಿ ಪರಿಪಕ್ವತೆ ಪಡೆದು ತೆರೆ ಮೇಲೆ ಇನ್ನೂ ಸಾಕಷ್ಟು ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸೆ ಇದೆ. ಅನಿರೀಕ್ಷಿತವಾಗಿ ನಟನೆ ಕಡೆಗೆ ಬಂದರು ಕೂಡಾ ಇವರ ಅಭಿನಯ ನೋಡಿದರೆ ತರಭೇತಿ ಪಡೆದುಕೊಂಡಿದ್ದಾರೆ ಎನಿಸುತ್ತದೆ. ಉತ್ತಮ ನಟನಾ ಕೌಶಲ್ಯ ಹೊಂದಿರುವ ಇವರು ಮುಂದೊಂದಿನ ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುವ ಎಲ್ಲ ರೀತಿಯ ಕೌಶಲ್ಯ ಇವರಿಗಿದೆ. ತುಂಬಾ ಖುಷಿ ಪಡುವ ವಿಷಯ ಒಂದಿದೆ ಅದೇನಪ್ಪಾ ಅಂದ್ರೆ ಪ್ರಿಯಾ ನಟನೆಗೆ ಒಂದು ಅವಕಾಶ ಸಿಕ್ಕಿದಾಗ ಅವರು ಓದುತ್ತಿದ್ದ ಕಾಲೇಜ್ ಕಡೆಯಿಂದ ತುಂಬಾ ಸಪೋರ್ಟ್ ಇತ್ತು. ಇವರಿಗೆ ಉತ್ಸಾಹ ತುಂಬುತ್ತಿದ್ದರು.ಅದಕ್ಕೆ ಹೇಳುವುದು ನಮ್ಮ ಹತ್ತಿರ ಕೌಶಲ್ಯ, ಜ್ಞಾನ,ಮತ್ತು ನಿಷ್ಠೆ ಇದ್ದರೆ ಎಲ್ಲವೂ ನಮ್ಮ ಪರಿಶ್ರಮದ ಜೊತೆ ಜೊತೆಗೆ ಆಗುತ್ತದೆ…

Advertisement

Advertisement
Share this on...