ತನಗಿಂತ ಚಿಕ್ಕ ವಯಸ್ಸಿನ ಹುಡುಗನನ್ನು ಮದುವೆಯಾದ ಕನ್ನಡದ ನಟಿ ಮಣಿಯರು !

in ಮನರಂಜನೆ 621 views

ಪುರಾತನ ಕಾಲದಿಂದಲೂ ಹುಡುಗಿಯರು ಹುಡುಗರಿಗಿಂತ ದೊಡ್ಡವರಾಗಿದ್ದರೆ ಕುಟುಂಬದ ಹಿರಿಯರೂ ಮದುವೆ ಮಾಡಲು ಒಪ್ಪುತ್ತಿರಲಿಲ್ಲ. ಆದರೆ ಕ್ರಮೇಣವಾಗಿ ಕಾಲ ಕಳೆದಂತೆ ಸಂಪ್ರದಾಯ ಆಚಾರ ವಿಚಾರಗಳು ಬದಲಾಗುತ್ತಿವೆ. ಆದರೆ ಹಳ್ಳಿಗಳಲ್ಲಿ ಇಂದಿಗೂ ಕೂಡ ಇದನ್ನು ಪಾಲಿಸುತ್ತಿದ್ದಾರೆ. ಪಟ್ಟಣ ಪ್ರದೇಶದಲ್ಲಿ ಮತ್ತು ಸಿನಿಮಾ ನಟ ನಟಿಯರ ವಿಷಯದಲ್ಲಿ ಈಗ ವಯಸ್ಸಿನ ಅಂತರ ದೊಡ್ಡ ವಿಷಯವೇ ಅಲ್ಲ. ಯಾವ ನಟಿಯರು ತಮಗಿಂತ ಕಡಿಮೆ ವಯಸ್ಸಿನ ಹುಡುಗರನ್ನು ಮದುವೆಯಾಗಿದ್ದಾರೆ ಎಂಬುದನ್ನು ನಾವು ಇಲ್ಲಿ ತಿಳಿಸಿ ಕೊಡುತ್ತೆವೆ.

Advertisement

ರಾಧಿಕಾ ಪಂಡಿತ್
ರಾಧಿಕಾ ಪಂಡಿತ್  1984 ಮಾರ್ಚ್ 7  ರಂದು ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು.  ಕಿರುತೆರೆಯಲ್ಲಿ ನಂದಗೋಕುಲ, ಸುಮಂಗಲಿ,  ಎಂಬ ಧಾರಾವಾಹಿಗಳಲ್ಲಿ ನಟಿಸಿ ಆ ನಂತರ ಬೆಳ್ಳಿತೆರೆಗೆ ಮೊಗ್ಗಿನ ಮನಸ್ಸು ಎಂಬ  ಚಿತ್ರದ ಮೂಲಕ ಪ್ರವೇಶ ಮಾಡಿದರು.  ಕನ್ನಡದ ರಾಕಿಂಗ್ ಜೋಡಿ ಎಂದರೆ ಅದು ಯಶ್ ಮತ್ತು ರಾಧಿಕಾ ಪಂಡಿತ್.  ರಾಧಿಕಾ ಪಂಡಿತ್ ಯಶ್ ಅವರಿಗಿಂತ ಎರಡು ವರ್ಷ ದೊಡ್ಡವರು .

Advertisement

 

Advertisement

Advertisement

ಅನು ಪ್ರಭಾಕರ್
ಅನು ಪ್ರಭಾಕರ್ ನವೆಂಬರ್ 9 ,1980 ರಂದು ಜನಿಸಿದರು. 1999 ರಲ್ಲಿ ಶಿವರಾಜ್ ಕುಮಾರ್ ಅಭಿನಯದ  ಹೃದಯ ಹೃದಯ ಎಂಬ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಪ್ರವೇಶಿಸಿದರು.  ಅನು ಪ್ರಭಾಕರ್ ತನ್ನ ಮೊದಲನೇ  ಮದುವೆಯಿಂದ ವಿಚ್ಛೇದನವನ್ನು ಪಡೆದ ನಂತರ ತನಗಿಂತ ಒಂದು ವರ್ಷ ಚಿಕ್ಕವರಾದ ರಘು ಮುಖರ್ಜಿ ಅವರನ್ನು ಮದುವೆಯಾಗಿದ್ದಾರೆ .

 

ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ ಬಾಲಿವುಡ್ ಚಿತ್ರರಂಗದಲ್ಲಿ ಇಂದು ಬಹು ಬೇಡಿಕೆಯ ನಟಿ. ಬಾಜಿಗರ್  ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶ ಮಾಡಿದರು.  ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ರವರು 1975   ಜೂನ್ 8 ರಂದು ಜನಿಸಿದರು.  ಉದ್ಯಮಿ ರಾಜ್ ಕುಂದ್ರಾ  ಅವರನ್ನು ಮದುವೆಯಾಗಿದ್ದಾರೆ. ಶಿಲ್ಪಾ ಶೆಟ್ಟಿ ಗಿಂತ ರಾಜ್ ಕುಂದ್ರಾ ಅವರು ಎರಡು ವರ್ಷ ಚಿಕ್ಕವರು.

 

ಐಶ್ವರ್ಯ ರೈ
ಮಂಗಳೂರಿನ ಕುವರಿ ಐಶ್ವರ್ಯ ರೈ 1973   ನವೆಂಬರ್ 1 ರಲ್ಲಿ ಜನಿಸಿದರು.  ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆಯೂ ಕೂಡ ವಯಸ್ಸಿನ ಅಂತರದಲ್ಲಿ ವ್ಯತ್ಯಾಸವಿದೆ. ಐಶ್ವರ್ಯ ರೈ ರವರಿಗೆ 46  ವರ್ಷ,  ಅಭಿಷೇಕ್ ಬಚ್ಚನ್ ರವರೆಗೆ 43 ವರ್ಷ . ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ರವರಿಗಿಂತ ಮೂರು ವರ್ಷ ಚಿಕ್ಕವರು.

 

ಛಾಯಾ ಸಿಂಗ್
ಛಾಯಾ ರವರು 1981  ಮೇ 16 ರಲ್ಲಿ   ಬೆಂಗಳೂರಿನಲ್ಲಿ ಜನಿಸಿದರು. 2000 ದಲ್ಲಿ ಮುನ್ನುಡಿ ಎಂಬ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗವನ್ನು ಪ್ರವೇಶ ಮಾಡಿದರು.  ಕನ್ನಡದ ನಟಿ ಛಾಯಾಸಿಂಗ್ ಅವರು ತಮಿಳಿನ ಸ್ಟಾರ್ ನಟರಾದ  ಕೃಷ್ಣ ಅವರನ್ನು ಮದುವೆಯಾಗಿದ್ದಾರೆ. ಕೃಷ್ಣರವರು ಛಾಯರವರಿಗಿಂತ ಮೂರು ವರ್ಷ ಚಿಕ್ಕವರು ಎನ್ನುವುದೇ ವಿಶೇಷ. .

ಸ್ನೇಹ
ಸ್ನೇಹಾ ಅವರು 1981 ಅಕ್ಟೋಬರ್ 12 ರಲ್ಲಿ  ಮುಂಬೈನಲ್ಲಿ  ಜನಿಸಿದರು. ಇವರು ಮಲಯಾಳಂನಲ್ಲಿ ಮೊದಲು ಸಿನಿಮಾದಲ್ಲಿ ಅಭಿನಯಿಸಿದರು. ಆ ನಂತರ ಕನ್ನಡ ತೆಲುಗು ತಮಿಳು ಮುಂತಾದ ಸಿನಿಮಾಗಳಲ್ಲಿ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.    ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಕುರುಕ್ಷೇತ್ರ ಚಿತ್ರದಲ್ಲಿ ದ್ರೌಪದಿ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡ ನಟಿ ಸ್ನೇಹಾ. ಈ ನಟಿ ಪ್ರಸನ್ನ ಎಂಬುವರನ್ನು ಮದುವೆಯಾಗಿದ್ದಾರೆ.  ಪ್ರಸನ್ನ ಅವರು ಸ್ನೇಹ ಅವರಿಗಿಂತ ಒಂದು ವರ್ಷ ಚಿಕ್ಕವರು.
ನಮ್ರತಾ ಶಿರೋಡ್ಕರ್
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಮ್ರತ  ರವರ ನಡುವೆ ಕೂಡ ವಯಸ್ಸಿನ ಅಂತರದಲ್ಲಿ ವ್ಯತ್ಯಾಸವಿದೆ. ಮಹೇಶ್ ಬಾಬು ಅವರಿಗಿಂತ ಪತ್ನಿ ನಮ್ರತಾ ನಾಲ್ಕು ವರ್ಷ ದೊಡ್ಡವರು. ಮಹೇಶ್ ಬಾಬು ಅವರಿಗೆ 44  ವರ್ಷ ವಯಸ್ಸು ಹೆಂಡತಿ ನಮ್ರತಾ ಅವರಿಗೆ 48  ವರ್ಷ ವಯಸ್ಸು.

ವಿಶೇಷವೇನೆಂದರೆ ಈ ಎಲ್ಲಾ ನಟಿಮಣಿಯರು ತಮಗಿಂತ ಚಿಕ್ಕವರಾದವರನ್ನು ಮದುವೆಯಾದವರು. ಯಾವುದೇ ಜಗಳವಿಲ್ಲದೆ ಅನ್ಯೋನ್ಯವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಪ್ರಕಾರ ಮದುವೆಗೆ ,ಪ್ರೀತಿಗೆ ,ವಯಸ್ಸಿನ ಅಂತರದ ಅವಶ್ಯಕತೆ ಇದೆಯಾ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Advertisement
Share this on...