ಸರಕಾರಿ ಕೆಲಸ ಸಿಗಬೇಕು ಎಂದರೆ ನಿಮ್ಮ ಜಾತಕದಲ್ಲಿ...!? - Namma Kannada Suddi
ravishanker guruji

ಸರಕಾರಿ ಕೆಲಸ ಸಿಗಬೇಕು ಎಂದರೆ ನಿಮ್ಮ ಜಾತಕದಲ್ಲಿ…!?

in ಜ್ಯೋತಿಷ್ಯ 1,028 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ  ಪಕ್ಷದ ಏಕಾದಶಿ ತಿಥಿ, ಶತಭಿಷಾ ನಕ್ಷತ್ರ,  ಧ್ರುವ ಯೋಗ,  ಭದ್ರಂಕ್ ಕರಣ, ಅಕ್ಟೋಬರ್ 27  ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

Advertisement

ಸರಕಾರಿ ಕೆಲಸ ಸಿಗಬೇಕು ಎಂದರೆ ನಿಮ್ಮ ಜಾತಕದಲ್ಲಿ ಸೂರ್ಯ ಮತ್ತು ಶನಿಯ ಸಂಗಮ, ದೃಷ್ಟಿ ತ್ರಿಕೋನ, ಕೇಂದ್ರಭಾವ ಸೇರಿದ್ದರೆ ನಿಮಗೆ ಅಂತಹದೊಂದು ಶಕ್ತಿ ದೊರೆಯುತ್ತದೆ. ಸೂರ್ಯ ಎಂದರೆ ಆತ್ಮಕಾರಕ, ಸರ್ಕಾರ ಕಾರಕ, ರಾಜಕಾರಕ, ಆಡಳಿತ ಕಾರಕ, ಲೀಡರ್ ಕಾರಕ, ಸೂರ್ಯನ ಬಲವಿಲ್ಲದೆ ಇದ್ದರೆ ನಿಮಗೆ ಸರ್ಕಾರಿ ಕೆಲಸ ಸಿಗುವುದಿಲ್ಲ.  ಯೋಗ್ಯತೆ ಇದ್ದರೂ ಕೂಡ ಯೋಗವಿಲ್ಲ ಎಂದಾದರೆ ನಿಮಗೆ ಸರಕಾರಿ ಕೆಲಸ  ಸಿಗುವುದಿಲ್ಲ ಇದಕ್ಕೆ ಕಾರಣ ಸೂರ್ಯನ ಮೇಲೆ ಬೇರೆ ಗ್ರಹಗಳ ವಕ್ರದೃಷ್ಟಿ ಈಗೇನಾದರೂ ಆಗಿದ್ದರೆ ಪ್ರತಿ ತಿಂಗಳು ಬರುವ ಪ್ರದೋಶದಲ್ಲಿ ಅಂದರೆ (ಹುಣ್ಣಿಮೆ ಮತ್ತು ಅಮವಾಸ್ಯೆಯ 2 ದಿನದ ಹಿಂದೆ ಬರುತ್ತದೆ ) ತ್ರಯೋದಶಿಯ ದಿನದಂದು ಶಿವನ ದೇವಸ್ಥಾನಕ್ಕೆ ಹೋಗಿ ಸಂಕಲ್ಪ ಪೂಜೆ ಮಾಡಿಕೊಳ್ಳಿ. 3ಕೆಜಿ ರವೆ, 3ಕೆಜಿ ಗೋಧಿ, 1ಕೆಂಪು ವಸ್ತ್ರ ,3ಕೆಜಿ ಬೆಲ್ಲ, ಹಣ್ಣು, ತಾಂಬೂಲ, ಕೆಂಪು ಪುಷ್ಪಗಳು (ನಿಮ್ಮ ಕೈಯಲ್ಲಿ ಆಗದಿದ್ದರೆ ಒಂದೊಂದು ಕೆಜೆಯನ್ನಾದರೂ ಕೊಡಬಹುದು) ಮುಳ್ಳಿಲ್ಲದ ಕೆಂಪು ಗುಲಾಬಿ ಮತ್ತು ಕೆಂಪು ದಾಸವಾಳ ಹೂ ವನ್ನು ಕೊಡಬಹುದು. ಯಾವುದೇ ಕಾರಣಕ್ಕೂ ಚೆಂಡು ಹೂವು ಮತ್ತು ಕನಕಾಂಬರ ಹೂಗಳನ್ನು ಕೊಡಬಾರದು. ಪ್ರತಿ ಆದಿತ್ಯವಾರದಂದು ತಪ್ಪದೆ ಸೂರ್ಯ ಪೂಜೆಯನ್ನು ಮಾಡಿಕೊಳ್ಳಿ.

Advertisement

Advertisement

ಆದಿತ್ಯ ಹೃದಯ ಸ್ತೋತ್ರವನ್ನು ಆಲಾಪನೆ ಮಾಡಿ ಇಲ್ಲವೇ ಪಠಣ ಮಾಡಿ. ಆದಿತ್ಯ ಹೃದಯ ಸ್ತೋತ್ರವನ್ನು ಕೇಳುತ್ತಾ 1ಬಟ್ಟಲಿಗೆ ಓಂ ಆದಿತ್ಯಾಯ ನಮಃ ಎಂದು ಹೇಳತ್ತಾ ಒಂದೊಂದಾಗಿ ನೂರೆಂಟು ಮೆಣಸಿನಕಾಯಿಯನ್ನು ಹಾಕಿ. ಪೂಜೆ ಆದ ಮೇಲೆ ಆ ಮೆಣಸಿನಕಾಯಿಯ ಜೊತೆಗೆ ಹದಿನಾರು ರೂಪಾಯಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಹಾಕಿ, ಸ್ವಲ್ಪ ಕೆಂಪು ಬೇಳೆ ಮತ್ತು ಬೆಲ್ಲವನ್ನು ಸೇರಿಸಿ, ಗೋಧಿ ಅಥವಾ ಗೋಧಿ ಹಿಟ್ಟನ್ನು ಸ್ವಲ್ಪ ಸೇರಿಸಿ, ಬಡವರಿಗೆ ದಾನ ಮಾಡುತ್ತ ಬನ್ನಿ. ಅದರ ಜತೆಯಲ್ಲಿ ಸೂರ್ಯ ಯಂತ್ರವನ್ನು ಧರಿಸಿ. ಯೋಗ್ಯತೆ ಇದ್ದರೂ ಯೋಗವಿಲ್ಲ ಎಂದು ಕೊರಗುತ್ತಿದ್ದೀರಾ, ಒಳ್ಳೆ ತಂದೆ ಯಾಗಲಿಲ್ಲ, ಅಧಿಕಾರವಿದ್ದರೂ ಅನುಭವಿಸಲಾಗುತ್ತಿಲ್ಲ, ಎಂಬ ಚಿಂತೆಯಿಂದ ಒದ್ದಾಡುತ್ತಿದ್ದರೆ ಅಂಥವರಿಗೊಂದು ಬ್ರಹ್ಮಾಸ್ತ್ರ  ಸೂರ್ಯ ಯಂತ್ರ. ಈ ಯಂತ್ರವನ್ನು ಧರಿಸುವ ಮೂಲಕ ನಿಮ್ಮ ಯೋಗ್ಯತೆಗೆ ತಕ್ಕಂತ ಯೋಗವನ್ನು ನೀವು ಅನುಭವಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋವನ್ನು ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ರಾಹು ಪ್ರಬಾವವಿದೆ,  ರಾಹು ಮೇಲೆ ಕುಜನ ಪ್ರಭಾವವಿರುವುದರಿಂದ ಒಳ್ಳೆಯವರು ಕೆಟ್ಟವರಾಗುತ್ತಾರೆ,  ಕೆಟ್ಟವರು ಒಳ್ಳೆಯವರಾಗುತ್ತಾರೆ  ಎಂಬ ಕನ್ ಫ್ಯೂಸನ್ ಇರುತ್ತದೆ. ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಮಾತು ಇಂದು ಬೆಂಕಿ ಆಗಿರುತ್ತದೆ.

ವೃಷಭ ರಾಶಿ : ಪ್ರಾಯಾಸಪಟ್ಟು ಭೂಮಿ ವಾಹನವೊಂದನ್ನ ಪಡೆಯುವಂತಹ ಸುದಿನ.

ಮಿಥುನ ರಾಶಿ : ದೂರ ಪ್ರಯಾಣದಲ್ಲಿ ತೊಂದರೆ ವಿಘ್ನ ಕಂಟಕ ಎಚ್ಚರಿಕೆ. ಆರೋಪಕ್ಕೆ ಸಂಬಂಧಪಟ್ಟಂತೆ ಅದರಲ್ಲೂ ಹೃದಯ ಗಂಟಲು ಸಂಬಂಧಪಟ್ಟಂತೆ ಕಾಯಿಲೆಗಳಿದ್ದರೆ ಎಚ್ಚರಿಕೆ. ಆರೋಗ್ಯದ ಕಡೆ ಗಮನ ಕೊಡಿ. ಶಂಕರಾಮೃತವನ್ನು ಸೇವಿಸಿ.

ಕರ್ಕಾಟಕ ರಾಶಿ : ವೃತ್ತಿಪರವಾಗಿ ಲಾಭಕರವಾಗಿರುವಂತಹ ದಿನ.

ಸಿಂಹ ರಾಶಿ : ಪ್ರಯತ್ನದಿಂದ ಪರಿಶ್ರಮದಿಂದ ಯಶಸ್ಸನ್ನು ನೋಡುವಂತಹ ದಿನ. ಆದರೆ ಪರಿಶ್ರಮ ಜಾಸ್ತಿ ಇರುತ್ತದೆ. ಮನೆಯಲ್ಲಿ ಜೋಡಿ ಆನೆಗಳೊಂದನ್ನ ತಂದಿಟ್ಟುಕೊಳ್ಳಿ.

ಕನ್ಯಾ ರಾಶಿ : ಚೆನ್ನಾಗಿದೆ,  ತೊಂದರೆಯೇನೂ ಇಲ್ಲ. ಯಾವುದೋ 1 ಭೂಮಿಯ ಚಿಂತನೆ, ವಾಹನದ ಚಿಂತನೆ,ಸೋದರ ಚಿಂತನೆಯಿಂದ ಗಡಿಬಿಡಿ ಆಗುತ್ತೀರಾ, ಸಮಸ್ಯೆಯೇನೂ ಆಗುವುದಿಲ್ಲ ಗೆಲುವು ನಮ್ಮದೇ.

ತುಲಾ ರಾಶಿ : ಸ್ವಲ್ಪ ಮಕ್ಕಳ ಕಡೆ ಗಮನ ಕೊಡಿ. ಮಕ್ಕಳನ್ನು ಮಕ್ಕಳಾಗಿ ಇರಲು ಬಿಡಿ. ಸಕ್ಕರೆಯಲ್ಲಿ ಸಿಹಿ ಹೇಗೆ ತುಂಬಿರುತ್ತದೋ ಹಾಗೆ ಮಕ್ಕಳಿಗೆ ಜನ್ಮತಃ ಎಲ್ಲವೂ ಬಂದಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮಕ್ಕಳ ಮೇಲೆ ಓವರ್ ಎಕ್ಸ್ ಪೆಕ್ಟೇಶನ್ ಇಟ್ಟುಕೊಳ್ಳಬೇಡಿ ಜಾಗ್ರತೆ.

ವೃಶ್ಚಿಕ ರಾಶಿ : ಚೆನ್ನಾಗಿದೆ ಸೋದರ ಸೋದರಿ ವರ್ಗದ ಜವಾಬ್ದಾರಿಯೊಂದು ನಿಮ್ಮ ಹೆಗಲಿಗೇರುತ್ತದೆ. ನಿಮಗೆ ದೇವರು ಬಲ ಕೊಟ್ಟಿದ್ದಾನೆ ಅದನ್ನು ಸದುಪಯೋಗ ಮಾಡಿಕೊಳ್ಳಿ

ಧನಸ್ಸು ರಾಶಿ : ಇಂಜಿನಿಯರಿಂಗ್, ಮೆಕಾನಿಕಲ್, ಪೋಲಿಸ್, ಡಿಪಾರ್ಟ್ಮೆಂಟ್, ರಕ್ಷಣಾ ಇಲಾಖೆ ಅಭಿವೃದ್ಧಿಯ ಸಂಕೇತ.

ಮಕರ ರಾಶಿ : ಆತುರದ ನಿರ್ಧಾರಗಳಿಂದ ಎಡವಟ್ಟು ಅನುಭವಿಸತ್ತೀರ ಎಚ್ಚರಿಕೆ, ರಿಯಲ್ ಎಸ್ಟೇಟ್, ಇಲ್ಲೀಗಲ್ ಕೆಲಸ, ಕಾಂಟ್ರ್ಯಾಕ್ಟ್ ಗಳಿಂದ ಎಡವಟ್ಟುಂಟು ಎಚ್ಚರಿಕೆ.

ಕುಂಭ ರಾಶಿ : ತಾಯಿಯ ಆರೋಗ್ಯದ ಕಡೆ ಗಮನ ಕೊಡಿ, ಎಲ್ಲಾ ಕಡೆ ನಿಮೋನಿಯಾ ಹರಡುತ್ತಿದೆ ಆದಷ್ಟು ಎಸಿಯನ್ನು ಕಡಿಮೆಮಾಡಿ, ಫ್ಯಾನ್ ಬಳಸಿ, ಬಿಸಿ ನೀರನ್ನು ಬಳಸಿ, ನಿತ್ಯ ರಸಂ ಸೇವಿಸಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಶಂಕರಾಮೃತವನ್ನು ಬಳಸಿ.

ಮೀನ ರಾಶಿ : ಕಷ್ಟಪಟ್ಟರೆ ಸುಖ ಉಂಟು, ನಿಮ್ಮ ಕಷ್ಟಾರ್ಜಿತ ಕ್ಕೆ ಇಂದು ಪೂರ್ಣ ಫಲವುಂಟು. ಯಾವ ಕೆಲಸವನ್ನು ಮಾಡಬೇಕೊ ಆ ಕೆಲಸಗಳನ್ನು ಧೈರ್ಯದಿಂದ ಮಾಡಿ ಮುಂದಕ್ಕೆ ಹೆಜ್ಜೆ ಇಡಿ ಗೆಲುವು ನಿಮ್ಮದೆ.

All Rights reserved Namma  Kannada Entertainment.

Advertisement
Share this on...

Latest from ಜ್ಯೋತಿಷ್ಯ

ಜೀವನದಲ್ಲಿ ಯಶಸ್ಸು ದೊರೆಯಲೆಂದು ಹೆಸರು ಬದಲಿಸಿಕೊಂಡಿದ್ದೀರಾ…ಹಾಗಿದ್ದಲ್ಲಿ ನೀವು ಇದನ್ನು ಓದಲೇಬೇಕು

ಯಾವುದೇ ವಸ್ತುವನ್ನಾಗಲೀ, ವ್ಯಕ್ತಿಯನ್ನಾಗಲೀ ಗುರುತಿಸಲು, ಸಂಬೋಧಿಸಲು ಹೆಸರು ಎನ್ನುವುದು ಬಹಳ ಮುಖ್ಯವಾಗಿದೆ. ಹಿಂದಿನ ಕಾಲದಲ್ಲಿ ಅದರಲ್ಲೂ…

Go to Top