ಮನೆಮಾತಾಗಿರುವ ಗಟ್ಟಿಮೇಳ ಧಾರಾವಾಹಿಯ ಧ್ರುವ ಅವರ ಬಗ್ಗೆ ನಿಮೆಗೆಷ್ಟು ಗೊತ್ತು?

in ಕನ್ನಡ ಮಾಹಿತಿ/ಮನರಂಜನೆ 173 views

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ ಯಾರಿಗೆ ತಾನೆ ತಿಳಿದಿಲ್ಲ.  ಈಗಾಗಲೇ ಕನ್ನಡ ಕಿರುತೆರೆಯಲ್ಲಿ ದೊಡ್ಡ ಸಂಚನವನ್ನು ಸೃಷ್ಟಿ  ಮಾಡಿರುವ ಈ ಧಾರಾವಾಹಿ ಜನಪ್ರಿಯತೆಯಲ್ಲೆ ಅಗ್ರಸ್ಥಾನದಲ್ಲಿ ನಿಂತಿದೆ. ಕರುನಾಡ ಮೂಲೆ ಮೂಲೆಗಳಲ್ಲಿ ಕೂಡಾ‌ ಜನ ಮನ ಗೆದ್ದು ಯಶಸ್ಸಿನಿಂದ ಮುನ್ನುಗ್ಗುತ್ತಿರುವ ಗಟ್ಟಿಮೇಳ ಧಾರಾವಾಹಿ, ಟಿ ಆರ್ ಪಿಯಲ್ಲೂ ಕೂಡಾ ಮುಂಚೂಣಿಯಲ್ಲಿದ್ದು, ಎಲ್ಲರ ಹೆಗ್ಗಳಿಕೆಗೆ ಪಾತ್ರವಾಗಿದೆ.‌ ಇನ್ನು ಗಟ್ಟಿಮೇಳ ಧಾರಾವಾಹಿಯ ಪ್ರಮುಖ ಆಕರ್ಷಣೆ‌ ಎಂದರೆ ಧಾರಾವಾಹಿಯ ಪ್ರಮುಖ ಪಾತ್ರಗಳು. ಪ್ರತಿ ಪಾತ್ರಕ್ಕೂ ಅದರದೇ ಆದ ಮಹತ್ವ ಇದ್ದು ಜನರ ಮನಸ್ಸಿಗೆ ಹತ್ತಿರವಾಗಿದೆ. ವಿಶೇಷ ಎಂದರೆ ಕಳೆದ ಕೆಲವೇ ಕೆಲವು ತಿಂಗಳುಗಳ ಹಿಂದೆ ಈ ಧಾರಾವಾಹಿಗೆ ಪ್ರವೇಶಿಸಿದ ಹೊಸ ಪಾತ್ರವೊಂದು ಇದೀಗ ಜನರ ಗಮನ ಸೆಳೆದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಆ ಪಾತ್ರ ಕೂಡಾ ಗಟ್ಟಿಮೇಳ ಧಾರಾವಾಹಿಯ ಪ್ರಮುಖ ಪಾತ್ರಗಳಿಗೆ ತಕ್ಕಂತೆ ಮಿಂಚುತ್ತಿದ್ದು, ಜನರ‌ ಮನಸ್ಸನ್ನು ಬಹುಬೇಗ ಗೆದ್ದು ಬಿಟ್ಟಿದೆ.

Advertisement

Advertisement

ಗಟ್ಟಿಮೇಳ ಧಾರಾವಾಹಿಯ ಹೊಸ ಪಾತ್ರದ ಹೆಸರು ಧ್ರುವ ವಸಿಷ್ಠ ಎಂದು. ಇವರ ನಿಜವಾದ ಹೆಸರು ರಂಜಿತ್. ಹೊಸಬರು  ಎನ್ನುವುದಕ್ಕಿಂದ ಕೆಲವೇ ಕೆಲವು ದಿನಗಳಲ್ಲಿ ಜನರ ಪ್ರೀತಿ ಗೆದ್ದ ಪಾತ್ರ ಎಂದು ಹೇಳಿದರೆ ಕಂಡಿತ ತಪ್ಪಾಗಲಾರದು. ನಾಯಕ ವೇದಾಂತ್ ವಸಿಷ್ಠ ಪಾತ್ರಧಾರಿಯ ತಮ್ಮನ ಪಾತ್ರದಲ್ಲಿ ಮಿಂಚುತ್ತಿದ್ದು, ಅವರ ನಟನೆ, ಅವರ ಮಾತು ಎಲ್ಲವೂ ಕೂಡಾ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.  ಇನ್ನು ಧ್ರುವ ಪಾತ್ರಧಾರಿ ರಂಜನ್ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ಚಿಕ್ಕ ವಯಸ್ಸಿನಿಂದಲೂ ನಟನೆಯ ಮೇಲೆ ಅಪಾರ ಒಲವನ್ನು ಹೊಂದಿದ್ದ ಅವರು, ನಟನೆಯಲ್ಲಿ ಏನಾದರು ಸಾಧನೆ ಮಾಡಬೇಕೆಂಬ ಆಶಯ ಅವರನ್ನು 2017 ರಲ್ಲಿ ನಾಗಾಭರಣ ಅವರ ಅಭಿನಯ ಶಾಲೆಯ ಕಡೆಗೆ ನಡೆಸಿತು. ಆ ನಂತರ ಸಿನಿಮಾಗಳಲ್ಲಿ ಅವರು ಸಹ ಕಲಾವಿದನಾಗಿ ಕೂಡಾ ನಟಿಸಿದ್ದಾರೆ. ಕಿರುತೆರೆಯಲ್ಲಿ ರಂಜನ್ ಅವರು ಇಷ್ಟ ದೇವತೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದವರು.

Advertisement

ಹೀಗೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯವಾಗಿದ್ದ  ರಂಜನ್ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿದ್ದು  ಗಟ್ಟಿಮೇಳ ಧಾರಾವಾಹಿಯ ಧ್ರುವ ಪಾತ್ರ. ಜನರು ಇದೀಗ ರಂಜನ್ ಅವರನ್ನು ಧೃವ ಎಂದೇ ಗುರುತಿಸುತ್ತಿದ್ದು , ಇದು ಧ್ರುವ ಪಾತ್ರಕ್ಕೆ ಸಿಕ್ಕಿರುವ ಮನ್ನಣೆಗೆ ಉದಾಹರಣೆಯಾಗಿದೆ. ಇನ್ನು ರಂಜನ್ ಅವರು ಸಿನಿಮಾ‌ ವಿಚಾರಕ್ಕೆ  ಬಂದರೆ  ಅವರಿಗೆ ಪ್ರೇರಣೆ ಆಗಿರುವ ಕನ್ನಡದ ಹೆಮ್ಮೆಯ  ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು.

Advertisement

ನೋಡಲು ಪಕ್ಕಾ ಸಿನಿಮಾ ಹೀರೋ ತರ ಕಾಣುವ ರಂಜನ್ ಅವರು ಗಟ್ಟಿಮೇಳದ ಧ್ರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮದ್ಯಮ ವರ್ಗದ ಕುಟುಂಬದೊಡೆನೆ ಬೆರೆತಿರುವ ಆ ಪಾತ್ರದಲ್ಲಿ ರಂಜನ್ ಅವರ‌ ನಟನೆ ಹಾಗೂ ಮಾತು ಸಾಮಾನ್ಯವಾಗಿ ಎಲ್ಲಾ ಮದ್ಯಮ ವರ್ಗದ ಮನೆಗಳಲ್ಲಿ ಇರುವಂತೆ ಇದ್ದು, ಅದೇ ಬಹುಬೇಗ ಅವರತ್ತ ಗಮನ ಸೆಳೆಯುವಂತೆ ಮಾಡಿದೆ. ಇವರ ಈ  ಪಾತ್ರವು ಇಂದಿನ ಯುವ ಪೀಳಿಗೆಗಳು  ಯಾವುದೇ ಕೆಲಸ ಮಾಡಬೇಕಾದರೆ  ಶ್ರಮ ಮತ್ತು ಮನಸ್ಸಿಟ್ಟು ಮಾಡಬೇಕು ಎಂಬುದನ್ನು ತೋರಿಸುತ್ತದೆ. ಒಟ್ಟಾರೆ ಅಲ್ಪ ಸಮಯದಲ್ಲೇ ತಮ್ಮ ಪಾತ್ರದ ಮೂಲಕ ಬಹು ದೊಡ್ಡ  ಅಭಿಮಾನಿಗಳ ಮನ ಗೆದ್ದಿರುವ ರಂಜನ್ ಅವರ ಹಾದಿ ಸುಗಮವಾಗಿರಲಿ ಎಂದು ಹಾರೈಸೋಣ …

Advertisement
Share this on...