ನಾನಾ ವೇಷಗಳಲ್ಲಿ ಹರಿಪ್ರಿಯ..ಇದು ಸಿನಿಮಾ ಅಥವಾ ಯಾವುದೇ ಫೋಟೋಶೂಟ್ ಅಲ್ಲ…!

in ಮನರಂಜನೆ/ಸಿನಿಮಾ 131 views

ಸಿನಿಮಾ ನಟ-ನಟಿಯರು ಧಾರಾವಾಹಿಗೆ ಬರುವುದು ಸಾಮಾನ್ಯ. ಇತ್ತೀಚೆಗಷ್ಟೇ ಸುಧಾರಾಣಿ ರಾಘವೇಂದ್ರ ರಾಜ್​ಕುಮಾರ್ ಬ್ಯಾನರ್​​ ಅಡಿಯಲ್ಲಿ ತಯಾರಾಗುತ್ತಿರುವ ಉದಯ ಟಿವಿಯ ‘ಜೀವ ಹೂವಾಗಿದೆ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪ್ರಿಯಾಂಕ ಉಪೇಂದ್ರ, ಅಜಯ್ ರಾವ್ ಹಾಗೂ ಇನ್ನೂ ಕೆಲವರು ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇನ್ನು ಟಗರು ಖ್ಯಾತಿಯ ಮಾನ್ವಿತ ಕಾಮತ್ ‘ಕನ್ನಡತಿ’ ಧಾರಾವಾಹಿಯ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಇತ್ತೀಚೆಗಷ್ಟೇ ರಂಜನಿ ರಾಘವನ್ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದರು. ಇದೀಗ ಹರಿಪ್ರಿಯ ಸರದಿ. ಈ ಕಳ್​​​​ಭಟ್ಟಿ ಕುಸುಮ ಕಿರುತೆರೆಗೆ ಬಂದಿದ್ದಾರೆ. ‘ಸಂಘರ್ಷ’ ಧಾರಾವಾಹಿಯಲ್ಲಿ ಹರಿಪ್ರಿಯ ನಟಿಸುತ್ತಿದ್ದಾರೆ.ಇದೇನಪ್ಪ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿರುವ ಹರಿಪ್ರಿಯ ಧಾರಾವಾಹಿಯಲ್ಲಿ ನಟಿಸಲು ಬಂದ್ರಾ ಎಂದುಕೊಳ್ಳಬೇಡಿ. ಹರಿಪ್ರಿಯ ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದು. ವಿಶೇಷ ಎಂದರೆ ಹರಿಪ್ರಿಯ ‘ಸಂಘರ್ಷ’ ಧಾರಾವಾಹಿಯಲ್ಲಿ ವಿವಿಧ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Advertisement

ಧಾರಾವಾಹಿಗಾಗಿ ಮಾಡಿಸಿರುವ ಕೆಲವೊಂದು ಫೋಟೋಶೂಟ್ ಹಾಗೂ ವಿಡಿಯೋಗಳನ್ನು ಹರಿಪ್ರಿಯ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಕಾವಿ ಧರಿಸಿದ ಸನ್ಯಾಸಿನಿ ಆಗಿ, ವೃದ್ಧೆಯಾಗಿ ಮೇಕಪ್ ಮಾಡಿಕೊಂಡಿರುವ ವಿವಿಧ ಲುಕ್​​​​​ನಲ್ಲಿ ಹರಿಪ್ರಿಯ ಕಾಣಿಸಿಕೊಂಡಿದ್ದಾರೆ.

Advertisement

‘ಸಂಘರ್ಷ’, ಶ್ರುತಿ ನಾಯ್ಡು ನಿರ್ಮಾಣದ ಧಾರಾವಾಹಿ ಆಗಿದ್ದು ಹರಿಪ್ರಿಯ ತಮ್ಮ ಧಾರಾವಾಹಿಯಲ್ಲಿ ನಟಿಸುತ್ತಿರುವ ವಿಚಾರವನ್ನು ಶ್ರುತಿ ನಾಯ್ಡು ಅವರೇ ಹೇಳಿದ್ದಾರೆ. ಹಣ ಮತ್ತು ಅಹಂಕಾರದ ಮದದಿಂದ ಮೆರೆಯುವ ಗ್ರಾಮದ ಒಡತಿ ಭೈರಾದೇವಿ ಹಾಗೂ ಐಎಎಸ್ ಅಧಿಕಾರಿ ಇಂದಿರಾ ನಡುವೆ ನಡೆಯುವುದೇ ಸಂಘರ್ಷ. ಐಎಎಸ್ ಅಧಿಕಾರಿ ಪಾತ್ರದಲ್ಲಿ ತೇಜಸ್ವಿನಿ, ಭೈರಾದೇವಿ ಪಾತ್ರದಲ್ಲಿ ವನಿತಾ ವಾಸು ನಟಿಸುತ್ತಿದ್ದಾರೆ. ಉಳಿದಂತೆ ರೋಹಿತ್, ರೂಪ ಪ್ರಭಾಕರ್, ಸುಧಾ ಪ್ರಸನ್ನ, ಸುನಿಲ್ ಸಾಗರ್, ನಾಗೇಂದ್ರ ಷಾ ಹಾಗೂ ಇನ್ನಿತರರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಈ ಧಾರಾವಾಹಿಯನ್ನು ಲೋಕೇಶ್ ಭವಾನಿ ನಿರ್ದೇಶಿಸುತ್ತಿದ್ದಾರೆ.

Advertisement

 

View this post on Instagram

 

😈

A post shared by Hariprriya (@iamhariprriya) on

ಮುಂದಿನ ವಾರದಿಂದ ನವರಾತ್ರಿ ಆರಂಭವಾಗುತ್ತಿದೆ. ನವರಾತ್ರಿ ವಿಶೇಷವಾಗಿ ಹರಿಪ್ರಿಯ ನಟಿಸುವ ಎಪಿಸೋಡ್​​ಗಳು ಪ್ರಸಾರವಾಗುತ್ತಿದೆ. ನಮ್ಮ ಧಾರಾವಾಹಿಯಲ್ಲಿ ಹರಿಪ್ರಿಯ ನಟಿಸುತ್ತಿರುವುದು ಸಂತೋಷದ ವಿಚಾರ. ಹರಿಪ್ರಿಯ ಪಾತ್ರದಿಂದ ನಮ್ಮ ಧಾರಾವಾಹಿಗೆ ಟ್ವಿಸ್ಟ್ ಸಿಗಲಿದೆ ಎಂದು ಶ್ರುತಿ ನಾಯ್ಡು ಹೇಳಿದ್ದಾರೆ. ಕಿರುತೆರೆ ವೀಕ್ಷಕರು ಕೂಡಾ ಈ ವಿಶೇಷ ಸಂಚಿಕೆಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

Advertisement
Share this on...