170 ಎಕರೆ ಜಮೀನನ್ನು ದಾನ ಮಾಡಿದ್ದ ಕನ್ನಡದ ಖ್ಯಾತ ನಟ…ದಾನ ಮಾಡಿದ್ದು ಯಾರಿಗೆ ಗೊತ್ತಾ…?

in ಮನರಂಜನೆ 70 views

ಕೆಲವರು ಹುಟ್ಟಿರುವುದೇ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಯಾಕೆಂದರೆ ಅವರು ಯಾವತ್ತೂ ಹಣದ ಮೌಲ್ಯವನ್ನು ನೋಡುವುದಿಲ್ಲ ಮಾನವೀಯತೆ ಹಾಗೂ ಹೃದಯದ ಮೌಲ್ಯಗಳನ್ನು ನೋಡುತ್ತಾರೆ. ಈ ಕನ್ನಡದ ನಟ ಕೂಡ ಹಾಗೆ ನೂರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಹಿಂದೆ-ಮುಂದೆ ನೋಡದೆ ದಾನ ಮಾಡಿದ್ದರು. ಅದು ಯಾರಿಗೆ ಗೊತ್ತಾ..? ಆ ವಿಷಯವನ್ನು ಕೇಳಿದರೆ ಅವರ ಮೇಲೆ ಇನ್ನಷ್ಟು ಗೌರವ ಹುಟ್ಟುತ್ತದೆ.ಒಂದು ಕಡೆ ದಟ್ಟ ಪರ್ವತಗಳು, ಇನ್ನೊಂದು ಕಡೆ ಕೊರೆಯುವ ಚಳಿ. ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಕುತಂತ್ರಿ ಚೀನಾ. ಹೀಗೆ ಹೊಂಚು ಹಾಕಿ ಕುಳಿತಿರುವ ಶತ್ರುಗಳನ್ನು ತಡೆದು ನಮ್ಮನ್ನು ರಕ್ಷಿಸುತ್ತಿದ್ದಾರೆ ನಮ್ಮ ವೀರ ಸೈನಿಕರು. ಅವರಿಗೆ ನಾವು ಎಷ್ಟು ಆಭಾರಿಯಾಗಿದ್ದರು ಸಾಲದು. ವೀರ ಯೋಧರಿಗಾಗಿ 170 ಎಕರೆ ಜಮೀನನ್ನು ಕೊಟ್ಟಿದ್ದರು ಕನ್ನಡದ ಖ್ಯಾತ ನಟರೊಬ್ಬರು ಅವರು ಯಾರು ಗೊತ್ತಾ..?

Advertisement

 

Advertisement


ಮೂರು ಭಾಷೆಗಳಲ್ಲಿ ಸೋಲಿಲ್ಲದ ಸರದಾರನಂತೆ ಟಾಪ್ ನಟನಾಗಿದ್ದಾಗ ಕಾಣದ ಕೆಟ್ಟ ಕೈಗಳಿಗೆ ಸಿಕ್ಕಿ ಒಂದು ವರ್ಷ ಜೈಲಿನಲ್ಲಿದ್ದು ಮತ್ತೆ ಆ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗದ ಕನ್ನಡದ ನಟ ಸುಮನ್. ಆದರೆ ಹೃದಯವಂತಿಕೆಯಲ್ಲಿ ಇವರು ಯಾವಾಗಲೂ ಸೂಪರ್ ಹೀರೋ. ಹೌದು, ವೀರ ಮರಣ ಹೊಂದಿದ ವೀರ ಯೋಧರ ಕುಟುಂಬಗಳಿಗೆ ಹೈದರಾಬಾದಿನ ಭುವನಗಿರಿ ಬಳಿಯಿದ್ದ ತನ್ನ 170 ಎಕರೆ ಜಮೀನನ್ನು ಕೊಟ್ಟಿದ್ದರು ನಟ ಸುಮನ್. ಇಲ್ಲಿ ಏನಿಲ್ಲಾ ಅಂದರೂ ಒಂದು ಎಕರೆಗೆ ಒಂದರಿಂದ ಒಂದೂವರೆ ಕೋಟಿ ಬೆಲೆ ಬಾಳುತ್ತದೆ. ಜಮೀನಿನ ಪಕ್ಕದಲ್ಲೇ ಮೆಟ್ರೋ ರೂಟ್ ಬರುತ್ತದೆ. ಆದರೆ ಅದಾವುದೂ ಲೆಕ್ಕಿಸದ ನಟ ಸುಮನ್ ಅಲ್ಲಿದ್ದ ಎಲ್ಲಾ ಜಮೀನನ್ನು ಯೋಧರ ಕುಟುಂಬಗಳಿಗೆ ಕೊಟ್ಟರು.

Advertisement

 

Advertisement


ನಮಗಾಗಿ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಾರೆ. ಹಾಗಾಗಿ ಯೋಧರ ಕುಟುಂಬಗಳಿಗೆ ಆಗಿರುವ ನಷ್ಟಕ್ಕೆ ಹೋಲಿಕೆ ಮಾಡಿದರೆ ಜಮೀನನ್ನು ಕಳೆದುಕೊಳ್ಳುವುದು ದೊಡ್ಡ ನಷ್ಟ ಅಲ್ಲ ಎಂದು ಹೇಳಿ ಹಿಂದೆ-ಮುಂದೆ ನೋಡದೆ ಜಮೀನನ್ನು ಯೋಧರ ಕುಟುಂಬಗಳಿಗೆ ಬರೆದುಕೊಟ್ಟು ಮಾದರಿಯಾಗಿದ್ದಾರೆ. ಸಹಾಯ ಮಾಡುವುದನ್ನು ಫೋಟೋ ತೆಗೆದುಕೊಂಡು ಬಿಲ್ಡಪ್ ಕೊಡುವ ಅದೆಷ್ಟೋ ಸ್ಟಾರ್ ನಟರ ಮಧ್ಯೆ ಯಾವುದೇ ಪಬ್ಲಿಸಿಟಿ ಮಾಡದೆ 170 ಎಕರೆ ಜಮೀನನ್ನು ಕೊಟ್ಟ ನಟ ಸುಮನ್ ರಿಯಲಿ ಗ್ರೇಟ್. ಸ್ಟಾರ್ ಗಿರಿ ಇಟ್ಟುಕೊಂಡರೆ ಏನು ಲಾಭ..? ಹೃದಯವಂತಿಕೆ ಇರಬೇಕು ಅಲ್ಲವೇ..? ನಾವು ನಮ್ಮ ಕುಟುಂಬದ ಜೊತೆ ಯಾವುದೇ ಭಯ ಇಲ್ಲದೆ ರಾತ್ರಿ ಮಲಗುತ್ತೇವೆ ಅಂದರೆ ಅದಕ್ಕೆ ಕಾರಣ ನಮಗಾಗಿ ಎದೆಕೊಟ್ಟು ನಿಂತಿರುವ ಯೋಧರು. ಹೀಗೆ ಶತ್ರುಗಳ ಜೊತೆ ಹೋರಾಡಿ ವೀರ ಮರಣ ಹೊಂದಿದ ಯೋಧರ ಕುಟುಂಬಗಳಿಗೆ ನಟ ಸುಮನ್ ಮಾಡಿದಂತಹ ಸಹಾಯ ಮೆಚ್ಚುವಂತಹದು.

– ಸುಷ್ಮಿತಾ

Advertisement
Share this on...