ಜಿಮ್​ ಇಲ್ವಾ, ಡಂಬಲ್ಸ್ ಇಲ್ವಾ…ಹಾಗಿದ್ರೆ ಹೀಗೆ ಮಾಡಿ ಅಂದ್ರು ಪ್ರಿಯಾಂಕ ಛೋಪ್ರಾ !

in ಮನರಂಜನೆ 58 views

ಭಾರತದಲ್ಲಿ ಮಾತ್ರವಲ್ಲ ವಿಶ್ವದ 200ಕ್ಕೂ ಹೆಚ್ಚು ದೇಶಗಳು ಕೊರೊನಾ ವೈರಸ್​​​​​​ನಿಂದ ತೊಂದರೆ ಅನುಭವಿಸುತ್ತಿವೆ. ಅಮೆರಿಕ ಸ್ಪೈನ್, ಇಟಲಿ, ಫ್ರಾನ್ಸ್, ಜರ್ಮನಿ, ರಷ್ಯಾ, ಇರಾನ್, ಚೈನಾ, ಕೆನಡಾ, ಸೌದಿ ಅರೇಬಿಯಾ ಸೇರಿದಂತೆ ಬಹಳಷ್ಟು ರಾಷ್ಟ್ರಗಳು ಕೊರೊನಾದಿಂದ ನರಕ ಯಾತನೆ ಅನುಭವಿಸುತ್ತಿವೆ. ಇನ್ನು ರಾಜ್ಯದಲ್ಲಿ ಕೆಲವೊಂದು ಕಡೆ ಲಾಕ್​​ಡೌನ್​ ಸಡಿಲಿಸಲಾಗಿದ್ದು ಜನರು ಮೊದಲಿನಂತೆ ರಸ್ತೆಗೆ ಇಳಿದಿದ್ದಾರೆ.ಇನ್ನು ಸಿನಿಮಾ ನಟ-ನಟಿಯರು ಕೂಡಾ ಇದಕ್ಕೆ ಹೊರತಾಗಿಲ್ಲ. ಪ್ರತಿದಿನ ಬಹುತೇಕ ಹೊರಗೆ ಇರುತ್ತಿದ್ದ ಸಿನಿಮಾ ಮಂದಿ ಬಹಳ ದಿನಗಳಿಂದ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಪತಿ ನಿಕ್​ ಜೋನ್ಸ್​​​​​​​​​ ಮನೆಯಲ್ಲಿ ಇದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಅವರು ಕೂಡಾ ಕೊರೊನಾ ಭೀತಿ ಆರಂಭವಾದಾಗಿನಿಂದ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇನ್ನು ಸಿನಿಮಾ ನಟರು ಎಂದ ಮೇಲೆ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವುದು ಸಾಮಾನ್ಯ. ಫಿಟ್ನೆಸ್​​​ಗಾಗಿ ದಿನಕ್ಕೆ 2-3 ಗಂಟೆಗಳ ಕಾಲ ಜಿಮ್​​ನಲ್ಲಿ ವರ್ಕೌಟ್ ಮಾಡ್ತಾರೆ. ಆದರೆ ಈಗ ಜಿಮ್​​ಗೆ ಕೂಡಾ ಹೋಗುವಂತಿಲ್ಲ. ಎಲ್ಲಾ ಜಿಮ್ ಕೂಡಾ ಬಂದ್ ಆಗಿದೆ.

Advertisement

 

Advertisement

Advertisement

 

Advertisement

ಹೀಗೆ ಜಿಮ್​​​​​​​​ನಲ್ಲಿ ವರ್ಕೌಟ್ ಮಾಡಲಾಗದಿದ್ದವರಿಗೆ ,ಅಭಿಮಾನಿಗಳಿಗಾಗಿ ಪ್ರಿಯಾಂಕ ಛೋಪ್ರಾ ಒಂದು ಟಿಪ್ಸ್ ಹೇಳಿಕೊಟ್ಟಿದ್ದಾರೆ. ಡಂಬಲ್ಸ್ ಇಲ್ಲದಿದ್ದರೆ ನಿಮ್ಮ ಮನೆಯ ಪುಟ್ಟ ಮಕ್ಕಳನ್ನೇ ಡಂಬಲ್ಸ್ ರೀತಿ ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೆ ತನ್ನ ಕಸಿನ್ ಮಗುವೊಂದನ್ನು ಹಿಡಿದು ಡಂಬಲ್ಸ್​​​​ನಂತೆ ವರ್ಕೌಟ್ ಮಾಡಿದ್ದಾರೆ. ಈ ವಿಡಿಯೋವನ್ನು ಪಿಗ್ಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​​ಲೋಡ್ ಮಾಡಿಕೊಂಡಿದ್ದಾರೆ.

 

View this post on Instagram

 

No gym, no problem. @sky.krishna @divya_jyoti

A post shared by Priyanka Chopra Jonas (@priyankachopra) on

ಕೆಲವು ದಿನಗಳ ಹಿಂದೆ ಚಿತ್ರರಂಗದ ಖ್ಯಾತ ನಟ-ನಟಿಯರು ಸೇರಿ ಮಾಡಿದ್ದ ಫ್ಯಾಮಿಲಿ ಎಂಬ ಕಿರುಚಿತ್ರದಲ್ಲಿ ಪ್ರಿಯಾಂಕ ಛೋಪ್ರಾ ಭಾಗವಹಿಸಿದ್ದರು. ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಮನೆಯಿಂದಲೇ ಈ ಕಿರುಚಿತ್ರದಲ್ಲಿ ನಟಿಸಿದ್ದರು ಪಿಗ್ಗಿ. ಅಮೆರಿಕ ಪಾಪ್ ಸಿಂಗರ್ ನಿಕ್​ ಜೋನ್ಸ್ ಅವರನ್ನು 2018 ರಲ್ಲಿ ಮದುವೆಯಾದ ಪ್ರಿಯಾಂಕ ಛೋಪ್ರಾ ಸದ್ಯಕ್ಕೆ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.

Advertisement
Share this on...