ಮಗಳಿಗೆ ಮಗು ಆಗಿ ತಾತ ಆದರೂ ಇನ್ನೊಂದು ಮದುವೆ ಆಗ್ಬೇಕಂತೆ ವರ್ಮಾ …ಯಾರಿರಬಹುದು ಆ ಲಕ್ಕಿ ಗರ್ಲ್…?

in ಮನರಂಜನೆ 62 views

ರಾಮ್​​​ಗೋಪಾಲ್​​ ವರ್ಮಾ, ಈ ಹೆಸರು ಕೇಳುತ್ತಿದ್ದಂತೆ ಎಂತ ಅದ್ಭುತ ನಿರ್ದೇಶಕ ಎನಿಸುತ್ತದೆ, ಹಾಗೆಯೇ ಒಮ್ಮೆ ಆ ಹೆಸರು ಕೇಳಿದೊಟನೆ ನಗು ಕೂಡಾ ಬರುವುದುಂಟು, ಏಕೆಂದರೆ ಅವರು ಟ್ವೀಟ್​​​​​ಗಳು, ಅವರು ಮೈ ಮೇಲೆ ಎಳೆದುಕೊಳ್ಳುವ ವಿವಾದಗಳು ಕೂಡಾ ಹಾಗೆ ಇರುತ್ತದೆ. ಅನಾವಶ್ಯಕವಾಗಿ ಇಲ್ಲಸಲ್ಲದ ವಿವಾದಗಳನ್ನು ಸೃಷ್ಟಿಸಿಕೊಳ್ಳುವುದು, ಟ್ವೀಟ್ ಮಾಡುವುದೇ ರಾಮ್​ಗೋಪಾಲ್ ವರ್ಮಾ ಕೆಲಸ ಎನ್ನುವಂತಾಗಿದೆ.ಇದೀಗ ವರ್ಮಾ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮೂಲಕ ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೋ ಏನೋ ಅದೂ ಕೂಡಾ ಗೊತ್ತಿಲ್ಲ. ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬಂದಿದ್ದ ವೇಳೆ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೋದಿ ಹಾಗೂ ಟ್ರಂಪ್ ಭಾಷಣ ಮಾಡುವ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮಿಳು ಹಾಡು ಸೇರಿಸಿ ಎಡಿಟ್ ಮಾಡಿದ್ದಾರೆ. ಈ ವಿಡಿಯೋ ವರ್ಮಾ ಅವರಿಗೆ ಬಹಳ ಇಷ್ಟವಾಗಿದೆ. ವಿಡಿಯೋವನ್ನು ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿರುವ ವರ್ಮಾ, ‘ಈ ವಿಡಿಯೋ ಎಡಿಟ್ ಮಾಡಿದವರನ್ನು ನಾನು ಮದುವೆಯಾಗಬೇಕು’ ಎಂದು ಬರೆದುಕೊಂಡಿದ್ದಾರೆ. ಅದೂ ಕೂಡಾ ಆ ವಿಡಿಯೋ ಎಡಿಟ್ ಮಾಡಿದವರು ಗಂಡೋ, ಹೆಣ್ಣೋ ಎಂದು ತಿಳಿಯದೆ.

Advertisement

 

Advertisement

 

Advertisement

Advertisement

ಇದು ತಮಾಷೆಗೆ ಇರಬಹುದು, ಆದರೆ ವರ್ಮಾಗೆ ಮದುವೆಯಾಗಿ ವಿಚ್ಛೇದನ ಪಡೆದಿರುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ರತ್ನ ಎಂಬುವವರನ್ನು ವರ್ಮಾ ವಿವಾಹವಾಗಿದ್ದರು. ಈ ದಂಪತಿಗೆ ರೇವತಿ ಎಂಬ ಮಗಳು ಕೂಡಾ ಇದ್ದಾರೆ. ಆದರೆ ಈ ದಂಪತಿ ನಡುವೆ ಸಾಮರಸ್ಯ ಇರದೆ, ವಿಚ್ಛೇದನ ಪಡೆದರು. ನಂತರ ಪುತ್ರಿ ರೇವತಿ ರತ್ನ ಅವರ ಬಳಿ ಬೆಳೆದರು. ವರ್ಮಾ ಪುತ್ರಿ ರೇವತಿ ಎಂಬಿಬಿಎಸ್ ಪದವೀಧರೆ. ಆಕೆಗೂ ಕೂಡಾ ಮದುವೆ ಆಗಿ ಮಗು ಕೂಡಾ ಇದೆ. ರೇವತಿ ಪತಿ ಪ್ರನವ್ ಕೂಡಾ ವೈದ್ಯರು. ರೇವತಿಗೆ ಮಗು ಜನಿಸಿದ ಸಂದರ್ಭದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ‘ನಿಮಗೆ ಮೊಮ್ಮಗು ಆಗಿರುವುದಕ್ಕೆ ಅಭಿನಂದನೆಗಳು ತಾತಯ್ಯನವರೇ’ ಎಂದು ಕಾಲೆಳೆದು ಟ್ವೀಟ್ ಮಾಡಿದ್ದರು.

 

ಕಾರ್ಯಕ್ರಮವೊಂದರಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದ ರಾಮ್​​ಗೋಪಾಲ್ ವರ್ಮಾ, ‘ನನಗೆ ಒಳ್ಳೆ ಹೆಂಡತಿ ಸಿಕ್ಕಳು, ಆದರೆ ನನ್ನ ಹೆಂಡತಿಗೆ ಒಳ್ಳೆ ಗಂಡ ಸಿಗಲಿಲ್ಲ’ ಎಂದು ಹೇಳಿಕೊಂಡಿದ್ದರು. ಒಟ್ಟಿನಲ್ಲಿ ರಾಮ್​​ಗೋಪಾಲ್ ವರ್ಮಾ ನಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯದೆ ಹೀಗೆ ನಡೆದುಕೊಳ್ಳುತ್ತಾರೋ, ಪಬ್ಲಿಸಿಟಿಗಾಗಿ ಹೀಗೆ ಮಾಡುತ್ತಾರೋ ಅವರಿಗೇ ಗೊತ್ತು.

Advertisement
Share this on...