ಬರುತ್ತಿದೆ ಗ್ರಾಮ ಪಂಚಾಯತ್ ಚುನಾವಣೆ… ನಾನೇನು ಮಾಡಬೇಕು ಈಗ?

in ಕನ್ನಡ ಮಾಹಿತಿ/ರಾಜಕೀಯ 387 views

ನಮ್ಮ ದೇಶದ ಜನರ ಪರಿಸ್ಥಿತಿಯೇ ಹಾಗೆ ಯೋಚನೆ ಮಾಡದೆ ಮತ ಚಲಾಯಿಸುವುದು ಮತ್ತೆ ಮುಂದಿನ ಚುನಾವಣೆ ಬರುವವರೆಗೂ ಅವರಿಗೆ ಕೆಲಸ ಮಾಡಿಲ್ಲ ಎಂದು ಬೈದುಕೊಂಡು ಇರುವುದು ಸುಮಾರು ವರ್ಷಗಳಿಂದನೆ ನೆಡೆದುಕೊಂಡು ಬಂದಿದೆ. ನಿಜ ಹೇಳಬೇಕೆಂದರೆ ಇದು ಸತ್ಯ ಇವಾಗಿನ ಪರಿಸ್ಥಿತಿಯೇ ಹಾಗಾಗಿ ಹೋಗಿದೆ ಬಿಡಿ.ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಕಾರಣ ನಮ್ಮ ಸಮಾಜ ನಮ್ಮ ಊರು ನಮ್ಮ ಗ್ರಾಮ ನಮ್ಮ ರಾಜ್ಯ ದೇಶ ಎಲ್ಲಾದರ ಅಬಿರುದ್ದಿಯು ನಾವು ಹಾಕುವ ಮತದ ಮೇಲೆ ನಿಂತಿದೆ. ಹೇಗೆಂದರೆ ಒಳ್ಳೆಯ ಅಭ್ಯರ್ಥಿಗೆ ನಾವು ಹಾಕುವ ಮತ ಎಲ್ಲದರ ಬದಲಾವಣೆಯ ಅಡಿಪಾಯವಾಗಿದೆ ನಮ್ಮ ಮತದಾನದ ಮೇಲೆ ದೇಶದ ಅಬಿರುದ್ದಿ ನಿಂತಿರುವುದು ಎಂದರೆ ತಪ್ಪಾಗುವುದಿಲ್ಲ. ಹಾಗಾಗಿ ನಾವು ಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನ ಮಾಡುವ ಮುಂಚೆ ಯಾವುದೇ ಹಣ ಹೆಂಡ ಎಂಬ ಆಮಿಷಕ್ಕೆ ಒಳಾಗಾಗದೆ ನನ್ನ ಮತ ಇರುವುದು ನನ್ನ ಗ್ರಾಮದ ಅಭಿವದ್ಧಿಗೆ ಎಂಬುದನ್ನು ಮನಗಂಡು ಮತವನ್ನು ಉತ್ತಮ ಒಳ್ಳೆಯ ಅಭ್ಯರ್ಥಿಗೆ ನೀಡಬೇಕು .ನಾವು ಆರಿಸುವ ಅಭ್ಯರ್ಥಿಯು ನಮಗೆ ಪೂರಕವಾಗಿರಬೇಕು ಮತ್ತು ನಮ್ಮ ಊರಿನ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಮುಂದೆ ನಿಲ್ಲುವಂತೆ ಇರಬೇಕು.

Advertisement

Advertisement

ನನ್ನ ಗ್ರಾಮದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥನಾಗಿರಬೇಕು , ನನ್ನ ಗ್ರಾಮಕ್ಕೆ ಬರುವ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು,ತನ್ನ ಸಂಬಳವನ್ನು ಬಿಟ್ಟು ಬೇರೆ ಯಾವುದೇ ಹಣವನ್ನು ಆ ಅಭ್ಯರ್ಥಿ ಮುಟ್ಟಬಾರದು ಅಂತಹ ಅಭ್ಯರ್ಥಿಯು ನನ್ನ ಗ್ರಾಮಕ್ಕೆ ಬೇಕು,ಎಂಬ ವಿಷಯಗಳು ಮನದಲ್ಲಿ ಇರಬೇಕು.
ದಯಮಾಡಿ ಯಾವುದೇ ಕಾರಣಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ ಯಾಕೆಂದರೆ ಇದು ಒಂದೇ ಅಸ್ತ್ರ ನಮ್ಮ ಕೈಯಲ್ಲಿ ಇರುವುದು ಇದನ್ನು ನಾವು ಚುನಾವಣೆಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಅನ್ನುವುದಕ್ಕಿಂತ ಮಾಡಿಕೊಳ್ಳಲೇ ಬೇಕಾಗಿದೆ,ಕೇವಲ ಒಂದು ದಿನಕ್ಕೆ ಕಾಲಿ ಆಗುವ ಹಣ ಹೆಂಡಕ್ಕೆ ಮಾಡಿಕೊಂಡರೆ ಕೊನೆಗೆ ಯಾವುದೇ ಹಕ್ಕು ಕೂಡ ನಮ್ಮಲ್ಲಿ ಇರುವುದಿಲ್ಲ ಪ್ರಶ್ನೆ ಮಾಡುವುದಕ್ಕೆ.

Advertisement

ಹಾಗಾಗಿ ನಾವು ಮತದಾನ ಮಾಡಬೇಕಿರುವುದು ಉತ್ತಮವಾದ ಕೆಲಸ ಮತದಾನ ಮಾಡಲೇಬೇಕು ಆದರೆ ಉತ್ತಮ ಅಭ್ಯರ್ಥಿಗೆ ಮತದಾನ ಮಾಡಬೇಕು ಕಾರಣ ಅಬಿರುದ್ದಿಯಾಗ ಬೇಕಿರುವುದು ನಮ್ಮ ಗ್ರಾಮ ಮತ್ತು ಗ್ರಾಮ ಪಂಚಾಯತ್, ಅದ್ಯಕರು ಸದಸ್ಯರು ಅಲ್ಲ ಹಾಗಾಗಿ ಮತ್ತೊಮ್ಮೆ ಮಾಡಿದ ತಪ್ಪನ್ನೇ ಮಾಡದೆ ಯೋಚಿಸಿ ಮತ ಚಲಾಯಿಸಿ.

Advertisement

ಶರತ್ ಕುಮಾರ್ ಟಿ

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

 

Advertisement
Share this on...