ಮನೆಯಲ್ಲಿ ಈ ಫೋಟೋ, ವಿಗ್ರಹಗಳನ್ನು ಇಡಬಾರದು.. ಲಕ್ಷ್ಮಿ ಸದಾ ನೆಲೆಸಿರುತ್ತಾಳೆ

in ಜ್ಯೋತಿಷ್ಯ 2,645 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ಸಪ್ತಮಿ ತಿಥಿ,   ಆರಿದ್ರಾ ನಕ್ಷತ್ರ, ಪರಿಕ ಯೋಗ, ಬಾಲವ  ಕರಣ, ಅಕ್ಟೋಬರ್ 09  , ಶುಕ್ರ ವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯಾಹ್ನ 1 ಗಂಟೆ 46 ನಿಮಿಷದಿಂದ 3 ಗಂಟೆ 29 ನಿಮಿಷದವರೆಗೂ ಇದೆ.

Advertisement

ಮನೆಯಲ್ಲಿ ದೊಡ್ಡ ದೊಡ್ಡ ವಿಗ್ರಹಗಳನ್ನು ಇಡಬಾರದು,  ಉಗ್ರ ರೂಪದ ಫೋಟೋಗಳನ್ನು ಕೂಡ ಇಡಬಾರದು,  ಇದರಿಂದ ಮನೆಯಲ್ಲಿ ನಿತ್ಯ ಕಲಹ ಉಂಟಾಗುತ್ತದೆ. ಗಾಜು ಒಡೆದಿರುವ ಗೆದ್ದ ಹಿಡಿದಿರುವ ಧೂಳು ಹಿಡಿದಿರುವ ಫೋಟೋಗಳನ್ನು ಪೂಜೆಗೆ  ಇಡಬಾರದು.  ಯಾವ ಸ್ತ್ರೀ ಮಕ್ಕಳ ಮುಂದೆ ಗಂಡನನ್ನು ಅವಮಾನಿಸುತ್ತಾಳೊ ಅಲ್ಲಿ ಆಗ ರಾಹು ಪ್ರವೇಶವಾಗಿದೆ ಎಂದರ್ಥ. ಯಾವ ಸ್ತ್ರೀ ಬೇರೆ ಜನರ ಮುಂದೆ ಗಂಡನನ್ನು ಅವಮಾನಿಸುತ್ತಾಳೊ ಅಲ್ಲೂ ಕೂಡ ರಾಹು ಪ್ರವೇಶವಾಗಿದೆ ಎಂದೇ ಅರ್ಥ. ಯಾರು ತಮ್ಮ ದೇಹವನ್ನು ಶುದ್ಧಿಯಾಗಿ  ಅಂದವಾಗಿ ಇಟ್ಟುಕೊಳ್ಳಲು ಬರುವುದಿಲ್ಲವೋ ಅಲ್ಲಿ ರಾಹು ಪ್ರವೇಶವಾಗುತ್ತದೆ. ಯಾರೂ ತಮ್ಮನ್ನು ತಾವು ಪ್ರೀತಿಸುವುದಿಲ್ಲವೊ,  ಶುದ್ಧಿಯಾಗಿ ಟ್ಟು ಕೊಳ್ಳುವುದಿಲ್ಲವೊ, ಅಲಂಕಾರ ಮಾಡಿಕೊಳ್ಳಲು ಬರುವುದಿಲ್ಲವೋ , ದೀಪಾರಾಧನೆ ಮಾಡಲು ಬರದೇ ಇರುವುದು, ಮನೆ ಶುದ್ಧತೆ ಮಾಡಲು ಬರುವುದಿಲ್ಲವೊ, ಅಲ್ಲಿ ರಾಹು ಪ್ರಭಾವವಿರುತ್ತದೆ.

Advertisement

Advertisement

ಯಾವ  ಸ್ತ್ರೀ ಶುದ್ಧವಾಗಿರುತ್ತಾಳೊ ಸದಾ  ಅಸನ್ಮುಖಿಯಾಗಿರುತ್ತಾಳೊ ಶುದ್ಧತೆಯಲ್ಲಿ ನಯ ನಾಜೂಕಿನಿಂದ ಇರುತ್ತಾಳೋ ಅಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ.   ನಡಿಗೆ ಮಾಡುವುದು ಮತ್ತು ಬಳಸುವುದು ಕೂಡ ಒಂದು ಕಲೆ. ಅಮ್ಮನ ಆಕೆ ಊಟವನ್ನು ಪಡಿಸುವವರು ಮತ್ತು ಹೆಂಡತಿಯ ಹಾಗೆ ಇನ್ನಷ್ಟು ತಿನ್ನಬೇಕೆಂದು ಬಡಿಸುವವಳು  ಪ್ರಪಂಚದಲ್ಲೇ ಇನ್ಯಾರೂ ಇಲ್ಲ.  ಅಮ್ಮನ ಕೈತುತ್ತು ಗಿಂತ ರುಚಿ ಮತ್ತೊಂದಿಲ್ಲ ಹೆಂಡತಿ ಪಡಿಸುವ ಊಟಕ್ಕೆ ಊಟಕ್ಕೆ ತಿಕ್ಕಿರುವ ತಾಕತ್ತು ಬೇರೆ ಯಾವುದಕ್ಕೂ ಇಲ್ಲ. ಇದನ್ನು ಮರೆತ ಸ್ತ್ರೀಯರ ಮನೆಯಲ್ಲಿ ರಾಹು ಪ್ರವೇಶವಾಗುತ್ತದೆ.  ಈ ಮೂರು ನಿಯಮಗಳನ್ನು ಪಾಲಿಸದೆ ಯಾವ ಯಂತ್ರಗಳ ನ್ನಿಟ್ಟು ಪೂಜಿಸಿದರೂ ಕೂಡ ಏನು ಫಲ ದೊರೆಯುವುದಿಲ್ಲ. ನಿಮಗೆ ಯಾವುದಾದರೂ ಯಂತ್ರಗಳ ಬಗ್ಗೆ  ಗೊಂದಲವಿದ್ದರೆ ಸ್ಕ್ರೀನ್ನ ಮೇಲೆ ಕಾಣುವ ನಂಬರ್ ಗೆ ಕರೆ ಮಾಡಿ ತಿಳಿದುಕೊಳ್ಳಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಲಕ್ಷ್ಮಿ ದೇವಸ್ಥಾನಕ್ಕೆ ಪೂಜೆ ಆರಾಧನೆ ನೈವೇದ್ಯವನ್ನು ಮಾಡಿ. ಲಕ್ಷ್ಮಿ ಸಮಾನರಾದ ಅವರ ಸೇವೆ ಮಾಡಿ ತುಂಬಾ ಒಳ್ಳೆಯದಾಗುತ್ತದೆ ಶುಭ ಸುದ್ದಿಯೊಂದು ಬರುತ್ತದೆ.

ವೃಷಭ ರಾಶಿ : ಇಂದು ಸಂಧ್ಯಾ ಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಒಂದು ಬುಟ್ಟಿಯಷ್ಟು ಮಲ್ಲಿಗೆ ಹೂವನ್ನು ತೆಗೆದುಕೊಂಡು ಹೋಗಿ ಶಿವನಿಗೆ ಸಮರ್ಪಿಸಿ. ಆಚಾರ್ಯರ ಕೈಯಲ್ಲಿ ಆ ಹೂವಿನ ಜೊತೆ ವೀಳ್ಯದೆಲೆ ಅಡಕೆ ಅರಿಶಿನ ಕುಂಕುಮವನ್ನು ಮುತ್ತೈದೆಯರಿಗೆ ಕೊಡಿಸಿ ತುಂಬಾ ಒಳ್ಳೆಯದಾಗುತ್ತದೆ.

ಮಿಥುನ ರಾಶಿ : ಆಗದ ಕೆಲಸಗಳೆಲ್ಲವನ್ನೂ ನಿಭಾಯಿಸಿಕೊಂಡು ಬರುವಂತಹ ಅದ್ಭುತವಾದ ದಿನ.  ಆದರೆ ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆ. ಒಡಹುಟ್ಟಿದವರ ಜೊತೆ ವಾದ ವಿವಾದ ವಿದೆ.

ಕರ್ಕಾಟಕ ರಾಶಿ : ಆತಂಕ ವೈರಾಗ್ಯ  ಭಾವವಿರುತ್ತದೆ. ಎಂದು ಲಕ್ಷ್ಮೀ ಮತ್ತು ಶಿವನ ದೇವಸ್ಥಾನದಲ್ಲಿ ವಿಶೇಷ ಪೂಜೆ ಇರುತ್ತದೆ.  ಶಿವನ ದೇವಸ್ಥಾನಕ್ಕೆ ಹೋಗಿ  ಪತ್ನಿಯ ಹೆಸರಲ್ಲಿ ಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಹೋಗಿ ಪತಿಯ ಹೆಸರಲ್ಲಿ ಅರ್ಚನೆ ಮಾಡಿಸಿ. ಇದರಿಂದ  ಒಳ್ಳೆಯ ಬಲವನ್ನು ಪಡೆಯುತ್ತೀರಿ.

ಸಿಂಹ ರಾಶಿ : ಆಗದ ಕೆಲಸ ಗಳಿಗೂ ಯೋಜನೆಗಳನ್ನು ರೂಪಿಸಿ ಯಶಸ್ಸನ್ನು ಗಳಿಸುವಿರಿ.

ಕನ್ಯಾ ರಾಶಿ : ಧರ್ಮ ಪ್ರಭು ಎಂಬ ಹೆಸರನ್ನು ಕೊಡುತ್ತಾನೆ ಭಗವಂತ ತುಂಬಾ ವಿಶೇಷ.

ತುಲಾ ರಾಶಿ : ಯಾವುದೋ ಒಂದು ಅದೃಷ್ಟ ಹಿರಿಯರ ಆಶೀರ್ವಾದ ನೀವು ಮಾಡುವ ಕೆಲಸ ಕಾರ್ಯಗಳಿಗೆ ಸಹಕಾರ ನೀಡಿ ಯಶಸ್ಸನ್ನು ತಂದುಕೊಡುತ್ತದೆ.

ವೃಶ್ಚಿಕ ರಾಶಿ : ದೂರದ ಊರು ಸ್ಥಳದಲ್ಲಿನ ಕೆಲಸಗಳಿಗಾಗಿ ಓಡಾಡುತ್ತಿರಿ,  ತಲೆ ಕೆಡಿಸಿಕೊಳ್ಳುತ್ತೀರಿ,  ಅದರಲ್ಲಿ ಗೆಲ್ಲುತ್ತೀರಾ.

ಧನಸ್ಸು ರಾಶಿ : ಸ್ವಲ್ಪ ಆತಂಕ ಎಂದು ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಐದು ಜನ ವೃದ್ಧ ಮಹಿಳೆಯರಿಗೆ ಸಿಹಿಯನ್ನು ಹಂಚಿ. ಜೊತೆಗೆ ಊಟ, ಹಣ್ಣು, ವಸ್ತ್ರವನ್ನು ಕೊಡಿ.

ಮಕರ ರಾಶಿ : ಸ್ವಲ್ಪ ಪ್ರಯಾಸದ ದಿನ  ಕೊಡುವುದು ತೆಗೆದುಕೊಳ್ಳುವುದರಲ್ಲಿ ವ್ಯಾವಹಾರಿಕವಾಗಿ ನಡೆದುಕೊಂಡು ಗೆಲ್ಲುತ್ತೀರಾ.

ಕುಂಭ ರಾಶಿ : ಗುರುದರ್ಶನ ದೈವದರ್ಶನ ಗುರುಗಳ ಆಶೀರ್ವಾದ ಇವೆಲ್ಲವನ್ನೂ ಪಡೆದುಕೊಳ್ಳುವಂತಹ ಸಮಯಾನುಕೂಲತೆಯನ್ನು ಒದಗಿಸಿಕೊಡುತ್ತದೆ. ಚೆನ್ನಾಗಿದೆ ಎಂದು ನಿಮ್ಮನ್ನು ಪ್ರಸಾದ ಹುಡುಕಿಕೊಂಡು ಬರುತ್ತದೆ ಲಕ್ಷ್ಮೀ ಪ್ರಸಾದ ಶಿವನ ಪ್ರಸಾದ ವಿಷ್ಣುವಿನ ಪ್ರಸಾದ ಸಿಗುತ್ತದೆ ತೆಗೆದುಕೊಳ್ಳಿ.

ಮೀನ ರಾಶಿ : ಚೆನ್ನಾಗಿದೆ ವಿದ್ಯಾರ್ಥಿಗಳ ಅತಂತ್ರತೆ ಬಗ್ಗೆ ಚಿಂತಿಸುತ್ತೀರಿ ಮಕ್ಕಳ ಬಗ್ಗೆ ಚಿಂತಿಸುತ್ತೀರಿ, ಆತಂಕ ಬೇಡ ಚಿಂತಿಸಬೇಡಿ. ಎಲ್ಲರು ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ಕೊಡಿ.

All Rights reserved Namma  Kannada Entertainment.

Advertisement
Share this on...