ರೌಡಿ ಬೇಬಿಯ ಬದುಕು ಬದಲಾಗಿದ್ದೆ ಈ ಗಟ್ಟಿಮೇಳ ಧಾರವಾಹಿಯಿಂದ…. !?

in ಮನರಂಜನೆ/ಸಿನಿಮಾ 396 views

ನಿಶಾ ಮಿಲನ ಎಂದೇ ಕರೆಯಲ್ಪಡುವ ನಿಶಾ ರವಿಕೃಷ್ಣನ್ ಇವರು ರವಿಕೃಷ್ಣನ್ ಮತ್ತು ಉಷಾ ದಂಪತಿಯ ಮಗಳಾಗಿ ಜನಿಸಿದರು.ರವಿಕೃಷ್ಣನ್ ಅವರು ಮಂಡ್ಯ ರಮೇಶ್ ಅವರ ತಂಡದೊಂದಿಗೆ ರಂಗ ನಾಟಕಗಳನ್ನು ಪ್ರದರ್ಶಿಸಿದ್ದರು.ತಂದೆಯಿಂದ ಪ್ರೇರಿತರಾದ ಅವರು ರಂಗ ನಾಟಕಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಲು ಪ್ರಾರಂಭಿಸಿದರು.ಇವರು ಕರ್ನಾಟಕ ಸಂಗೀತ ಮತ್ತು ಭರತ ನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ.ಇವರ ಶಾಲಾ ದಿನಗಳಲ್ಲಿ ಚಿಂಟು ಟೆಲಿವಿಷನ್ ನಲ್ಲಿ ತಮ್ಮ ಚೊಚ್ಚಲ ಕಾರ್ಯಕ್ರಮವನ್ನು ಮಾಡಿದ್ದಾರೆ. ಕನ್ನಡ ಚಿತ್ರ ಇಷ್ಟಕಾಮ್ಯಾ ಚಿತ್ರದಲ್ಲಿರುವ ನೀ ನನಗೋಸ್ಕರ ಎಂಬ ಹಾಡಿನಲ್ಲಿ ಬ್ಯಾಕ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯಾಗಿ ಇವರಿಗೆ ಮೊದಲ ಅವಕಾಶ ಸಿಕ್ಕಿದ್ದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಸರ್ವಮಂಗಳ ಮಾಂಗಲ್ಯೆ ಮೂಲಕ ಪ್ರಮುಖ ಪಾತ್ರದ ಸಹೋದರಿಯಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ.ಪೋಷಕ ಪಾತ್ರಗಳಲ್ಲಿ ಕೆಲವು ವರ್ಷ ಕೆಲಸ ಮಾಡಿದ ನಂತರ , ಇವರಿಗೆ ಗಟ್ಟಿಮೇಳದಲ್ಲಿ ಪ್ರಮುಖ ಪಾತ್ರ ಮಾಡುವ ಆಫರ್ ಒದಗಿಬಂತು.ಪುಟ್ಟ ಗೌರಿ ಮದುವೆಯ ಖ್ಯಾತಿಯ ರಕ್ಷಿತ್  ಅವರ ಜೊತೆ ನಾಯಕಿಯಾಗಿ ನಟಿಸಲು ಅವಕಾಶ ಸಿಕ್ಕಿತು.

Advertisement

Advertisement

2019 ರ ಟೆಲಿವಿಷನ್ ನಲ್ಲಿ ಬೆಂಗಳೂರು ಟೈಮ್ಸ್ ಮೋಸ್ಟ್ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ನಿಶಾ ರವಿಕೃಷ್ಣನ್ ಸ್ಥಾನ ಪಡೆದಿದ್ದಾರೆ.’ ರೌಡಿ ಬೇಬಿ’ ಎಂದೇ ಖ್ಯಾತಿ ಗಳಿಸಿರುವ ನಿಶಾ ರವಿಕೃಷ್ಣನ್ ನಟಿ ಮಾತ್ರವಲ್ಲ,ಅತ್ಯುತ್ತಮ ಸಿಂಗರ್ ಹಾಗೂ ಡಾನ್ಸರ್ ಎಂಬುದು ಬಹಳಷ್ಟು ಮಂದಿಗೆ ತಿಲಿಯಲಾರದು.ಯಾರ ತಂಟೆಗೂ ಹೋಗದ ತೀರಾ ಸಿಂಪಲ್,ಡೀಸೆಂಟ್ ನಟಿ ನಿಶಾ. ತಮ್ಮ ಲೈಫ್ ಸ್ಟೈಲ್ , ಪ್ರೊಫೆಷನ್ ಹಾಗೂ ಕನಸುಗಳ ಬಗ್ಗೆ ಲವಲವಿಕೆ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಇವರು ಚಿಕ್ಕವರಿದ್ದಾಗಲೇ ನಾನು ಶಾಲೆಯಲ್ಲಿ ಲೆಕ್ಕವಿಲ್ಲದಷ್ಟು ಹಾಡು ಮತ್ತು ಡಾನ್ಸ್ ನ ಸ್ಟೇಜ್ ಶೋಗಳನ್ನು ನೀಡಿದ್ದಾರೆ. ಕಲ್ಚರಲ್ ಪ್ರೋಗ್ರಾಂಗಳು ನೀಡಿದ್ದಾರೆ.

Advertisement

ಕಲ್ಚರಲ್ ಪ್ರೋಗ್ರಾಂಗಳು ನೀಡಿದ್ದಾರೆ.ಅವರ ತಂದೆಯಲ್ಲಿದ್ದ ಬಣ್ಣದ ಲೋಕದ ಗುಣ ಇವರಿಗೆ ರಕ್ತಗತವಾಗಿ ಬಂದಿದೆ.ಅವರ ಮಾರ್ಗದರ್ಶನ ಕೂಡಾ ಅವರಿಗೆ ಮತ್ತಷ್ಟು ಹುರುಪು ತಂದಿದೆ.ಇವರು ಕಿರುತೆರೆಯಲ್ಲಿ ಹೆಸರು ಮಾಡಲು ಇವರ ಅಮ್ಮಾ ಉಷಾ ಕೂಡಾ ಕಾರಣ.ಇವರು 6 ನೇ ತರಗತಿಯಿಂದ 10ನೇ ತರಗತಿಯವರೆಗೂ ಮಕ್ಕಳ ಖಾಸಗಿ ಚಾನೆಲ್ನಲ್ಲಿ ಆಂಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಇಷ್ಟೆಲ್ಲಾ ಕೆಲಸಗಳ ನಡುವೆಯೂ ಇವರ ಓದಿಗೆ ಯಾವುದೇ ತೊಂದರೆಯನ್ನು ಮಾಡಿಕೊಂಡಿಲ್ಲ. ಇಂದಿಗೂ ಅಷ್ಟೇ, ಬಿ. ಕಾಂ ಎರಡನೇ ವರ್ಷದಲ್ಲಿ ಓದುತ್ತಿದ್ದು,ಆಕ್ಟಿಂಗ್ ನೊಂದಿಗೆ ಡಿಗ್ರಿ ಮುಗಿಸುತ್ತೇನೆ ಎಂದು ಹೇಳಿದ್ದಾರೆ.ಮನೆಯಲ್ಲಿ ಇವರಿಗೆ ಅವರ ಪ್ರೀತಿಯ ನಾಯಿ ಬಾನಿ ಜತೆ ಕಾಲ ಕಳೆಯುವುದೆಂದರೆ ಎಲ್ಲಿಲ್ಲದ ಇಷ್ಟ.

Advertisement

ಸದ್ಯಕ್ಕೆ ಇವರು ಕಂಪ್ಲೀಟ್ ಬ್ಯುಸಿ.ಇವರಿಗೆ ಸಮಯ ಸಿಗುವುದೇ ಕಷ್ಟ.ಕೊಂಚ ಸಮಯ ಸಿಕ್ಕರೂ ಎಲ್ಲಿಗೂ ಹೋಗದೆ ಹೆಚ್ಚಾಗಿ ಅಮ್ಮ – ಅಪ್ಪನೊಂದಿಗೆ ಮನೆಯಲ್ಲಿಯೇ ಕಾಲವನ್ನು ಕಳೆಯುತ್ತಾರೆ. ಮಾಲ್ಡೀವ್ಸ್ ಇವರ ಫೆವರೇಟ್ ಟ್ರಾವೆಲ್ ಡ್ರೀಮ್ ಡೆಸ್ಟಿನೇಷನ್.ಜೊತೆಗೆ ಇವರ ಅಪ್ಪ ಅಮ್ಮನನ್ನು ಕರೆದುಕೊಂಡು ಹೋಗಬೇಕೆಂಬ ಆಸೆ ಇದೆ.
ಇವರು ಮುಖ್ಯವಾಗಿ ಗುರುತಿಸಿಕೊಂಡಿದ್ದು ಗಟ್ಟಿಮೇಳ ಧಾರಾವಾಹಿಯ ಮೂಲಕ ಈ ಧಾರಾವಾಹಿ ಇವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿದೆ.ಹಾಗೂ ಎಲ್ಲಾ ವೀಕ್ಷಕರು ಇವರ ರೌಡಿ ಬೇಬಿ ಪಾತ್ರವನ್ನು ಮತ್ತು ಪಟ ಪಟನೆ ಮಾತನಾಡುವ ಶೈಲಿಗೆ ಫಿದಾ ಆಗಿರುವುದು ಅಂತೂ ಕಂಡಿತ.ಇವರ ಸಾಧನೆಯ ದಾರಿಗೆ ಈ ಧಾರಾವಾಹಿ ಒಂದು ಮೆಟ್ಟಿಲಿನಂತಾಗಿದೆ.

Advertisement
Share this on...