ಹರಿಪ್ರಿಯಾ ಅವರ ಈ ಸಿನಿಮಾ ಇದೀಗ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ !

in ಮನರಂಜನೆ/ಸಿನಿಮಾ 92 views

ಮನಸುಗಳ ಮಾತು ಮಧುರವೆಂದು ಹೇಳುತ್ತಾ, ವಸಂತಕಾಲದಲ್ಲಿ ಅರಳಿ, ಮಳೆ ಬಂದರು ಸರಿ ಮಂಜಲ್ಲಾದರು ಇರಲಿ ತಮ್ಮ ಅಭಿನಯದ ಮೂಲಕ ಛಾಪು ಮೂಡಿಸುತ್ತಾ, ಕಳ್ಳರ ಸಂತೆಯಲ್ಲಿ ಮೊಗ್ಗಾಗಿ ಅರಳಿ, ಉಗ್ರಂ ನ ಅರಸಿಯಾಗಿ, ನಿರ್ ದೋಸೆ ತಿನ್ನಿಸುವ ಮೂಲಕ ಪಡ್ಡೆ ಹುಡಿಗರ ನಿದ್ದೆ ಗೆಡಿಸಿ, ರನ್ನ ಹಾಗೂ ಭರ್ಜರಿಯ ಮೂಲಕ ಟಾಪ್ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಸ್ಥಾಪಿತರಾದವರು ನಟಿ ಹರಿಪ್ರಿಯಾ, ಹದಿಹರಿಯದ ಹುಡುಗರಿಂದ ಹಿಡದು ವಯ್ಯಾಸ್ಸಾದ ಮುದುಕರ ವರೆಗೂ ಈ ದುಂಡು ಮುಖದ ಚೆಲುವಯನ್ನು ನೋಡಿದರೆ ಏತಕೇ.. ಭೊಗಸೆ ತುಂಬ ಆಸೆ ನೀಡುವೆ ಎಂದು ಹೇಳುತ್ತಾರೆ. ಪಡ್ಡೆ ಹುಡುಗರ ಹಾಟ್ ಫೇವರೇಟ್ ಕೂಡ ಇವರೇ, ಚಿತ್ರರಂಗದ ಭರವಸೆಯ ನಾಯಕ ನಟಿಯೂ ಇವರೇ. ಇನ್ನೂ ನಟಿ ಹರಿಪ್ರಿಯಾ ಅವರು ಅಕ್ಟೋಬರ್ ೨೯ ೧೯೯೧ ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸುತ್ತಾರೆ. ಇವರ ಹುಟ್ಟಿನ ಹೆಸರು ಶೃತಿ ಚಂದ್ರಸೇನ ಎಂದು. ಶಾಲ ಶಿಕ್ಷಣವನ್ನು ಮುಗಿಸಿದ ನಂತರ ಭರತನಾಟ್ಯ ಕಲೆಯುವುದಕ್ಕೆ ಮುಂದಾದ ಅವರು, ನಂತರ ಬೆಂಗಳೂರಿಗೆ ಸ್ಥಳಾಂತರ ಗೊಳ್ಳುತ್ತಾರೆ. ನಂತರ ಬೆಂಗಳೂರಿನ  ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಶಾಲಾ ಕಾಲೇಜುಗಳಲ್ಲಿ  ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಅವರಿಗೆ ನಟನೆಯ ಮೇಲೆ ಅಪಾರ ಒಲವಿತ್ತು.

Advertisement

Advertisement

ನಂತರ ಪಿಯೂಸಿ ಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಂದರ್ಭದಲ್ಲಿ  ನಿರ್ದೇಶಕ ರಿಚರ್ಡ್ ಕ್ಯಾಸ್ಟೆಲಿನೊ ಎಂಬುವವರು ಹರಿಪ್ರಿಯಾ ಅವರು ಅಭಿನಯಿಸಿದ್ದ ಕಾರ್ಯಕ್ರಮಗಳ ಸ್ಟಿಲ್‌ಗಳನ್ನು ನೋಡಿ ,  ತುಳು ಭಾಷೆಯ ಬಡಿ ಎಂಬ ಚಿತ್ರದಲ್ಲಿ ಮಹಿಳಾ ಪ್ರಧಾನ  ಪಾತ್ರವನ್ನು ನೀಡುತ್ತಾರೆ. ಈ ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿಯನ್ನು ಹರಿಪ್ರಿಯಾ ಪ್ರಾರಂಭಿಸುತ್ತಾರೆ. ನಂತರ ೨೦೦೮ ರಲ್ಲಿ ಮನಸುಗಳ ಮಾತು ಮಧುರ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು ನಂತರ ಕಳ್ಳರ ಸಂತೆ ಸಿನಿಮಾ ಅಭಿನಯಕ್ಕಾಗಿ ಅತ್ಯುತ್ತಮ ಕನ್ನಡ ನಟಿ ಫಿಲ್ಮ್‌ಫೇರ್ ಅವಾರ್ಡ್ ಕಾರ್ಯಕ್ರಮದಲ್ಲೂ ನಾಮನಿರ್ದೇಶನ ಗೊಳ್ಳುತ್ತಾರೆ.

Advertisement

ನಂತರ  ೨೦೧೦ ರಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಅವರು ಅಲ್ಲಿಯೂ ಕೂಡ ಉತ್ತಮ ಯಶಸ್ಸನ್ನು ಕಾಣುತ್ತಾರೆ. ನೋಡು ನೋಡುತ್ತಲೇ ತಮ್ಮ ೧೦ ವರುಷಗಳ ಸಿನಿ ಜರ್ನಿಯಲ್ಲಿ, ಕಳ್ಳರಸಂತೆ, ಉಗ್ರಂ, ರನ್ನ, ಭರ್ಜರಿ, ನೀರ್ ದೋಸೆ, ಬೆಲ್ ಬಾಟಂ , ರಿಕ್ಕಿ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ.

Advertisement

ಇದೀಗ ಹಿರಿಯ ನಿರ್ದೇಶಕರಾದಂತಹ ಬರಗೂರು ರಾಮಚಂದ್ರಪ್ಪ  ಅವರು ನಿರ್ದೇಶಿಸಿ, ನಟಿ ಹರಿಪ್ರಿಯಾ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಅಮೃತಮತಿ’ ಎಂಬ ಸಿನಿಮಾವೂ ಅಮೆರಿಕಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು, ಅಮೆರಿಕದ ಬೋಸ್ಟನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಗೊಳ್ಳುತ್ತಿದೆ.  ಇನ್ನು ಈ ಸಿನಿಮಾವು ಹದಿಮೂರನೇ ಶತಮಾನದ ಜನ್ನಕವಿ ಅವರು ಬರೆದಿರುವ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿತ ಚಿತ್ರ ಇದಾಗಿದ್ದು, ಇದೀಗ
ಅಮೆರಿಕಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಈಗಾಗಲೇ ಅಮೃತಮತಿ ಸಿನಿಮಾವೂ ನೋಯ್ಡಾ, ಆಸ್ಟ್ರಿಯಾ ಮತ್ತು ಅಟ್ಲಾಂಟ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಅವಕಾಶ ಪಡೆದಿದ್ದು, ಇದು ನಾಲ್ಕನೇ ಚಿತ್ರೋತ್ಸವವಾಗಿದೆ.

ನೋಯ್ಡಾ ಚಿತ್ರೋತ್ಸವದಲ್ಲಿ ಅಮೃತಮತಿ ಪಾತ್ರ ನಿರ್ವಹಿಸಿರುವ ಹರಿಪ್ರಿಯಾ ಉತ್ತಮ ನಟಿ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಇನ್ನೂ ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಮೂಲಕ ಪುಟ್ಟಣ್ಣನವರು ನಿರ್ಮಿಸಿರುವ ಈ ಚಿತ್ರಕ್ಕೆ ಸುರೇಶ್ ಅಸರು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ನಟ್ರಾಅಜ್ ಶಿವು ಮತ್ತು ಪ್ರವೀಣ್ ಸಹ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...