ಹರಿಪ್ರಿಯಾ ಅವರಿಂದ ಶುಭ ಸುದ್ದಿಯೊಂದು ಹೊರಬಂದಿದೆ !

in ಮನರಂಜನೆ/ಸಿನಿಮಾ 132 views

ಇತ್ತೀಚೆಗೆ ಚಂದನವನದ ಬಹುಮುಖಿಯಾಗಿ ಖ್ಯಾತರಾಗಿರುವವರು ನಟಿ ಹರಿಪ್ರಿಯಾ ಅವರು. ಇತ್ತೀಚೆಗೆ  ಅವರು ನಿಭಾಯಿಸಿರುವ  ಬಹುತೇಕ ಪಾತ್ರಗಳು ಬಹಳ ವಿಭಿನ್ನ ಹಾಗೂ ಬೋಲ್ಡ್  ಪಾತ್ರಗಳನ್ನೇ ಮಾಡುತ್ತಾ  ವೀಕ್ಷಕರ ಮೊಗದಲ್ಲಿ ಸಂತಸ ತರಿಸುತ್ತಿದ್ದಾರೆ. ಇನ್ನು ಈ ಸ್ಯಾಂಡಲ್ ವುಡ್ ಕ್ವೀನ್ ಅಳುಮುಂಜಿ ಪಾತ್ರಗಳನ್ನು ಮಾಡುವುದಂತು ತೀರಾ ಕಡಿಮೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತ, ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿರುವ  ಅವರೀಗ ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೌದು  ನೋಯ್ಡಾದಲ್ಲಿ ನಡೆದ 4ನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿ ಹರಿಪ್ರಿಯಾ ಅಭಿನಯದ “ಅಮೃತಮತಿ” ಚಿತ್ರ ಪ್ರದರ್ಶನಗೊಂಡಿದ್ದು, ಈ ಚಿತ್ರದ ಅಭಿನಯಕ್ಕಾಗಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ. ಬ್ರೆಜಿಲ್, ಬ್ರಿಟನ್, ಚೀನಾ, ಕೊರಿಯಾ, ಅರ್ಜೆಂಟೈನ, ಅಲ್ಜೀರಿಯಾ, ಸ್ಪೇನ್, ಟರ್ಕಿ ಇನ್ನೂ ಮೊದಲಾದ ರಾಷ್ಟ್ರಗಳ ಸಿನಿಮಾಗಳನ್ನು ಹಿಂದಿಕ್ಕಿ ಅಮೃತಮತಿಯಲ್ಲಿನ ಅಭಿನಯಕ್ಕಾಗಿ ಕನ್ನಡ ಶ್ರೇಷ್ಟ  ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.

Advertisement

Advertisement

ಇದೀಗ ಹರಿಪ್ರಿಯಾ  ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಕನ್ನಡ್ ಗೊತ್ತಿಲ್ಲ’ ಚಿತ್ರದಿಂದ ಶುಭ ಸುದ್ಧಿಯೊಂದು ಹೊರಬಂದಿದ್ದು, ಬೇರೆ ಭಾಷೆಯ ಚಿತ್ರಗಳೆಲ್ಲ ಕನ್ನಡಕ್ಕೆ ಡಬ್ ಆಗುತ್ತಿವೆ, ಆದರೆ ಕನ್ನಡದ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗುತ್ತಿಲ್ಲ  ಎಂಬ ಅನೇಕರ ಬೇಸರದ ನಡುವೆ, ‘ಕನ್ನಡ್ ಗೊತ್ತಿಲ್ಲ’  ಚಿತ್ರ ನಾಲ್ಕು ಭಾಷೆಗಳಿಗೆ ಡಬ್ ಆಗುತ್ತಿದೆ. ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಮಯೂರ ರಾಘವೇಂದ್ರ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಸಿನಿಮಾ ವರ್ಷಾಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಲಗ್ಗೆ ಇಟ್ಟಿದ್ದು, ಪ್ರೇಕ್ಷಕರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಇದೀಗ ಅಮೆಜಾನ್ ಪ್ರೈಮ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದ್ದು, ಇಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿದೆ ಮತ್ತು ಪರಭಾಷಿಕರಿಂದಲೂ ಮೆಚ್ಚುಗೆ ಬಂದಿರುವುದರಿಂದ ನಾಲ್ಕು ಭಾಷೆಗಳಿಗೆ ಡಬ್ ಮಾಡಲು ಮುಂದಾಗಿದ್ದಾರೆ.

Advertisement

Advertisement

ಕನ್ನಡ್ ಗೊತ್ತಿಲ್ಲ ಸಿನಿಮಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಕಂಡಿದ್ದು ಈ ಯಶಸ್ಸಿನ ನಂತರ, ಸಂಜಯ್ ಲಾಲ್ವಾನಿ ಪ್ರೊಡಕ್ಷನ್ಸ್  ಅವರು ಈ ಚಿತ್ರದ ಡಬ್ಬಿಂಗ್ ಹಕ್ಕನ್ನು ಖರೀದಿಸಿದ್ದಾರೆ. ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ. ಇನ್ನು ರಾಮರಥನ ನಿರ್ಮಾಣ ಸಂಸ್ಥೆಯ ಮೂಲಕ ಕುಮಾರ ಕಂಠೀರವ ಎಂಬುವವರು ‘ಕನ್ನಡ್ ಗೊತ್ತಿಲ್ಲ’ ಚಿತ್ರವನ್ನು ನಿರ್ಮಿಸಿದ್ದಾರೆ. ಹರಿಪ್ರಿಯಾ, ಸುಧಾರಾಣಿ, ಸಿಹಿ ಕಹಿ ಚಂದ್ರು, ಧರ್ಮಣ್ಣ ಮುಂತಾವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದರೆ, ಗಿರಿಧರ್ ದಿವಾನ್ ಛಾಯಾಗ್ರಹಣವಿದೆ. ಇನ್ನು ಈ ವಿಚಾರದಿಂದ ಸಖತ್ ಖುಷಿಯಾಗಿರುವ ನಿರ್ದೇಶಕ ಮಯೂರ ಅವರು “ಅದಾಗ್ಯೂ , ನನ್ನ ಈ ಮೊದಲ ಚಿತ್ರವು ಅನೇಕ ಭಾಷೆಗಳ ಪ್ರೇಕ್ಷಕರನ್ನು ತಲುಪುತ್ತಿದೆ ಎನ್ನುವುದು ನನಗೆ ಖುಷಿಯ ಸಂಗತಿ, ” ಎಂದು ಹೇಳಿದ್ದಾರೆ.

Advertisement
Share this on...