ಹರಿಪ್ರಿಯ ಚಿತ್ರರಂಗಕ್ಕೆ ಬರಲು ಎದುರಿಸಿದ ಸಂದಿಗ್ದ ಸ್ಥಿತಿ ಏನು ಗೊತ್ತಾ ?

in ಸಿನಿಮಾ 133 views

ಕನ್ನಡ ಚಿತ್ರರಂಗದಲ್ಲಿ ಸದ್ಯದಲ್ಲಿ ಬಹು ಬೇಡಿಕೆಯ ನಟಿ ಎಂದರೆ ಅದು ಹರಿಪ್ರಿಯಾ.  29 ಅಕ್ಟೋಬರ್ 1991 ರಲ್ಲಿ ತೆಲುಗು ಕುಟುಂಬದಲ್ಲಿ ಬೆಂಗಳೂರಿನಲ್ಲಿ ಜನಿಸಿದರು . ಹರಿಪ್ರಿಯಾ ಅವರ ಮೊದಲ ಹೆಸರು ಶ್ರುತಿ. ಇವರು ತಮ್ಮ ಬಾಲ್ಯವನ್ನು ಚಿಕ್ಕಬಳ್ಳಾಪುರದಲ್ಲಿ ಕಳೆದರು. ಅಲ್ಲದೆ ವಿದ್ಯಾಭ್ಯಾಸವನ್ನು ಕೂಡ ಅಲ್ಲೇ ಮುಗಿಸಿದರು. ಹರಿಪ್ರಿಯಾ ಅವರಿಗೆ ಸಿನಿಮಾದಲ್ಲಿ ಯಾವುದೇ ರೀತಿಯ ಆಸಕ್ತಿ ಇರಲಿಲ್ಲ. ಆದರೆ ಮನೆಯವರ ಒತ್ತಾಯದ ಮೇರೆಗೆ ಚಿತ್ರರಂಗದಲ್ಲಿ ಅಭಿನಯಿಸಲು ಒಪ್ಪಿಕೊಂಡರು . ಆ ಸಮಯದಲ್ಲಿ ಹರಿಪ್ರಿಯ ಅವರು ಪಿಯುಸಿಯನ್ನು ಓದುತ್ತಿದ್ದು ಸಿನಿಮಾ ರಂಗ ಪ್ರವೇಶಿಸುವುದು ಅಥವಾ ಪಿಯುಸಿ ಪರೀಕ್ಷೆ ಬರೆಯುವುದು ಎಂಬ ಸಂದಿಗ್ಧ ಸ್ಥಿತಿಯಲ್ಲಿದ್ದರು.  ಆ ನಂತರ ಸಿನಿಮಾ ರಂಗವನ್ನೇ ಆರಿಸಿಕೊಂಡರು.  ಆ ನಂತರ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಇವರ ಕುಟುಂಬ ಸ್ಥಳಾಂತರವಾಯಿತು.

Advertisement

 

Advertisement

Advertisement

ಭರತನಾಟ್ಯದಲ್ಲಿ ಆಸಕ್ತಿ ಇದ್ದುದರಿಂದ ಭರತನಾಟ್ಯ ತರಬೇತಿಯನ್ನು ಪಡೆದರು. ನಂತರ ಬೆಂಗಳೂರಿನ ವಿದ್ಯಾ ಮಂದಿರದಲ್ಲಿ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು.  ಹಲವಾರು ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಿದರು.  ಪ್ರದರ್ಶನವನ್ನು ವೀಕ್ಷಿಸಿದ ರಿಚರ್ಡ್ ಕ್ಯಾಸ್ಟಲ್ ರವರು  ತುಳು ಭಾಷೆಯ ಬಡಿ ಎಂಬ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರು.  ಆ ನಂತರ 2008 ರಲ್ಲಿ ಮನಸುಗಳ ಮಾತು ಮಧುರ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು . ಕಳ್ಳರ ಸಂತೆ , ವಸಂತ ಕಾಲ, ರಾಜಕೀಯ ವಿಡಂಬನೆ,   ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದರು.

Advertisement

 

 

2009  ರಲ್ಲಿ ಅಭಿನಯಿಸಿದ ಕಳ್ಳರ ಸಂತೆ ಸಿನಿಮಾದ ಅಭಿನಯಕ್ಕೆ ಅತ್ಯುತ್ತಮ ನಟಿ ಮತ್ತು ಫಿಲಂ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು . ನಂತರ ಕನ್ನಡ ಅಲ್ಲದೆ ಅನೇಕ ತೆಲುಗು, ತಮಿಳು,  ಮಲಯಾಳಂ,  ಚಿತ್ರಗಳಲ್ಲೂ ಕೂಡ ಅಭಿನಯಿಸಿದರು .  ಮತ್ತೆ  2014 ರಲ್ಲಿ  ಉಗ್ರಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ  ಬಂದರು.  ಆ ನಂತರ  ಬುಲೆಟ್ ಬಸ್ಯಾದಂತ   ಹಾಸ್ಯ ಚಿತ್ರಗಳಲ್ಲಿ ಅಭಿನಯಿಸಿದರು . ದೊಡ್ಡ ಬ್ಯಾನರ್ ಚಿತ್ರಗಳಾದ ರನ್ನ ಮತ್ತು ರಿಕ್ಕಿ  ಸಿನಿಮಾಗಳಲ್ಲಿ ಕೂಡ ನಟಿಸಿದರು.  2019 ರಲ್ಲಿ ಜಯತೀರ್ಥ ಆಕ್ಷನ್ ಕಟ್ ಹೇಳಿರುವ ಪತ್ತೆದಾರಿ ಕಾದಂಬರಿಯನ್ನು ಆಧರಿಸಿದ ಚಿತ್ರವಾದ ಬೆಲ್ ಬಾಟಂ ಚಿತ್ರದಲ್ಲಿ ಹರಿಪ್ರಿಯಾ ಮತ್ತು ರಿಷಬ್ ಶೆಟ್ಟಿ ರೆಟ್ರೋ ಸ್ಟೈಲ್ ನಲ್ಲಿ  ಮಿಂಚಿದ್ದಾರೆ.

 

ನಂತರ ನೀರ್ ದೋಸೆ   ಎಂಬ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆ ಅಭಿನಯಿಸಿದ್ದಾರೆ. ಸತತವಾಗಿ ಹದಿನೇಳು ವರ್ಷಗಳ ಕಾಲ ನಾಯಕಿಯಾಗಿ ಹರಿಪ್ರಿಯ ಮಿಂಚಿದ್ದಾರೆ. ಸರ್ಜಾ ಕುಟುಂಬದ ಅರ್ಜುನ್ ಸರ್ಜಾ,  ಧ್ರುವ ಸರ್ಜಾ,  ಮತ್ತು ಚಿರಂಜೀವಿ ಸರ್ಜಾ,  ಮೂರು ನಾಯಕರುಗಳ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಯಾವ ನಾಯಕಿಯೂ ಮಾಡದ ದಾಖಲೆಯನ್ನು  ಈ ಮೂಲಕ ಒಂದೇ ಕುಟುಂಬದ ಮೂರು ನಾಯಕರುಗಳ ಜೊತೆ ಅಭಿನಯಿಸಿ ದಾಖಲೆಯನ್ನು ಮಾಡಿದ್ದಾರೆ . ಸೃಜನ್ ಲೋಕೇಶ್ ಅವರ ಜೊತೆ ಎಲ್ಲಿದ್ದೆ ಇಲ್ಲಿತನಕ , ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ .

ಸೂಜಿದಾರ ಎಂಬ ಚಿತ್ರದಲ್ಲಿ ಅವರ ಅಭಿನಯವಂತೂ ಮನಮುಟ್ಟುವಂತಿತ್ತು. ಹೀಗೆ ಕನ್ನಡ ಚಿತ್ರರಂಗದಲ್ಲಿ ವಿರಾಮವಿಲ್ಲದೆ ಅಭಿನಯಿಸುತ್ತಾ ಇರುವ ಹರಿಪ್ರಿಯಾ ರವರು ಇನ್ನೂ ಕನ್ನಡ ಚಿತ್ರರಂಗದಲ್ಲಿ  ಬೆಳೆದು ಉನ್ನತ ಸ್ಥಾನಕ್ಕೇರಲಿ  ಇಂದು  ನಾವು ಆಶಿಸೋಣ

Advertisement
Share this on...