ಗಟ್ಟಿಮೇಳ ದ್ರುವನ ನಿಜಜೀವನದ ಕಥೆ ಗೊತ್ತಾ?

in actor 94 views

ಈಗ ಯಾವುದೇ ಕ್ಷೇತ್ರದಲ್ಲಿಯೇ ಆಗಲಿ ಅವಕಾಶಕ್ಕೇನು ಕೊರತೆ ಇಲ್ಲ. ಸರಿಯಾದ ಪ್ರತಿಭೆ ಇದ್ದರೆ ಸಾಧನೆ ಮಾಡಲು ಬೇಕಾದಷ್ಟು ಅವಕಾಶಗಳಿವೆ. ಇದು ಬಣ್ಣದ ಲೋಕಕ್ಕೂ ಅನ್ವಯಿಸುತ್ತೆ. ಕಿರುತೆರೆಯಾಗಲಿ, ಸಿನೆಮಾವಾಗಲಿ ಅವಕಾಶಕ್ಕೇನು ಕೊರತೆ ಇಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಅಷ್ಟೆ. ತಮ್ಮ ಎಲ್ಲ ಶ್ರಮ ಉಪಯೋಗಿಸಿ ಮನೋಜ್ಞವಾಗಿ ನಟಿಸಿ ಜನರ ಮನಸ್ಸು ಗೆಲ್ಲಬೇಕು. ಆಗ ಇನ್ನಷ್ಟು ಅವಕಾಶಗಳು ತನ್ನಿಂದ ತಾನೆ ಹುಡುಕಿಕೊಂಡು ಬರುತ್ತದೆ. ಕಿರುತೆರೆಯಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ. ಈಗಿಗ ಸಾಕಷ್ಟು ಪ್ರತಿಭೆ ಇರುವ ಜನರೇ ಬಣ್ಣದ ಲೋಕಕ್ಕೇ ಬರುತ್ತಿದ್ದಾರೆ. ಮೊದಲ ಅವಕಾಶದಲ್ಲೇ ಜನಮನ ಗೆದ್ದು ಮನೆಮಗನಂತಾಗಿದ್ದಾರೆ. ಹೀಗೆ ಜನಮನ ಗೆದ್ದ ಕಲಾವಿದರಲ್ಲಿ ರಂಜನ್ ಸನತ್ ಕೂಡಾ ಒಬ್ಬರು.

Advertisement


ರಂಜನ್ ಸನತ್ ಎಂದರೆ ಯಾರು ಎಂದು ನಿಮಗೆ ತಿಳಿಯಿತಾ? ಆದರೆ ಜೀ ಕನ್ನಡ ವಾಹಿನಿಯ ಟಾಪ್ ರೇಟೆಡ್ ಸಿರಿಯಲ್‌ಗಳಲ್ಲಿ ಒಂದಾದ ಗಟ್ಟಿಮೇಳ ಧಾರಾವಾಹಿಯ ದ್ರುವ ಎಂದರೆ ಆತನ ಹ್ಯಾಂಡಸಮ್ ಮುಖ ತಕ್ಷಣ ನಿಮ್ಮ ಕಣ್ಣಮುಂದೆ ಬರುತ್ತದೆ. ಗಟ್ಟಿ ಮೇಳ ಧಾರಾವಾಹಿಯು ಪ್ರಾರಂಭದಿಂದಲೂ ಟಿಆರ್‌ಪಿಯಲ್ಲಿ ನಂಬರ್ ೧ ಸ್ಥಾನ ಕಾಪಾಡಿಕೊಂಡು ಬಂದಿತ್ತು. ನಂತರ ಅದು ಜೊತೆ ಜೊತೆಯಲಿ, ಹಿಟ್ಲರ್ ಕಲ್ಯಾಣ ಸದ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪಾಲಾಗಿದೆ. ಆದರೂ ಗಟ್ಟಿಮೇಳ ಧಾರಾವಾಹಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಅದರೂ ಕಿರುತೆರೆಯಲ್ಲಿ ಟಾಪ್ ರೇಟೆಡ್ ಧಾರಾವಾಹಿಗಳಲ್ಲಿ ಇದು ಒಂದು ಎಂದರೆ ತಪ್ಪಾಗಲ್ಲ.

Advertisement


ಗಟ್ಟಿಮೇಳ ಧಾರಾವಾಹಿಯಲ್ಲಿ ಕಥಾನಾಯಕ ವೇದಾಂತ ವಸಿಸ್ಠ. ಇತ ದೊಡ್ಡ ಬ್ಯುಸಿನೆಸ್ ಮನ್. ಈತನಿಗೆ ಇಬ್ಬರು ಸಹೋದರು ಹಾಗೂ ಒಬ್ಬಳು ತಂಗಿ ಇರುತ್ತಾಳೆ. ಮೊದಮೊದಲು ಈತನಿಗೆ ಹುಡುಗಿಯರನ್ನು ಕಂಡರೆ ಆಗುತ್ತಿರಲಿಲ್ಲ. ನಂತರ ಅಮೂಲ್ಯ ವೇದಾಂತ್‌ನ ಬದಲಾಯಿಸಿ ಮದುವೆ ಆಗುತ್ತಾಳೆ. ವೇದಾಂತ್ ಬದಲಾಗಲು ಕಾರಣವಾಗಿದ್ದು ಆತನ ತಮ್ಮ ವಿಕ್ರಾಂತ್ ವಸಿಸ್ಠ ಮದುವೆ. ವಿಕ್ಕಿ ಅಮೂಲ್ಯಳ ಅಕ್ಕ ಆರತಿಯನ್ನು ಪ್ರೀತಿಸುತ್ತಾನೆ. ಆತನ ಪ್ರೀತಿಯನ್ನು ಒಂದು ಮಾಡಲು ಹೋಗಿ ವೇದಾಂತ್ ಅಮೂಲ್ಯ ಪ್ರೀತಿಯಲ್ಲಿ ಬೀಳುತ್ತಾರೆ. ನಂತರ ಮನೆಯವರನ್ನೆಲ್ಲ ಒಪ್ಪಿಸಿ ಮದುವೆ ಆಗುತ್ತಾರೆ. ಆದರೆ ವೇದಾಂತ್‌ನ ತಾಯಿಗೆ ಬಡವರ ಮನೆಯ ಹೆಣ್ಣನ್ನು ಮದುವೆ ಆಗುವುದು ಇಷ್ಟವಿರುದಿಲ್ಲ. ಹಾಗಾಗಿ ನಾನಾ ರೀತಿಯಲ್ಲಿ ತಪ್ಪಿಸಲು ನೋಡುತ್ತಾಳೆ. ಆದರೂ ವೇದಾಂತ್ ಅಮೂಲ್ಯಳ ಮದುವೆ ಆಗುತ್ತಾನೆ. ಇತನ ತಮ್ಮ ದ್ರುವ. ಮೊದಲು ದ್ರುವನನ್ನು ಕಂಡರೆ ಆಗುವುದಿಲ್ಲ. ಕೆಲ ಕಾರಣಗಳಿಗಾಗಿ ದ್ರುವನನ್ನು ದ್ವೇಷಿಸುತ್ತಾ ಇರುತ್ತಾನೆ. ಅಮೂಲ್ಯ ದ್ರುವ ಹಾಗೂ ವೇದಾಂತ್‌ನನ್ನು ಒಂದು ಮಾಡುತ್ತಾಳೆ. ಹೀಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದು ಕಥೆ ಸಾಗುತ್ತಿದೆ. ಒಳ್ಳೆಯ ಟಿಆರ್‌ಪಿ ಗಳಿಸುತ್ತಿದೆ.

Advertisement

Advertisement

ದ್ರುವನ ಪಾತ್ರದಾರಿ ರಂಜನ್ ಸನತ್ ಅವರು ಮೂಲತಹ ಮಂಡ್ಯದವರು. ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಮಂಡ್ಯ ಜಿಲ್ಲೆಯಲ್ಲಿಯೆ. ಮೊದಲಿನಿಂದಲೂ ರಂಜನ್ ಅವರಿಗೆ ತಾನೊಬ್ಬ ಒಳ್ಳೆಯ ನಟನಾಗಬೇಕು ಎಂಬ ಹಂಬಲವಿತ್ತು. ನೋಡಲು ಕೂಡ ಸಾಕಷ್ಟು ಹ್ಯಾಂಡಸಮ್ ಆಗಿರುವ ರಂಜನ್ ಅವರು ಬಣ್ಣದ ಲೋಕಕ್ಕೆ ಬರುವ ಮೊದಲು ಅದಕ್ಕೆ ಬೇಕಾದ ತಯಾರಿ ನಡೆಸಿದ್ದಾರೆ. ೨೦೧೭ರಲ್ಲಿ ಹಿರಿಯ ನಿರ್ದೇಶಕ, ನಟ ನಾಗಾಭರಣ ಅವರು ನಡೆಸುತ್ತಿರುವ ಅಭಿನಯ ಶಾಲೆಯಲ್ಲಿ ನಟನೆಯ ಕುರಿತು ತರಬೇತಿ ಪಡೆದಿದ್ದಾರೆ. ತರಬೇತಿ ಪಡೆಯುತ್ತಿರುವ ಸಮಯದಲ್ಲಿಯೇ ಚಿಕ್ಕಪುಟ್ಟ ಪಾತ್ರಗಳು ರಂಜನ್ ಅವರಿಗೆ ಬರಲಾರಂಭಿಸಿತು. ರಂಜನ್ ಅವರು ಪೂರ್ಣ ಪ್ರಮಾಣದ ನಟನಾಗಿ ಮೊದಲು ಕಾಣಿಸಿಕೊಂಡಿದ್ದು ಇಷ್ಟದೇವತೆ ಧಾರಾವಾಹಿಯಲ್ಲಿ ಖಳನಾಯಕನಾಗಿ.

ರಂಜನ್ ಅವರನ್ನು ಜನರು ಗುರುತಿಸಿದ್ದು, ಇಷ್ಟಪಟ್ಟಿದ್ದು ಮಾತ್ರ ಗಟ್ಟಿಮೇಳದ ಮೂಲಕ. ಗಟ್ಟಿಮೇಳ ಧಾರಾವಾಹಿಯ ದ್ರುವನ ಪಾತ್ರ ರಂಜನ್ ಅವರ ಬದುಕಿನ ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಾಗಲ್ಲ. ಈ ಮೊದಲು ಹಲವಾರು ಸಿನೆಮಾಗಳಲ್ಲಿ ರಂಜನ್ ಅವರು ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇವರು ಬಣ್ಣದ ಲೋಕಕ್ಕೆ ಕಾಲಿಡಲು ನಮ್ಮ ಅಪ್ಪು ಬಾಸ್, ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಅವರು ಪ್ರೇರಣೆ. ಇಷ್ಟದೇವತೆ ಧಾರಾವಾಹಿಯ ವಸಿಸ್ಠ ದೇಶಾದ್ರಿ ಎನ್ನವು ಖಳನಾಯಕನ ಪಾತ್ರವು ಜನರಿಗೆ ಇಷ್ಟವಾಗಿತ್ತು. ಆದರೆ ರಂಜನ್ ಅವರಿಗೆ ಬ್ರೇಕ್ ನೀಡಿದ್ದು ಗಟ್ಟಿಮೇಳ ಧಾರಾವಾಹಿ.

Advertisement
Share this on...