ಊರಿಗೆ ಸಹಾಯವಾಗಲೆಂದು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?

in ಕನ್ನಡ ಮಾಹಿತಿ 225 views

ಏಕಾಂಗಿಯಾಗಿ ಬೆಟ್ಟವನ್ನೇ ಅಗೆದು ರಸ್ತೆ ನಿರ್ಮಿಸಿದ್ದ ಬಿಹಾರದ ದಶರಥ ಮಾಂಜಿ ಎಂಬುವವರ ಬಗ್ಗೆ ಈ ಹಿಂದೆ ಕೇಳಿದ್ದೆವು. ಪತ್ನಿ ಬೆಟ್ಟದಿಂದ ಜಾರಿಬಿದ್ದು ಸಾವನ್ನಪ್ಪಿದ್ದರಿಂದ ನೊಂದ ಮಾಂಝಿ ಬರೋಬ್ಬರಿ 22 ವರ್ಷಗಳ ಕಾಲ ಇಡೀ ಬೆಟ್ಟವನ್ನು ಗುದ್ದಲಿ-ಪಿಕಾಸಿನಿಂದ ಅಗೆದು ರಸ್ತೆಯನ್ನೇ ನಿರ್ಮಿಸಿದ್ದ ಛಲಗಾರ ಆತ. ಇದೀಗ ಮಾಂಝಿಯಂತಹ ಮತ್ತೋರ್ವ ಆಧುನಿಕ ಭಗೀರಥನೊಬ್ಬ ಗ್ರಾಮದ ಜನರಿಗಾಗಿ ಏಕಾಂಗಿಯಾಗಿ ಕಾಲುವೆ ಅಗೆದು ನಿರ್ಮಿಸಿದ್ದಾರೆ. ಹೌದು. ತನ್ನ ಗ್ರಾಮದ ಜನರ ಜೀವನಕ್ಕಾಗಿ, ಅಲ್ಲಿನ ಪ್ರಾಣಿ-ಪಕ್ಷಗಳಿಗಾಗಿ ಬಿಹಾರದ ರೈತ ಲೌಂಗಿ ಭುಯಿಯಾನ್ ಬರೋಬ್ಬರಿ 30 ವರ್ಷಗಳ ಕಾಲ ಒಬ್ಬರೇ ಕಾಲುವೆ ತೋಡಿ 3 ಕಿ.ಮೀ ಕಾಲುವೆ ನಿರ್ಮಿಸಿದ್ದಾರೆ. ಗುಡ್ಡಗಾಡುಗಳಿಂದ ಹರಿಯುವ ಮಳೆ ನೀರು ಕೆರೆಯಲ್ಲಿ ಸಂಗ್ರಹವಾಗುವಂತೆ ಮಾಡಲು ರೈತ ಲೌಂಗಿ ಭುಯಿಯಾನ್, ಬರೋಬ್ಬರಿ 30 ವರ್ಷಗಳಿಂದ ಒಬ್ಬರೇ ಕಾಲುವೆ ಅಗೆದು ಯಶಸ್ವಿಯಾಗಿದ್ದಾರೆ. ಲೌಂಗಿಯವರ ನಿಸ್ವಾರ್ಥ ಸೇವೆಗೆ ಇಡೀ ಗ್ರಾಮದ ಜನತೆ ಕೃತಜ್ನರಾಗಿದ್ದಾರೆ. ಗಯಾದ ಲಥುವಾ ಏರಿಯಾದಲ್ಲಿ ಬರುವ ಕೊತಿಲ್ವಾ ಗ್ರಾಮದ ನಿವಾಸಿಯಾಗಿರುವ ಲೌಂಗಿ, ಗ್ರಾಮದ ಜನ ನೀರಿಗಾಗಿ ಎದುರಿಸುತ್ತಿದ್ದ ಸಂಕಷ್ಟ ನೋಡಲಾಗದೇ ತಾವೇ ಸ್ವತ: ಕಾಲುವೆ ತೋಡಲು ಮುಂದಾದರು. ಕಳೆದ 30 ವರ್ಷಗಳ ಅವರ ಕಾರ್ಯ ಇದೀಗ ಯಶಸ್ವಿಯಾಗಿದೆ. ಬೆಟ್ಟದ ಇಳಿಜಾರಿಗೆ ಅನುಗುಣವಾಗಿ ಕಾಲುವೆ ಮಾಡಿ ಮಳೆ ನೀರು ಹರಿದು ಕೆರೆ ಸೇರುವಂತೆ ಮಾಡಿದ್ದಾರೆ.

Advertisement

Advertisement

ಕೋತಿಲ್ವಾ ಗ್ರಾಮ ಗಯಾ ಜಿಲ್ಲೆಯಿಂದ 80 ಕಿ.ಮೀ ದೂರದಲ್ಲಿರುವ ದಟ್ಟವಾದ ಕಾಡು ಹಾಗೂ ಪರ್ವತಗಳಿಂದ ಆವೃತವಾಗಿದೆ. ಗಯಾದಲ್ಲಿನ ಜನರ ಜೀವನೋಪಾಯದ ಮುಖ್ಯ ಸಾಧನವೆಂದರೆ ಕೃಷಿ ಮತ್ತು ಪಶುಸಂಗೋಪನೆ. ಮಳೆಗಾಲದಲ್ಲಿ ಪರ್ವತಗಳಿಂದ ಬೀಳುವ ನೀರು ನದಿಗೆ ಹರಿಯುತ್ತಿತ್ತು. ಇದು ಲೌಂಗಿ ಅವರನ್ನು ಸಾಕಷ್ಟು ಕಾಡುತ್ತಿದ್ದು, ಹೀಗಾಗಿ ಅವರು ಕಾಲುವೆ ತೋಡಲು ನಿರ್ಧಾರ ಮಾಡಿದರು.

Advertisement

ಈ ಕಾಲುವೆಯನ್ನು ಅಗೆಯಲು ನನಗೆ ಬರೋಬ್ಬರಿ 30 ವರ್ಷಗಳು ಬೇಕಾಯಿತು. ಈ ಕಾಲುವೆ ನೀರು ಹಳ್ಳಿಯ ಕೊಳಕ್ಕೆ ಸೇರಿ ಅಲ್ಲಿ ಶೇಖರಣೆಯಾಗುತ್ತದೆ. 30 ವರ್ಷಗಳಿಂದ ನಾನು ನನ್ನ ದನಗಳನ್ನು ಮೇಯಲು ಕರೆದುಕೊಂಡು ಹೋಗುತ್ತಿದ್ದೆ. ಹೀಗೆ ಹೋದವನು ದಿನಾ ಸ್ವಲ್ಪ ಸ್ವಲ್ಪ ಕಾಲುವೆಯನ್ನು ಅಗೆಯುತ್ತಿದ್ದೆ. ಈ ವೇಳೆ ನನಗೆ ಯಾರೂ ಸಹಾಯ ಮಾಡಲಿಲ್ಲ. ಗ್ರಾಮದ ಜನ ತಮ್ಮ ಜೀವನೋಪಾಯಕ್ಕಾಗಿ ಹಳ್ಳಿ ತೊರೆದು ನಗರದತ್ತ ಮುಖ ಮಾಡುತ್ತಿದ್ದಾರೆ. ಬದುಕು ಅರಸಿ ಹಲವರು ಗ್ರಾಮಗಳನ್ನು ತೊರೆದು ಪಟ್ಟಣಗಳಿಗೆ ವಲಸೆ ಹೋದರು. ಗ್ರಾಮವನ್ನು ತೊರೆಯುವ ಬದಲು ಇಲ್ಲಿಯೇ ಏನಾದರೂ ಮಾಡಬೇಕು ಗ್ರಾಮದ ಜಮೀನುಗಳಿಗೆ ಸದಾ ನೀರು ಹರಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ಕಾಲುವೆಯನ್ನು ಅಗೆಯಲು ಇರ್ಧರಿಸಿದೆ. ಹೀಗೆ 3 ಕೀ.ಮೀ ಕಾಲು ಅಗೆಯಲು 30ವರ್ಷ ಬೇಕಾಯಿತು ಎಂದು ಲೌಂಗಿ ಹೇಳಿದ್ದಾರೆ.

Advertisement

ಈ ಕಾಲುವೆ ನೀರಿನಿಂದ ಇಡೀ ಗ್ರಾಮದ ಜನರಿಗೆ, ಹೊಲ-ಗದ್ದೆಗಳಿಗೆ, ಇಲ್ಲಿನ ಪ್ರಾಣಿಗಳಿಗೆ ಸಹಾಯವಾಗಿದೆ. ಅಲ್ಲದೆ ಹೊಲಗಳಿಗೂ ಪ್ರಯೋಜನವಾಗಿದೆ. ಲೌಂಗಿ ಎಂಬ ಛಲದಂಕಮಲ್ಲನ ಈ ಕಾರ್ಯವನ್ನು ನಿಜಕ್ಕೂ ಮೆಚ್ಚಲೇ ಬೇಕು.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...