ಈ ನಾಯಿ ಮಾಡಿದ ಕೆಲಸ ನೋಡಿ ಇಡೀ ಪ್ರಪಂಚವೇ ಬೆರಗಾಗಿದೆ..!

in News 136 views

ನಿಯತ್ತಿಗೆ ಪ್ರತಿರೂಪ ನಾಯಿ ಎಂದು ನಮಗೆ ಗೊತ್ತಿರುವ ವಿಷಯ. ತನಗೆ ಊಟ ಹಾಕಿದ ವ್ಯಕ್ತಿಗೆ ಅದು ಪ್ರಾಣ ಕೊಡಲು ಸಿದ್ಧವಿರುತ್ತದೆ. ಜಪಾನ್ ನಲ್ಲಿ ನಡೆದ ಒಂದು ಘಟನೆ ಹಾಗೂ ಈ ನಾಯಿಯ ಪ್ರೀತಿ ಪ್ರಪಂಚದ ಜನರ ಹೃದಯ ಕಲಕುವಂತೆ ಮಾಡಿದೆ. ಜಪಾನ್ ರಾಜಧಾನಿ ಟೋಕಿಯೋದಲ್ಲಿ ಯುನೋ ಎಂಬಾತ ಜನವರಿ 19, 1872 ರಂದು ಜನಿಸಿದ್ದರು. ಯುನೋ ಟೋಕಿಯೋದ ಯುನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಯುನೋ ಪ್ರತಿದಿನ ಯೂನಿವರ್ಸಿಟಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದರು. ಒಂದು ದಿನ ಈತನಿಗೆ ಬೀದಿಯಲ್ಲೀ ನಾಯಿ ಮರಿಗಳು ಕಂಡಿತ್ತು. ಪ್ರತಿದಿನ ಏನಾದರೂ ಒಂದು ತಿಂಡಿಯನ್ನು ಆ ನಾಯಿಗೆ ಯೂನೋ ಕೊಡುತ್ತಿದ್ದರು.
ಯುನೋ, ಆ ನಾಯಿ ಹೀಗೆ ಇವರಿಬ್ಬರ ಸ್ನೇಹ ಬೆಳೆಯಿತು. ಕೆಲವು ದಿನಗಳ ನಂತರ ಯೂನೋ ಆ ನಾಯಿಯನ್ನು ಮನೆಗೆ ತಂದು ಸಾಕಿದರು. ಆ ನಾಯಿಗೆ ಹಚ್ಚಿಕೋ ಎಂಬ ಹೆಸರನ್ನು ಸಹ ಯೂನೋ ಇಟ್ಟರು.

Advertisement

Advertisement

ಪ್ರತಿ ದಿನ ಬೆಳಿಗ್ಗೆ ಯುನೋ ಜೊತೆ ರೈಲ್ವೆ ಸ್ಟೇಷನ್ ಗೆ ಹೋಗುತ್ತಿದ್ದ ಹಚ್ಚಿಕೋ ಹಗಲೆಲ್ಲಾ ಅಲ್ಲೇ ಇದ್ದು ಸಾಯಂಕಾಲ ಯುನೋ ವಾಪಸ್ಸು ಬಂದಾಗ ಇಬ್ಬರೂ ಜೊತೆಗೂಡಿ ಮನೆಗೆ ಬರುತ್ತಿದ್ದರು. ಹೀಗೆ ಇವರ ಪ್ರಯಾಣ ವರ್ಷಗಟ್ಟಲೆ ನಡೆಯಿತು. ಒಂದು ದಿನ ಬೆಳಿಗ್ಗೆ ಯೂನಿವರ್ಸಿಟಿಗೆ ಹೋದ ಯುನೋ ಸಾಯಂಕಾಲ ಆದರೂ ವಾಪಸ್ಸು ಬರಲಿಲ್ಲ.  ಎಷ್ಟೊತ್ತಾದರೂ ಯುನೋ ಬರದ ಕಾರಣ ಪ್ರತಿ ರೈಲುಗಳ ಬಳಿ ಹೋಗಿ ಯುನೋಗಾಗಿ ಹುಡುಕುತ್ತಿತ್ತು ಹಚ್ಚಿಕೋ. ಹೀಗೆ ಕೆಲವು ದಿನ, ತಿಂಗಳು, ವರ್ಷಗಳೇ ಕಳೆದು ಹೋಯಿತು. ಹಚ್ಚಿಕೋ ಪ್ರತಿ ರೈಲಿನಲ್ಲೂ ಯುನೋಗಾಗಿ ಹುಡುಕಾಡುತ್ತಿತ್ತು. ಆದರೂ ಯುನೋ ವಾಪಸ್ಸು ಬರಲಿಲ್ಲ. ಯುನೋ ತರ ಯಾರಾದರೂ ಕಂಡರೆ ಸಾಕು ಅವರ ಬಳಿ ಓಡಿ ಹೋಗಿ ಸುತ್ತುವರಿಯುತ್ತಿತ್ತು ಹಚ್ಚಿಕೋ.

Advertisement

ಈ ನಾಯಿಯ ವರ್ತನೆ ಮೊದಲು ಯಾರಿಗೂ ಅರ್ಥ ಆಗಲಿಲ್ಲ. ನಂತರ ಅದರ ಬಗ್ಗೆ ತಿಳಿದುಕೊಂಡು ಹಚ್ಚಿಕೋನನ್ನು ಪ್ರೀತಿಯಿಂದ ನೋಡುತ್ತಿದ್ದರು ಜನ. ಈ ನಾಯಿ ಸುಮಾರು ಹತ್ತು ವರ್ಷಗಳ ಕಾಲ ತನ್ನ ಸ್ನೇಹಿತ ಯುನೋಗಾಗಿ ರೈಲ್ವೆ ಸ್ಟೇಷನ್ ಬಳಿಯಲ್ಲಿಯೇ ಕಾಯುತ್ತಿತ್ತು. ಕೊನೆಗೆ ಅನಾರೋಗ್ಯದಿಂದ ಹಚ್ಚಿಕೋ ಮರಣ ಹೊಂದಿತ್ತು. ಆದರೆ ಈ ನಾಯಿಗೆ ಗೊತ್ತಿಲ್ಲದ ಒಂದು ವಿಷಯ ಏನೆಂದರೆ ಆ ದಿನ ಅಂದರೆ ಮೇ 21, 1925 ರಂದು ತನ್ನ 53 ನೇ ವಯಸ್ಸಿಗೆ ಯೂನಿವರ್ಸಿಟಿಗೆ ಹೋದ ಯುನೋ ಪಾಠ ಮಾಡುವಾಗ ಹೃದಯಾಘಾತಕ್ಕೆ ಗುರಿಯಾಗಿ ಅಲ್ಲೇ ಕುಸಿದು ಬಿದ್ದು ಮರಣ ಹೊಂದಿದರು. ಯುನೋ ಹಚ್ಚಿಕೋ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದವು. ಹಚ್ಚಿಕೋ ನಿಯತ್ತಿಗೆ ಮೆಚ್ಚಿ ಜಪಾನ್ ನಲ್ಲಿ ವಿಗ್ರಹಗಳನ್ನು ಕೂಡ ಸ್ಥಾಪನೆ ಮಾಡಲಾಗಿದೆ. ಯುನೋ ಹಾಗೂ ಹಚ್ಚಿಕೋ ಹೃದಯ ಸ್ಪರ್ಶಿ ಸ್ನೇಹ ಮೆಚ್ಚುವಂತಹದು.

Advertisement

– ಸುಷ್ಮಿತಾ

Advertisement
Share this on...