ದಿಗ್ಗಜರೊಂದಿಗೆ ನಟಿಸಿ ಸೈ ಅನಿಸಿಕೊಂಡ ನಟಿ ಗೀತಾ ಅವರು ಈಗ ಹೇಗಿದ್ದಾರೆ ಗೊತ್ತಾ ?

in ಸಿನಿಮಾ 402 views

ಸುಮಾರು ಎಂಬತ್ತು ತೊಂಬತ್ತರ ದಶಕದಲ್ಲಿ ನಟಿಸಿದ ನಟಿಯರಲ್ಲಿ ನೆನಪಾಗುವುದು ಹಾಲು ಬಣ್ಣದ ಚೆಲುವೆ ಗೀತಾ.  ಕನ್ನಡ ಸಿನಿಮಾ ರಂಗದಲ್ಲಿ ಹಲವಾರು ಸಿನಿಮಾ ದಿಗ್ಗಜರೊಂದಿಗೆ ನಾಯಕ ನಟಿಯಾಗಿ ನಟಿಸಿ ಸೈ ಅನಿಸಿಕೊಂಡವರು ಗೀತಾ. ಇವರು ಅಪ್ಪಟ ಕನ್ನಡದ ನಟಿ ನೋಡಲು  ತುಂಬಾ ಸುಂದರವಾಗಿದ್ದರು. ಮುಟ್ಟಿದ್ದೆಲ್ಲ  ಚಿನ್ನ ಎಂಬಂತೆ ಅವರು ನಟಿಸಿದ  ಸಿನಿಮಾಗಳಲ್ಲಾ ಸೂಪರ್ ಹಿಟ್ ಆಗಿದ್ದವು. ಗೀತಾ ಎಂದಾಕ್ಷಣ ನೆನಪಾಗುವುದು  ರಾಜ್ ಕುಮಾರ್  ಅವರ ಜೊತೆ  ಆಕಸ್ಮಿಕ,   ರೆಬೆಲ್ ಸ್ಟಾರ್ ಅಂಬರೀಶ್ ಅವರ ಜೊತೆ ನಟಿಸಿದ ಮೃಗಾಲಯ, ಸಿಡಿಲು,  ಅರ್ಜುನ್,   ಶಂಕರ್ ನಾಗ್ ರವರ ಜೊತೆ ನಟಿಸಿದ ನಾಗಿಣಿ  ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಇಂತಹ  ಗೀತಾ  ಸಿನಿಮಾ   ರಂಗದಿಂದ ದೂರವಾಗಿದ್ದು ಏಕೆ ಮತ್ತು ಈಗ ಅವರು ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

Advertisement

 

Advertisement

Advertisement

ಗೀತಾ ರವರು 1962  ಜುಲೈ 14 ರಂದು  ಜನಿಸಿದರು ಇವರು ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ತಮಿಳು ತೆಲುಗು ಮಲಯಾಳಂ ನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು  ಚಿತ್ರಗಳಲ್ಲಿ  ನಟಿಸಿದ್ದಾರೆ.  ಬಹಳ ದಿನಗಳಿಂದ ಕನ್ನಡ ಚಿತ್ರರಂಗದಿಂದ ದೂರವಿದ್ದ ಗೀತಾ ರವರು ಸ್ವಲ್ಪ  ಸಮಯದ ನಂತರ  ಹಳ್ಳಿ ಪಂಚಾಯ್ತಿ ಎಂಬ ಸಿನಿಮಾದಲ್ಲಿ ರೈತ ಮಹಿಳೆಯಾಗಿ ಅದ್ಭುತವಾಗಿ ನಟಿಸಿದರು.  ನಂತರ ಗೀತಾ ರವರು 1997 ರಲ್ಲಿ ವಾಸನ್ ಎಂಬವರ ಜೊತೆ ಮದುವೆಯಾದರು. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ. ಕನ್ನಡದ ಬದುಕು ಜಟಕಾ ಬಂಡಿ ಕಾರ್ಯಕ್ರಮದ ರೀತಿ  ತೆಲಗಿನಲ್ಲಿ  ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.  ಇವರು ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಲು ತನಗೆ ತುಂಬಾ ಆಸೆ ಇದೆ   ಎಂದು ಹೇಳಿಕೊಂಡಿದ್ದಾರೆ.

Advertisement

 

ಆದರೆ ಕನ್ನಡ ಚಿತ್ರರಂಗದ ನಿರ್ದೇಶಕರು ನಿರ್ಮಾಪಕರು ತನಗೆ ಸರಿಯಾದ ಪಾತ್ರವನ್ನು ಕೊಟ್ಟಿಲ್ಲ.  ಒಂದು ವೇಳೆ ಒಳ್ಳೆಯ ಪಾತ್ರಗಳನ್ನು ಕೊಟ್ಟರೆ ತನ್ನ ಸ್ವಂತ ಹಣದಿಂದ ವಿದೇಶದಿಂದ ಭಾರತಕ್ಕೆ ಬಂದು ನಟಿಸುವುದಾಗಿ ಗೀತಾ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ.  ಮದುವೆಯಾದ ಮೇಲೆ ಅಮೆರಿಕದಲ್ಲಿ ಗೀತಾ  ನೆಲೆಸಿದ್ದಾರೆ . ಆದರೂ ಸಹ ಕನ್ನಡದ ಮೇಲಿನ ಪ್ರೀತಿ ಸ್ವಲ್ಪವೂ ಕಡಿಮೆಯಾಗಿಲ್ಲ.

Advertisement
Share this on...