ಆ ಜೋಡಿಗಳು ವಹಿಸಿದ ಕಾಳಜಿಗೆ ಸಿಕ್ಕಿದೆ ಸಿಕ್ಕಾಪಟ್ಟೆ ಪ್ರಶಂಸೆ , ಅವರು ಮಾಡಿದ್ದಾದರೂ ಏನು?

in ಕನ್ನಡ ಮಾಹಿತಿ 43 views

ಅಸ್ಸಾಂನಲ್ಲಿ ಲಾಕ್ ಡೌನ್ ರಿಲ್ಯಾಕ್ಸೇಶನ್ ನಂತರ ಒಂದು ಜೋಡಿ ಮದುವೆಯಾಗಲು ನಿರ್ಧರಿಸಿತು. ಮದುವೆಯಾಗುವಾಗ ಈ ಜೋಡಿ ಒಂದು ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಿತು. ಇದೀಗ ಆ ಜೋಡಿಗಳು ವಹಿಸಿದ ಕಾಳಜಿಗೆ ಮದುವೆಯ ನಂತರ ಸಿಕ್ಕಾಪಟ್ಟೆ ಪ್ರಶಂಸೆ ಸಿಕ್ಕಿರುವುದಲ್ಲದೆ, ಜನರು ಆ ಫೋಟೋಗಳನ್ನು ವೈರಲ್ ಮಾಡಿದ್ದಾರೆ. ಅಷ್ಟಕ್ಕೂ ಆ ಜೋಡಿ ಮಾಡಿದ್ದೇನು ಗೊತ್ತಾ? ಮುಂದೆ ಓದಿ…

Advertisement

 

Advertisement


ಹೌದು, ಅಸ್ಸಾಂ ವಧು-ವರನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರು ವಧು-ವರರನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ಅದನ್ನು ಶೇರ್ ಮಾಡುತ್ತಾ ಇಷ್ಟಪಡುತ್ತಿದ್ದಾರೆ. ಈ ಸುದ್ದಿ ಇಷ್ಟೊಂದು ವೈರಲ್ ಆಗಲು ಕಾರಣವೂ ತುಂಬಾ ವಿಶೇಷವಾಗಿದೆ. ಬಹುಶಃ ಈ ಸುದ್ದಿ ಕೇಳಿದರೆ ನೀವು ಅವರನ್ನು ಪ್ರಶಂಸಿಸಲು ಪ್ರಾರಂಭಿಸಬಹುದು.

Advertisement

 

Advertisement


ಕೋವಿಡ್ -19 ಬಂದ ಮೇಲೆ ಜನ ಎಚ್ಚೆತ್ತುಕೊಂಡಿದ್ದಾರೆ. ಲಾಕ್ ಡೌನ್’ನ ರಿಲ್ಯಾಕ್ಸೇಶನ್ ನಂತರ ಹೊಸ ಜೀವನ ನಡೆಸುತ್ತಿದ್ದಾರೆ. ಈ ಹೊಸ ಜೀವನಕ್ಕೆ ಹೊಂದಿಕೊಂಡವರು ಸ್ಯಾನಿಟೈಜರ್ ಬಳಸುವುದು ಮಾಮೂಲಾಗಿದೆ. ಮಾಸ್ಕ್ ಖಡ್ಡಾಯವಾಗಿದೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಇದೀಗ ಮದುವೆಗಳಲ್ಲಿ ಸಹ ಜನರು ಇದನ್ನೇ ಅನುಸರಿಸುತ್ತಿದ್ದಾರೆ.

 


ಹೌದು, ಅಸ್ಸಾಂನಲ್ಲಿ ನಡೆದ ವಿವಾಹವೊಂದರಲ್ಲಿ ವಧು-ವರರು ಅವರಿಗೆ ಮದುವೆ ಬಟ್ಟೆಗಳನ್ನು ಹೊಲಿಸಿಕೊಳ್ಳುವುದರ ಜೊತೆಗೆ ವಿಶೇಷವಾದ ಮಾಸ್ಕ್’ಗಳನ್ನು ಹೊಲಿಸಿಕೊಂಡಿದ್ದು, ಈ ಮಾಸ್ಕ್ ಅವರ ವಿವಾಹದ ಬಟ್ಟೆಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ವರ ಸಾಂಪ್ರದಾಯಿಕ ಬಿಳಿ ಕುರ್ತಾ-ಧೋತಿ ಮತ್ತು ವಧು ಅಸ್ಸಾಂ ರೇಷ್ಮೆಯಿಂದ ಮಾಡಿದ ಸೀರೆಯನ್ನು ಧರಿಸಿದ್ದಳು. ಜೊತೆಗೆ ಈ ದಿರಿಸುಗಳಲ್ಲಿರುವ ಗೋಲ್ಡನ್ ಕಲರ್ ಬಾರ್ಡರ್ ಮತ್ತು ಪೊಲ್ಕಾ ಡಾಟ್ ರಿಚ್ ಲುಕ್ ನೀಡಿವೆ.

 


ಈಗ ಈ ಮಾಸ್ಕ್ ಬಗ್ಗೆ ಮಾತನಾಡುವುದಾದರೆ ವರನ ಮಾಸ್ಕ್ ಸರಳವಾಗಿದ್ದು, ಅದರ ಮೇಲೆ ಗೋಲ್ಡ್ ಕಲರ್ ಬಾರ್ಡರ್ ಮಾತ್ರ ಇದೆ. ಆದರೆ ವಧುವಿನ ಮುಖವಾಡಕ್ಕೆ ಹೆಚ್ಚಿನ ವರ್ಕ್ ಮಾಡಲಾಗಿದೆ. ಇದಕ್ಕಾಗಿ ಗೋಲ್ಡ್ ಮತ್ತು ಕೆಂಪು ಬಣ್ಣಗಳನ್ನು ಸಹ ಬಳಸಲಾಗಿದೆ. ಇದನ್ನು ಹೆಚ್ಚು ವಿಶೇಷವಾಗಿಸಲು ಕುಚ್ಚುಗಳನ್ನು ಸಹ ಹಾಕಲಾಗಿದೆ.
ವಧು ಮಾಸ್ಕ್ ಧರಿಸಿದ್ದರೂ, ಮುಖಕ್ಕೆ ವಿಶೇಷ ಮೇಕಪ್ ಮಾಡಲಾಗಿದೆ. ಮಾಸ್ಕ್ ಮೇಲೆ ನಿರ್ದಿಷ್ಟವಾಗಿ ಕಣ್ಣುಗಳಿಗೆ ಕಾಜಲ್ ಮತ್ತು ಐಲೈನರ್ ಸಹಾಯದಿಂದ ಹೆಚ್ಚು ಮೇಕಪ್ ಮಾಡಲಾಗಿದೆ. ಜೊತೆಗೆ ವಧು ರೇಷ್ಮೆ ಸೀರೆಯೊಂದಿಗೆ ಹಗುರವಾದ ಚಿನ್ನದ ಆಭರಣಗಳನ್ನು ಆರಿಸಿಕೊಂಡಿದ್ದಾಳೆ.

Advertisement
Share this on...