ಚಿನ್ನದಿಂದ ನಿರ್ಮಿಸಿದ ಮೊದಲ ಹೋಟೆಲ್ … ಆದರೆ ಪ್ರಾರಂಭದಲ್ಲೇ ಓನರ್ ಗೆ ಶಾಕ್..!

in ಕನ್ನಡ ಮಾಹಿತಿ/ಮನರಂಜನೆ 267 views

ಪ್ರಪಂಚದಲ್ಲಿ ಸಿಗುವ ಅತ್ಯಮೂಲ್ಯವಾದ ವಸ್ತು ಹಾಗೂ ದುಬಾರಿಯಾದ ವಸ್ತು ಚಿನ್ನ. ನಮಗೆ ದಾರಿಯಲ್ಲಿ ಒಂದಷ್ಟು ಚಿನ್ನ ಸಿಕ್ಕರೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಕಾರಣ ಅದು ಚಿನ್ನ. 2007ರಲ್ಲಿ 1 ಗ್ರಾಂ ಚಿನ್ನಕ್ಕೆ 1000 ಇತ್ತು. ಆದರೆ ಈಗ 1 ಗ್ರಾಂಗೆ 4600 ಆಗಿದೆ. ಹಾಗೆ ಬಡವರಿಂದ ತುಂಬಾ ದೂರ ಸರಿದಿದೆ ಚಿನ್ನ. ಆದರೆ ಇಲ್ಲೊಬ್ಬ ಮಹಾರಾಯ ಫ್ಯೂರ್ 24 ಕ್ಯಾರೆಟ್ ಚಿನ್ನದಿಂದ 25 ಅಂತಸ್ತಿನ ಫೈವ್ ಸ್ಟಾರ್ ಹೋಟೆಲ್ ಅನ್ನು ನಿರ್ಮಿಸಿದ್ದಾರೆ. ಅದು ಎಲ್ಲಿ..? ಒಂದು ದಿನ ಈ ಹೋಟೆಲ್ ನಲ್ಲಿ ಸ್ಟೇ ಮಾಡಲು ಎಷ್ಟು ಹಣ ಕೊಡಬೇಕು ಎಂದು ಗೊತ್ತಾ..? ಬರೋಬರಿ 11ವರ್ಷ ತೆಗೆದುಕೊಂಡು ನಿರ್ಮಿಸಿರುವ ಈ ಚಿನ್ನದ ಹೋಟೆಲ್ ನ ಹೆಸರು ಡೋಲ್ಸ್ ಹೊನಾಯ್ ಗೋಲ್ಡನ್ ಲೇಖ್. ಈ ಹೋಟೆಲ್ ಇರುವುದು ವಿಯೆಟ್ನಾಮ್ ರಾಜಧಾನಿ ಹೊನಾಯ್ ನಲ್ಲಿ. ಟ್ಯೂಬ್ಲೆಟ್ ನಿಂದ ಹಿಡಿದು ಸ್ವಿಮ್ಮಿಂಗ್ಪೂಲ್, ಟಾಯ್ಲೆಟ್ ವರೆಗೂ ಎಲ್ಲವನ್ನು ಚಿನ್ನದ ಲೇಪನದಿಂದ ನಿರ್ಮಾಣ ಮಾಡಲಾಗಿದೆ. ಈ ಹೋಟೆಲ್ ನಲ್ಲಿರುವ ಪ್ರತಿಯೊಂದು ವಸ್ತು ಹಾಗೂ ಬಿಲ್ಡಿಂಗ್ ಹೊರ ಭಾಗವನ್ನು ಕೂಡ ಚಿನ್ನದ ಲೇಪನದಿಂದ ನಿರ್ಮಾಣ ಮಾಡಲಾಗಿದೆ.

Advertisement

Advertisement

ಈ ಚಿನ್ನದ ಹೋಟೆಲ್ ನ ನಿರ್ಮಾಣಕ್ಕಾಗಿ ಬರೋಬರಿ 1500 ಕೋಟಿ ಖರ್ಚು ಮಾಡಲಾಗಿದೆ. 25 ಅಂತಸ್ತಿನ ಈ ಫೈವ್ ಸ್ಟಾರ್ ಹೋಟೆಲ್ 400 ರೂಮ್ ಗಳನ್ನು ಹೊಂದಿದೆ.
ಈ ಗೋಲ್ಡನ್ ಹೋಟೆಲ್ ನಲ್ಲಿ ಒಂದು ದಿನ ಸ್ಟೇ ಮಾಡಬೇಕು ಅಂದರೆ ಕನಿಷ್ಠ 250 ಡಾಲರ್ ಆಗುತ್ತದೆ. ಅಂದರೆ ಒಂದು ದಿನಕ್ಕೆ 18,750 ರೂ ಬೇಕು. 100% ಗೋಲ್ಡ್ ನಿಂದ ನಿರ್ಮಿಸಿರುವ ವಿಶ್ವದ ಮೊದಲ ಹೋಟೆಲ್ ಇದಾಗಿದೆ. ಆದರೆ 1500 ಕೋಟಿ ಖರ್ಚು ಮಾಡಿ 11 ವರ್ಷ ಈ ಹೊಟೇಲ್ ಅನ್ನು ನಿರ್ಮಿಸಿದ ಇದರ ಓನರ್ ಗೆ ಮೊದಲ ದಿನದಿಂದಲೇ ಸಂಕಷ್ಟ ಶುರುವಾಗಿದೆ. ಒಂದು ದಿನಕ್ಕೆ 18 ಸಾವಿರ ಕೊಟ್ಟು ಈ ಹೋಟೆಲ್ ನಲ್ಲಿ ಸ್ಟೇ ಮಾಡಲು ವಿಯೆಟ್ನಾಮ್ ದೇಶದ ಹೆಚ್ಚು ಜನ ಧೈರ್ಯ ಮಾಡುವುದಿಲ್ಲ. ಈ ಹೋಟೆಲ್ ವಿದೇಶಿಗರನ್ನು ಆಕರ್ಷಿಸುತ್ತದೆ.

Advertisement


ಆದರೆ ಕೊರೊನಾದಿಂದ ವಿದೇಶಿ ಪ್ರವಾಸಿಗರು ಯಾರು ವಿಯೆಟ್ನಾಂಗೆ ಭೇಟಿ ಕೊಡುತ್ತಿಲ್ಲ. ಹಾಗಾಗಿ ಈ ಹೋಟೆಲ್ ನ ಎಲ್ಲಾ ರೂಂಗಳು ಖಾಲಿಯಾಗಿವೆ. ಇನ್ನು ಕೊರೋನಾ ಕಂಟ್ರೋಲ್ ಗೆ ಬರೋದು ಯಾವಾಗ್ಲೋ ಪ್ರವಾಸಿಗರು ಬಂದು ನಮ್ಮ ಹೋಟೆಲ್ ಫುಲ್ ಆಗೋದು ಯಾವಾಗ್ಲೋ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ ಈ ಹೋಟೆಲ್ ನ ಓನರ್. ಏನೇ ಆದರೂ ಈ ಹೋಟೆಲ್ ವಿಯಾಟ್ನಾಮ್ ರಾಜಧಾನಿ ಹೊನಾಯ್ ನ ಒಂದು ಆಕರ್ಷಕ ತಾಣವಾಗಲಿದೆ ಅನ್ನೋದು ಮಾತ್ರ ನಿಜ.

Advertisement

1500 ಕೋಟಿ ಖರ್ಚು ಮಾಡಿ ಚಿನ್ನದ ಹೋಟೆಲ್ ನಿರ್ಮಿಸಿ ಪ್ರಪಂಚದ ಜನ ತಮ್ಮ ದೇಶದ ಕಡೆ ನೋಡುವಂತೆ ಮಾಡಿದ ಈ ಹೋಟೆಲ್ ನ ಓನರ್ ನ ಧೈರ್ಯ ಹಾಗೂ ಅವರ ಆಲೋಚನೆ ಮೆಚ್ಚುವಂತಹದ್ದು.

– ಸುಷ್ಮಿತಾ

Advertisement
Share this on...