ಗಿನ್ನೆಸ್ ಸೇರಲು ಸಜ್ಜಾಗಿದೆ ರೈತ ಬೆಳೆದ ಹಲಸಿನ ಹಣ್ಣು, ಇದರ ತೂಕ ಎಷ್ಟಿದೆ ಗೊತ್ತಾ ?

in ಕನ್ನಡ ಮಾಹಿತಿ 43 views

ಕೊರೊನಾ ವೈರಸ್ ಕಾರಣದಿಂದಾಗಿ ಲಾಕ್ ಡೌನ್ ಆದ ಸಮಯದಲ್ಲಿ ಬಹುತೇಕರು ಕೃಷಿ ಚಟುವಟಿಕೆಗಳತ್ತ ಆಕರ್ಷಿತರಾದರು. ಇನ್ನು ಕೆಲವರು ಸಂತೋಷದಿಂದ ಗಿಡ ನೆಡುವುದು, ವಿವಿಧ ಬೀಜಗಳನ್ನು ಬಿತ್ತುವ ಕೆಲಸದಲ್ಲಿ ತೊಡಗಿಸಿಕೊಂಡರು. ಸೆಲೆಬ್ರಿಟಿಗಳ ಪೈಕಿ ನಟಿ ಜೂಹಿ ಚಾವ್ಲಾ ಸಹ ಸಾಕಷ್ಟು ಸಮಯವನ್ನು ತೋಟದಲ್ಲಿ ಕಳೆಯುತ್ತಿದ್ದಾರೆ. ಇತ್ತೀಚೆಗೆ ಜುಹಿ ಚಾವ್ಲಾ ಅವರು ಇನ್ಸ್ಟಾಗ್ರಾಮ್’ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಅವು ತುಂಬಾ ವೈರಲ್ ಆಗಿದ್ದವು. ಈ ಚಿತ್ರಗಳಲ್ಲಿ ಜುಹಿ ತಮ್ಮ ಮನೆಯ ತೋಟದಲ್ಲಿ ಕೆಲವು ತರಕಾರಿಗಳನ್ನು ಬೆಳೆಯುವುದನ್ನು ನೀವು ನೋಡಿರಬಹುದು. ಜುಹಿ ತೋಟದಲ್ಲಿ ಟೊಮ್ಯಾಟೊ ಮತ್ತು ಮೆಂತ್ಯವನ್ನು ಬೆಳೆಯಲು ಬಯಸುತ್ತೇನೆ ಎಂದು ಫೋಟೋಗಳನ್ನು ಹಂಚಿಕೊಂಡಿದ್ದರು.

Advertisement

 

Advertisement

Advertisement

ಇದೀಗ ಕೊರೊನಾ ವೈರಸ್ ಮಧ್ಯೆ, ಕೇರಳದ ರೈತನೊಬ್ಬ 50 ಕೆ.ಜಿ . ತೂಕದ ಮತ್ತು ಸುಮಾರು ಒಂದು ಮೀಟರ್ ಉದ್ದದ ಹಲಸಿನ ಹಣ್ಣನ್ನು ಬೆಳೆದಿರುವುದಾಗಿ ಹೇಳಿಕೊಂಡಿದ್ದಾನೆ. ಈ ಹಲಸಿನ ಹಣ್ಣಿನ ಸಂಪೂರ್ಣ ತೂಕ 51.4 ಕೆ.ಜಿ. ಈ ಹಲಸಿನ ಹಣ್ಣಿನ ಅನೇಕ ಫೋಟೋಗಳನ್ನು ಸುದ್ದಿ ಸಂಸ್ಥೆ ಎಎನ್ಐ ಪೋಸ್ಟ್ ಮಾಡಿದ್ದು , ಈಗ ಅವರು ಅದನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಿಸಲು ತಯಾರಿ ನಡೆಸಿದ್ದಾರೆ. ಹಲಸಿನ ಹಣ್ಣು 51.4 ಕೆ.ಜಿ. ಗಿಂತ ಹೆಚ್ಚು ತೂಕವಿದೆ ಎಂದು ಹಲಸಿನ ಹಣ್ಣು ಬೆಳೆದ ಕುಟುಂಬದ ಸದಸ್ಯ ಜಾನ್ ಕುಟ್ಟಿ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ಇದುವರೆಗೆ ಭಾರವಾದ ಹಲಸಿನ ಹಣ್ಣಿನ ತೂಕ 42.72 ಕೆ.ಜಿ. ಇದ್ದು,ಇದು ಪುಣೆಯಲ್ಲಿ ಪತ್ತೆಯಾಗಿತ್ತು. ಹಾಗಾಗಿ ಈಗ ನಮ್ಮ ಹಲಸಿನ ಹಣ್ಣನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

Advertisement

 


ಹಲಸಿನ ಹಣ್ಣಿನ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರು ಈ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ ಮತ್ತು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದಲ್ಲದೆ, ಕೆಲವರು ನಿಮ್ಮ ಹೆಸರುಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಜಾನ್ ಕುಟ್ಟಿ ಮತ್ತು ಅವರ ಕುಟುಂಬಕ್ಕೆ ಸಲಹೆ ನೀಡುತ್ತಿದ್ದಾರೆ.

Advertisement
Share this on...