ಕೂದಲ ಆರೈಕೆಗಾಗಿ ಉಪಾಯಗಳು

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 848 views

ನಮ್ಮ ಹಿರಿಯರು, ಆಚಾರ್ಯರು, ಗುರುಗಳು, ಯತಿಗಳು, ಮಹರ್ಷಿಗಳು ಹಲವಾರು ಸಂಸ್ಕಾರ, ವೇದ, ಪುರಾಣ, ಆಯುರ್ವೇದ ಇನ್ನಿತರ ಹಲವಾರು ವಿಚಾರಧಾರೆಗಳನ್ನು ತಮ್ಮ ಅನುಭವಪೂರ್ವಕವಾಗಿ ನಮಗೋಸ್ಕರ ಬಿಟ್ಟು ಹೋಗಿದ್ದಾರೆ . ಅಂತಹ ಗುರುಗಳ ಮಾರ್ಗದರ್ಶನದಲ್ಲಿ ಬಂದಿರುವಂತಹ ಹಲವಾರು ಆಯುರ್ವೇದ –  ಮನೆ ಮದ್ದಿನ ವಿಚಾರಗಳನ್ನು ಕ್ರೋಢೀಕರಿಸಿ ಮನೆ ಮದ್ದು –  ಗೃಹ ಸಂಜೀವಿನಿ ಎಂಬ ಬರಹಗಳ ಸರಣಿಯನ್ನು ಶ್ರೀ. ಶ್ರೀ. ರವಿಶಂಕರ್ ಗುರೂಜಿರವರು ನಿಮ್ಮ ಮುಂದೆ ಪುಟ್ಟದಾಗಿ  ಸಮರ್ಪಿಸುತ್ತಿದ್ದಾರೆ. ಈ ಬರಹಗಳ ಸರಣಿಯು ನಿಮ್ಮ ಮನೆಗೊಂದು – ಬದುಕಿಗೊಂದು – ಆರೋಗ್ಯ ಜೀವನಕ್ಕೊಂದು ಯಶೋಗಾಥೆಯಾಗಲಿ. ನಮ್ಮ ಹಿರಿಯರು ನಮಗೆ ಕೊಟ್ಟಿರುವ ಈ ಮನೆಮದ್ದು ಸಂಜೀವಿನಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಅದನ್ನು  ಸಮರ್ಪಕವಾಗಿ  ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೀವು ನಿಮ್ಮ ಜೀವನವನ್ನು ಹಾಲು – ಸಕ್ಕರೆಯಂತಾಗಿಸಿಕೊಂಡರೆ ಅದುವೇ  ಬಹು ದೊಡ್ಡ ಸಂತಸ.

Advertisement

Advertisement

೧. ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ಅಥವಾ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದ್ದೇ ಆದಲ್ಲಿ ಕೂದಲು ಉದುರುವುದು ಕಡಿಮೆಯಾಗುತ್ತದೆ.

Advertisement

೨. ಮೆಂತ್ಯವನ್ನು ಹರಳೆಣ್ಣೆಯೊಂದಿಗೆ ಬೆರೆಸಿಕೊಂಡು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ .ಕೂದಲು ಕಾಂತಿಯುತವಾಗಿರುತ್ತದೆ.

Advertisement

೩. ಗರಿಕೆ ಹುಲ್ಲಿನ ರಸವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಕೂದಲು ಬೆಳ್ಳಗಾಗುವುದು , ತಲೆಯಲ್ಲಿ ಹೊಟ್ಟು ಉದುರುವುದು ಪರಿಹಾರವಾಗುತ್ತದೆ.

೪. ಮೆಂತ್ಯ ಪುಡಿಯನ್ನು ತಲೆಗೆ ಹಚ್ಚಿ ತಣ್ಣೀರಿನಲ್ಲಿ ಸ್ನಾನದಿಂದ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದನ್ನು ನಿಲ್ಲಿಸಬಹುದು.

೫. ಮೆಂತ್ಯ ಸೊಪ್ಪನ್ನು ಎಳನೀರಿನಲ್ಲಿ ಅರೆಯಿರಿ.  ತಲೆಗೂದಲಿಗೆ ಹಚ್ಚಿ ಎರಡು ಗಂಟೆಗಳ ನಂತರ ತಲೆ ಸ್ನಾನ ಮಾಡಿ.  ಹೀಗೆ ವಾರದಲ್ಲಿ ಎರಡು ಬಾರಿ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ.

೬. ನಿಂಬೆ ರಸದಿಂದ ತಲೆಯನ್ನು ತಿಕ್ಕಿ ತಣ್ಣೀರಿನಿಂದ ತಲೆ ಸ್ನಾನ ಮಾಡಿ  ಇದರಿಂದ ಕೂದಲುದುರುವುದು ನಿಲ್ಲುತ್ತದೆ.

೭. ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟ ಬಹುದು. ಆದರೆ ಪ್ರತಿ ದಿನ ಬಿಸಿ ನೀರಿನ ಬದಲು ತಣ್ಣೀರಿನಲ್ಲಿ ತಲೆಗೆ ಸ್ನಾನ ಮಾಡಬೇಕು.

೮.  ಮೆಂತ್ಯವನ್ನು ನೀರಿನಲ್ಲಿ ನೆನೆ ಹಾಕಿ ನುಣ್ಣಗೆ ಅರೆದು ಅಂಗೈ – ಅಂಗಾಲುಗಳಿಗೆ ಲೇಪಿಸಿಕೊಂಡರೆ ಅಂಗಾಲು – ಅಂಗೈ ಉರಿ ಉಪಶಮನವಾಗುವುದು.

೯. ಜೀರಿಗೆಯನ್ನು ಹಾಲಿನಲ್ಲಿ ಚೆನ್ನಾಗಿ ಅರೆದು ತಲೆಗೆ ಹಚ್ಚುತ್ತಿದ್ದರೆ ತಲೆಯಲ್ಲಿ ಹೊಟ್ಟು ಏಳುವುದು ನಿಲ್ಲುತ್ತದೆ.

೧೦. ಮನೆಯಲ್ಲಿ ಮಾಡಿದ ಸೀಗೆಕಾಯಿ  ಪುಡಿಯನ್ನು ಕುದಿಸಿ ಆ ಕಷಾಯವನ್ನು ತಲೆಯ ಕೂದಲಿನ ಬುಡಕ್ಕೆ ಸವರಿ ಮೂರು ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ.

೧೧. ರಾತ್ರಿ ಮಲಗುವಾಗ ನಿಂಬೆರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುವುದು.

೧೨. ಗರುಗದ ಸೊಪ್ಪಿನ ರಸ, ನೆಲ್ಲಿಕಾಯಿ ರಸ , ಜೇಷ್ಠ ಮಧು, ತಿಲ ತೈಲದಲ್ಲಿ ಪಾಕ ಮಾಡಿ ಮಂಡೆಗೆ ಹಚ್ಚಲು ಕೂದಲು ಕಪ್ಪಾಗುವುದು.

೧೩. ಮೆಹಂದಿ ಎಲೆಯನ್ನು ರುಬ್ಬಿ ಅದಕ್ಕೆ ಎಳ್ಳೆಣ್ಣೆಯನ್ನು ಹಾಕಿ ಕಾಯಿಸಿ ಒಂದು ಸೀಸೆಯಲ್ಲಿ ಇಟ್ಟುಕೊಂಡು ಶುಕ್ರವಾರ , ಮಂಗಳವಾರ ತಲೆಗೆ ಹಚ್ಚಿಕೊಂಡು ಎರಡು ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದು ನಿಲ್ಲುವುದು.

೧೪. ಎಕ್ಕದ ಹಾಲನ್ನು ಕೂದಲು ಉದುರಿ ಬೊಡುತಲೆ ಕಾಣುತ್ತಿದ್ದಾಗ ಬೆಣ್ಣೆಯಲ್ಲಿ ಕಳಿಸಿ ಲೇಪಿಸಲು ಕೂದಲು ಹುಟ್ಟುತ್ತದೆ.

೧೫. ಹತ್ತಿ ಬೀಜದ ತಿರುಳನ್ನು ಕುರಿಯ ಹಾಲಿನಲ್ಲಿ ಅರೆದು ಮಂಡೆಗೆ ಲೇಪಿಸಲು ನೆರೆತ ಮಂಡೆ ೭ ದಿನಗಳಲ್ಲಿ ಕಪ್ಪಾಗುವುದು.

೧೬. ತಲೆ ಹೊಟ್ಟಿಗೆ ಮೊಸರನ್ನು ತಲೆಗೆ ಮರ್ದನ ಮಾಡಿ ೨ ಗಂಟೆ ಬಿಟ್ಟು ಸ್ನಾನ ಮಾಡಲು ಹೊಟ್ಟು ನಿವಾರಣೆಯಾಗುವುದು.

೧೭. ರಾತ್ರಿ ಮಲಗುವ ಮುಂಚೆ ಸಾಸಿವೆ ಎಣ್ಣೆಯನ್ನು ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿ ಸೀಗೆ ಕಾಯಿ ಉಪಯೋಗಿಸಲು ಕೂದಲು ಬೆಳೆಯುವುದು.

೧೮. ಕ್ಯಾರೆಟ್ ಮತ್ತು ನಿಂಬೆಹಣ್ಣಿನ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿಟ್ಟು  ಕೊಳಿ. ಅದಕ್ಕೆ ಕೊಬ್ಬರಿ ಎಣ್ಣೆಗೆ  ಸೇರಿಸಿ ಕುದಿಸಿ . ಇದನ್ನು ಸದಾ ಬಳಸುತ್ತಿದ್ದರೆ ಕೂದಲು ಕಪ್ಪಾಗಿ , ಸೊಂಪಾಗಿ ಬೆಳೆಯುತ್ತದೆ.

೧೯. ಶ್ರೀಗಂಧದ ಜೊತೆಗೆ ಸೀಬೆಯ ಎಲೆಗಳನ್ನು ತೇದು ಹಚ್ಚಿದರೆ ಕಜ್ಜಿ ತುರಿ , ಹುಲ್ಲು ಕಡ್ಡಿಗಳು ಮಾಯವಾಗುತ್ತದೆ . ಇದೇ ಲೇಪನವನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಹೇನುಗಳಿಂದ  ಪಾರಾಗಬಹುದು.

೨೦. ಬಿಲ್ವ ಪತ್ರೆಯ ರಸವನ್ನು ನಿತ್ಯ ತಲೆಗೆ ತಿಕ್ಕಿ ೨ ಗಂಟೆ  ಬಿಟ್ಟು ಸ್ನಾನ ಮಾಡಿದರೆ ಬಾಲನೆರೆ ನಿವಾರಣೆಯಾಗುತ್ತದೆ.

Advertisement
Share this on...