ಗಟ್ಟಿಮೇಳ ಅಮೂಲ್ಯ ರಿಯಲ್ ಲೈಫ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸೀಕ್ರೇಟ್ಸ್ ಗಳು…!

in ಮನರಂಜನೆ 861 views

ಕನ್ನಡ ಕಿರುತೆರೆಯಲ್ಲಿ ಟಾಪ್ ಒನ್ ಸೀರಿಯಲ್ ಆಗಿರುವ ಗಟ್ಟಿಮೇಳ  ಧಾರಾವಾಹಿಯ ನಾಯಕಿ ಅಮೂಲ್ಯ ಅವರ ನಿಜವಾದ ಹೆಸರು ನಿಶಾ ರವಿಕೃಷ್ಣನ್. ರೌಡಿ ಬೇಬಿ ಎಂದೇ ಖ್ಯಾತಿ ಗಳಿಸಿರುವ ನಿಶಾ  ಅವರು ನಟಿ ಮಾತ್ರ ಅಲ್ಲ ಸಿಂಗರ್ ಜೊತೆಗೆ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಈ  ವಿಷಯ ಬಹಳ ಜನರಿಗೆ ಗೊತ್ತಿಲ್ಲ. ಯಾರ ತಂಟೆಗೂ ಹೋಗದ ಸಿಂಪಲ್ ಡೀಸೆಂಟ್ ಹುಡುಗಿ ನಿಶಾ . ನಿಶಾ 1994 ಜೂನ್ 9  ರಂದು ಜನಿಸಿದರು.  ನಿಶಾ  ಅವರು ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮಕ್ಕಳ  ಖಾಸಗಿ ಚಾನೆಲ್ ಒಂದರಲ್ಲಿ ಆ್ಯಂಕರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದರು. ನಿಶಾ ಅವರೇ ಖುದ್ದು ಪ್ರೋಗ್ರಾಂ ಅನ್ನು  ಪ್ಲಾನ್ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಿದ್ದಾರೆ. ಎಲ್ಲಿಯೂ ಓದಿಗೆ ತೊಂದರೆ ಮಾಡಿಕೊಂಡಿಲ್ಲ ನಾನು ಎಲ್ಲವನ್ನೂ ಸಮನಾಗಿ ಬ್ಯಾಲೆನ್ಸ್ ಮಾಡಿದ್ದೇನೆ. ಇಂದಿಗೂ ಅಷ್ಟೇ  ಬಿಕಾಂನಲ್ಲಿ ಎರಡನೇ ವರ್ಷದ ಪದವಿಯನ್ನು ಓದುತ್ತಿದ್ದೇನೆ ಆಕ್ಟಿಂಗ್ ನೊಂದಿಗೆ ಡಿಗ್ರಿ ಕಂಪ್ಲೀಟ್ ಮಾಡೋದು ಗ್ಯಾರಂಟಿ ಎಂದು ಹೇಳಿಕೊಂಡಿದ್ದಾರೆ .

Advertisement

 

Advertisement

Advertisement

ಈಗಾಗಲೇ ಗಟ್ಟಿ ಮೇಳ ಸೀರಿಯಲ್ ನ  ಕ್ಯಾರೆಕ್ಟರ್ ಸಾಕಷ್ಟು ಹೆಸರು ಮಾಡಲು ಸಹಾಯ ಮಾಡಿದೆ. ಇದಕ್ಕಿಂತ ಮುಂಚೆ ಲೋಕಲ್ ಚಾನೆಲ್ ನಲ್ಲಿ ಆ್ಯಂಕರ್ ಆಗಿ ಕೆಲಸ ಮಾಡಿದ್ದೆ ನಂತರ ಸರ್ವಮಂಗಳ ಮಾಂಗಲ್ಯೆ ಎಂಬ ಧಾರಾವಾಹಿಯಲ್ಲಿ ನಟಿಸಿದ್ದೆ ಆದರೆ ನನಗೆ ಗುರುತು ನೀಡಿದ್ದು ಹೆಸರು ತಂದುಕೊಟ್ಟಿದ್ದು ಗಟ್ಟಿ ಮೇಳ ಧಾರಾವಾಹಿ ಮತ್ತು ಅಲ್ಲಿನ ಅಮೂಲ್ಯ ಕ್ಯಾರೆಕ್ಟರ್ . ಈ ಸೀರಿಯಲ್ ನ  ಪಾತ್ರ ನನ್ನನ್ನು ಎಲ್ಲರೂ ಗುರುತಿಸುವಂತೆ ಮಾಡಿದೆ ಹೀಗಾಗಿ ಸದ್ಯಕ್ಕೆ ಕಿರುತೆರೆಯೇ ನನ್ನ ಮನೆ ಮುಂದೊಂದು ದಿನ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯಿದೆ. ನಿಶಾವರಿಗೆ ಚಾಕೋಲೇಟ್ ಎಂದರೆ ಬಹಳ ಇಷ್ಟ .  ಶ್ವಾನ ಪ್ರಿಯರಾದ ನಿಶಾರವರು ಮನೆಯಲ್ಲಿ ನಾಯಿಯನ್ನು ಸಾಕಿ ಅದಕ್ಕೆ ಬಾನಿ ಎಂಬ ಹೆಸರನ್ನು ಇಟ್ಟಿದ್ದಾರೆ. ನನಗೆ ನನ್ನ ಪ್ರೀತಿಯ ಬಾನಿ ಎಂದರೆ ತುಂಬಾ ಇಷ್ಟ  ಮತ್ತು ಲಾಂಗ್ ಡ್ರೈವ್ ಹೋಗುವುದೆಂದರೆ ತುಂಬಾ ಇಷ್ಟ. ಇದ್ದಕ್ಕಿದ್ದಂತೆ ಬರುವ ಕೋಪ ನನಗೆ ಇಷ್ಟವಿಲ್ಲ ಅದನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಎಂದು ಹೇಳಿಕೊಂಡಿದ್ದಾರೆ.

Advertisement

 

ಕನ್ನಡ ಕಿರುತೆರೆಯಲ್ಲಿ ಈಗಷ್ಟೇ ಅಭಿನಯ ಶುರು ಮಾಡಿರುವ  ನಿಶಾ ಅವರು ಎಲ್ಲರ ಮನೆ ಮನಸ್ಸುಗಳಲ್ಲಿ ತಮ್ಮದೆ  ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಿಶಾ ಅವರು ಗಟ್ಟಿ ಮೇಳ ಧಾರಾವಾಹಿಯಲ್ಲಿ ಅಮೂಲ್ಯ ಎಂಬ ರೌಡಿ ಬೇಬಿ ಪಾತ್ರಕ್ಕೂ ಅವರ ನಿಜ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ.  ಧಾರಾವಾಹಿಯ ರೌಡಿ ಬೇಬಿ ಪಾತ್ರಕ್ಕೆ  ತದ್ವಿರುದ್ಧವಾದ ಸೌಮ್ಯ ಸ್ವಭಾವ ನನ್ನದು. ನಿಶಾ ಅವರ ಅಭಿನಯ ಎಲ್ಲರಿಗೂ ಇಷ್ಟವಾಗಿದ್ದು ಅವರು ಬಹಳಷ್ಟು ಬೇಗ ಬೆಳ್ಳಿ ತೆರೆಗೆ ಪ್ರವೇಶಿಸಲಿ ಉತ್ತಮ ನಟಿಯಾಗಿ ಬೆಳೆಯಲಿ ಎಂದು ಹಾರೈಸೋಣ ನಿಮಗೂ ಇಷ್ಟವಾದಲ್ಲಿ ಕಮೆಂಟ್ ಮಾಡಿ ತಿಳಿಸಿ.

Advertisement
Share this on...