ಹ್ಯಾಂಡ್ ಸ್ಯಾನಿಟೈಜರ್ ಬಳಕೆಗೆ ವಿರೋಧ ವ್ಯಕ್ತಪಡಿಸಿದ ದೇವಸ್ಥಾನದ ಅರ್ಚಕ!

in ಕನ್ನಡ ಮಾಹಿತಿ 37 views

ಕೇಂದ್ರ ಸರ್ಕಾರ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಅಡಿಯಲ್ಲಿ ಜನರು ಕನಿಷ್ಠ ಆರು ಅಡಿಗಳಷ್ಟು ದೂರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಮುಖಕ್ಕೆ ಮಾಸ್ಕ್’ಗಳು, ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳುವುದು ಮತ್ತು ಕನಿಷ್ಠ 40-60 ಸೆಕೆಂಡುಗಳ ಕಾಲ ಸಾಬೂನಿನಿಂದ ಸ್ಕ್ರಬ್ ಮಾಡುವುದು ಸೇರಿದಂತೆ ಸ್ಯಾನಿಟೈಜರ್’ಗಳ ಬಳಕೆ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಆದರೆ ಮಾ ವೈಷ್ಣವಧಂ ನವ ದುರ್ಗಾ ದೇವಸ್ಥಾನದ ಅರ್ಚಕ ಚಂದ್ರಶೇಖರ್ ತಿವಾರಿ, “ಮಾರ್ಗಸೂಚಿಗಳನ್ನು ನೀಡುವುದು ಸರ್ಕಾರದ ಕೆಲಸ, ಆದರೆ ದೇವಾಲಯಗಳಲ್ಲಿ ಸ್ಯಾನಿಟೈಜರ್ ಯಂತ್ರ ಬಳಸುವುದಕ್ಕೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ. ಏಕೆಂದರೆ ಅದರಲ್ಲಿ ಆಲ್ಕೋಹಾಲ್ ಮಿಶ್ರಣವಾಗಿದೆ” ಎಂದು ಹೇಳಿದ್ದಾರೆ.

Advertisement

 

Advertisement


“ಮದ್ಯ ಸೇವಿಸಿದರೆ ದೇವಸ್ಥಾನಕ್ಕೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಅಂತಹುದರಲ್ಲಿ ಮದ್ಯದಿಂದ ನಮ್ಮ ಕೈಗಳನ್ನು ಹೇಗೆ ಸ್ವಚ್ಛಗೊಳಿಸಬೇಕು? ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಜನರಿಗೆ ಸ್ಯಾನಿಟೈಜರ್ ಯಂತ್ರದ ಬದಲು ಎಲ್ಲಾ ದೇವಾಲಯಗಳ ಹೊರಗೆ ಕೈ ತೊಳೆಯುವ ಯಂತ್ರಗಳನ್ನು ಇರಿಸಿ, ಅಲ್ಲಿ ಸಾಬೂನು ಕೊಡಿ. ನಾವು ಅದನ್ನು ಸ್ವೀಕರಿಸುತ್ತೇವೆ. ದೇವಸ್ಥಾನಕ್ಕೆ ಪ್ರವೇಶಿಸುವ ಯಾವುದೇ ವ್ಯಕ್ತಿಯು ಮನೆಯಿಂದ ಸ್ನಾನ ಮಾಡಿ ದೇವಾಲಯಕ್ಕೆ ಪ್ರವೇಶಿಸುತ್ತಾನೆ” ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Advertisement

 

Advertisement


ಬೂಟುಗಳನ್ನು ತೆಗೆದು ಒಳಗೆ ಬರಬೇಕು ಎಂದು ಕೇಂದ್ರ ತನ್ನ ಸೂಚನೆಯಲ್ಲಿ ತಿಳಿಸಿದೆ. ಅಲ್ಲದೆ, ಪ್ರತಿಮೆಗಳು ಮತ್ತು ಪವಿತ್ರ ಪುಸ್ತಕಗಳನ್ನು ಸ್ಪರ್ಶಿಸಲು ಅನುಮತಿ ಕೊಡುವುದಿಲ್ಲ. ಪವಿತ್ರ ನೀರನ್ನು ಪ್ರೋಕ್ಷಣೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಈಗಾಗಲೇ ರೆಕಾರ್ಡ್ ಆದ ಭಕ್ತಿ ಗೀತೆಗಳು ಮತ್ತು ಹಾಡುಗಳನ್ನು ಶಿಫಾರಸ್ಸು ಮಾಡಲಾಗಿದೆ. ಗಾಯಕರನ್ನು ಕರೆಯುವುದನ್ನು ನಿಷೇಧಿಸಲಾಗಿದೆ. ಪೂಜೆಯ ಸಮಯದಲ್ಲಿ ಸಾಮಾಜಿಕ ದೂರವನ್ನು ಅನುಸರಿಸಬೇಕಾಗುತ್ತದೆ ಎಂದು ಮಾರ್ಗಸೂಚಿ ಹೇಳುತ್ತದೆ. ದೇವಾಲಯದಲ್ಲಿ ಸಾರ್ವಜನಿಕ ಚಾಪೆಗಳನ್ನು ಬಳಸುವ ಬದಲು, ಭಕ್ತರು ತಮ್ಮದೇ ಆದ ವೈಯಕ್ತಿಕ ಮ್ಯಾಟ್ಗಳನ್ನು ತರಬೇಕು, ಅದನ್ನು ಅವರು ತಮ್ಮೊಂದಿಗೆ ಹಿಂತಿರುಗಿಸಬಹುದು ಎಂದು ಸೂಚಿಸಲಾಗಿದೆ.

Advertisement
Share this on...