ಹೇಮಾ ಚೌಧರಿ ಮಗನ ನೋವಿನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ ! ಏನಾಗಿದೆ ನೋಡಿ..

in ಕನ್ನಡ ಮಾಹಿತಿ/ಸಿನಿಮಾ 581 views

ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ಮನೋಜ್ಞ ಅಭಿನಯದ ಮೂಲಕ ಮರೆಯದ ಮುದ್ರೆ ಒತ್ತಿದ ಹೆಸರಾಂತ ಕಲಾವಿದೆ ಎಂದರೆ ಅದು ಹೇಮಾ ಚೌಧರಿ ರವರು. ಹೇಮಾ ಚೌಧರಿ ಅವರು ಹುಟ್ಟಿದ್ದು 1955 ರಲ್ಲಿ. ಹೇಮಾ ಅವರು 1976 ತೆಲುಗು ಚಿತ್ರವಾದ  ಪೆಲ್ಲಿಕನಿಪೆಲ್ಲಿ  ಎಂಬ ಚಿತ್ರದ ಮೂಲಕ ತನ್ನ ತಮ್ಮ ಸಿನಿ ಜೀವನವನ್ನು ಪ್ರಾರಂಭ ಮಾಡಿದರು. ಹೇಮಾ ಅವರು ನೆಗೆಟಿವ್ ಶೇಡ್ ಇರುವ ಪಾತ್ರಗಳಿಂದ  ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇವರು ಅಭಿನಯಿಸಿರುವ ಕೆಲವು ನೆಗೆಟಿವ್ ರೋಲ್ ಇರುವಂತಹ ಸಿನಿಮಾಗಳೆಂದರೆ ಗಾಳಿ ಮಾತು,  ನೀ ಬರೆದ ಕಾದಂಬರಿ,  ವಿಜಯವಾಣಿ,  ಶುಭಾಶಯ,  ದೀಪ,   ಮುಂತಾದವು.  ಬಾಲಚಂದರ್ ನಿರ್ದೇಶನದ ಮನ್ಮಥ ಮಲೈ ಎಂಬ ತೆಲಗು ಚಿತ್ರದಲ್ಲಿ ಕಮಲ್ ಹಾಸನ್ ರವರಿಗೆ ವಿರುದ್ಧ ಪಾತ್ರದಲ್ಲಿ ಅಭಿನಯಿಸಿ ಬಹಳಷ್ಟು ಹೆಸರನ್ನು ಗಳಿಸಿದರು.

Advertisement

Advertisement

ಕನ್ನಡ ಸೇರಿದಂತೆ ತೆಲುಗು,  ಮಲಯಾಳಂನಲ್ಲಿ ಸುಮಾರು ನೂರ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೇಮಾ ಅವರು ಹೆಸರಾಂತ  ಕುಚುಪುಡಿ ನೃತ್ಯ ಕಲಾವಿದೆ ಕೂಡ ಆಗಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ನಾಯಕಿಯಾಗಿ ನಟಿಸಿದ ಹೇಮಾ ಎಂಬತ್ತರ ದಶಕದಲ್ಲಿ ಋುಣಾತ್ಮಕ ಪಾತ್ರಗಳಲ್ಲಿ ಅಭಿನಯಿಸಲು ಶುರು ಮಾಡಿದರು. ಋುಣಾತ್ಮಕ ಪಾತ್ರಗಳ ಅಭಿನಯದಿಂದ ಅಪಾರ ಜನಮನ್ನಣೆಯನ್ನು ಗಳಿಸಿದರು. ಸಿನಿಮಾ ಪರದೆಯ ಮೇಲೆ ನಮ್ಮನ್ನೆಲ್ಲಾ ರಂಜಿಸುವ ಹೇಮಾ ಅವರ ಜೀವನದ ನೋವಿನ ಕಥೆಯನ್ನು ಕೇಳಿದರೆ ಕಣ್ಣೀರು ಬರುತ್ತದೆ.

Advertisement

Advertisement

ಕನ್ನಡ ಚಿತ್ರರಂಗದಲ್ಲೇ  ಬಡ್ಡಿ ಬಂಗಾರಮ್ಮ ಎಂದು ಖ್ಯಾತಿಯನ್ನು ಗಳಿಸಿದ ಹೇಮಾ ಚೌಧರಿ ರವರಿಗೆ ಒಬ್ಬ ಸುಂದರವಾದ ಮಗನಿದ್ದಾನೆ. ಅವರ ಮಗನ ಹೆಸರು ಪುರೋಹಿತ್ ಎಂದು. ಅವರಿಗೆ ಎರಡು ಕಣ್ಣುಗಳು ಕೂಡ ಇಲ್ಲ. ಹುಟ್ಟಿದಾಗಿನಿಂದಲೇ ಮಗನಿಗೆ ಕಣ್ಣುಗಳಿಲ್ಲ.  ಮಗನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ . ಮಗನ ಹುಟ್ಟು ಹಬ್ಬದಂದು ಹೇಮಾ ಅವರು ಈ ರೀತಿಯಾಗಿ ಬರೆದುಕೊಂಡಿದ್ದಾರೆ ನಾನು ಏನು ಪುಣ್ಯ ಮಾಡಿದ್ದೆನೋ ನಿನ್ನಂತ ಮಗನನ್ನು ನನ್ನ ಮಡಿಲಿಗೆ ದೇವರು ಹಾಕಿದ.. ಹುಟ್ಟು ಹಬ್ಬದ ಶುಭಾಶಯಗಳು ಪುರೋಹಿತ್ ಎಂಬುದಾಗಿ ಭಾವುಕರಾಗಿ ಬರೆದುಕೊಂಡಿದ್ದರು.

ಅಮ್ಮ ಮಗನದು ಜೋಡಿ ಜೀವ ಅದು ಯಾತ್ರಾ ಸ್ಥಳವಾಗಿರಲಿ ಫಾರಿನ್ ಟ್ರಿಪ್ ಆಗಿರಲಿ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಎಲ್ಲಿಗೂ ಹೋಗುವುದೇ ಇಲ್ಲ. ಪುರೋಹಿತ್ ತುಂಬಾ ಬುದ್ಧಿವಂತ ಹುಡುಗ.  ಹಿರಿಯ ನಟಿ ಲಕ್ಷ್ಮಿ ಅವರಿಗಂತೂ ಪುರೋಹಿತ್ ಎಂದರೆ ಅಚ್ಚುಮೆಚ್ಚು. ಹೆಚ್ಚು ಸಿನಿಮಾಗಳಿಲ್ಲದೆ ಪರದಾಡುತ್ತಿರುವ ಹೇಮಾ ಚೌಧರಿ ರವರು  ಈಗ  ಧಾರಾವಾಹಿಗಳಲ್ಲಿ  ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೇಮಾ ಅವರು ಹೆಚ್ಚು ಹೆಚ್ಚು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿ ಎಂದು ಎಲ್ಲರೂ ಆಶಿಸೋಣ ಮತ್ತು ಅವರ ಮಗ ಬೇಗ ಹುಷಾರಾಗಲಿ ಎಂದು ಕೂಡ ಹಾರೈಸೋಣ. ಹೇಮ  ಚೌಧರಿ ರವರ ಅಭಿನಯ ನಿಮಗೆ ಇಷ್ಟವಾಗಿದ್ದಲ್ಲಿ ಕಮೆಂಟ್ ಮಾಡುವ ಮೂಲಕ ತಿಳಿಸಿ.

Advertisement
Share this on...