ಆ ಕಾಡಿಗೆ ಹೋಗಲು ಜನರು ಇಂದಿಗೂ ಹೆದರುತ್ತಾರೆ, ಅಂಥದ್ದೇನಿದೆ ಅಲ್ಲಿ?

in News 132 views

ರೊಮೇನಿಯಾದ ಟ್ರಾನ್ಸಿಲ್ವೇನಿಯಾ ಪ್ರಾಂತ್ಯದಲ್ಲಿ ಒಂದು ಸ್ಥಳವಿದೆ. ಅಲ್ಲಿ ನಿಗೂಢ ಘಟನೆಗಳು ಸಂಭವಿಸುವುದರಿಂದ ಜನರು ಅಲ್ಲಿಗೆ ಹೋಗಲು ಇಂದಿಗೂ ಹೆದರುತ್ತಾರೆ. ‘ಹೋಯಾ ಬಸ್ಯು’ ಈ ಕಾಡಿನ ಹೆಸರನ್ನು ನೀವು ಖಂಡಿತ ಕೇಳಿರುತ್ತೀರಿ. ಈ ಕಾಡಿನಲ್ಲಿ ಮರಗಳು ತಿರುಚಿದ ಹಾಗೆ, ವಕ್ರವಾಗಿ ಕಾಣುತ್ತವೆ. ಈ ಕಾಡು ಹಗಲು ಹೊತ್ತಿನಲ್ಲಿಯೂ ಸಹ ನೋಡಲು ಭಯಾನಕವಾಗಿ ಕಾಣುತ್ತದೆ.

Advertisement

 

Advertisement

Advertisement

 

Advertisement

ಈ ಸ್ಥಳಕ್ಕೆ ಬಂದ ಅನೇಕ ಜನರು ಇಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಈ ಕುಖ್ಯಾತ ಅರಣ್ಯವು ಕ್ಲೂಜ್-ನಾಪೋಕಾ ನಗರದ ಪಶ್ಚಿಮಕ್ಕೆ ಕ್ಲೂಜ್ ಕೌಂಟಿಯಲ್ಲಿದೆ. ಇದು 700 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಇಲ್ಲಿ ನೂರಾರು ಜನರು ನಾಪತ್ತೆಯಾಗಿದ್ದಾರೆ ಎಂದು ನಂಬಲಾಗಿದೆ. ಈ ಪ್ರದೇಶದಲ್ಲಿ ಕುರುಬನೊಬ್ಬ ಕಾಣೆಯಾದಾಗ ಮೊದಲ ಬಾರಿಗೆ ಹೋಯಾ ಬಸ್ಯು ಕಾಡಿನ ಬಗ್ಗೆ ಜನರಿಗೆ ಆಸಕ್ತಿ ಹುಟ್ಟಿಕೊಂಡಿತು. ಶತಮಾನಗಳಷ್ಟು ಹಳೆಯದಾದ ದಂತಕಥೆಯ ಪ್ರಕಾರ, ಆ ವ್ಯಕ್ತಿ ಕಾಡಿಗೆ ಹೋದಾಗ ನಿಗೂಢವಾಗಿ ಕಣ್ಮರೆಯಾದನು. ಆಶ್ಚರ್ಯಕರ ಸಂಗತಿಯೆಂದರೆ, ಆ ಸಮಯದಲ್ಲಿ ಅವನ ಜೊತೆ 200 ಕುರಿಗಳು ಇದ್ದವು.

 

 

ಕೆಲವು ವರ್ಷಗಳ ಹಿಂದೆ ಮಿಲಿಟರಿ ತಂತ್ರಜ್ಞರೊಬ್ಬರು ಈ ಕಾಡಿನಲ್ಲಿ ಹಾರುವ ಬಂಡೆಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದರು. ಇದಲ್ಲದೆ, 1968 ರಲ್ಲಿ, ಎಮಿಲ್ ಬಾರ್ನಿಯಾ ಎಂಬ ವ್ಯಕ್ತಿಯು ಇಲ್ಲಿ ಆಕಾಶದಲ್ಲಿ ಅಲೌಕಿಕ ದೇಹವನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾನೆ. ಇಲ್ಲಿಗೆ ಭೇಟಿ ನೀಡುವ ಕೆಲವು ಪ್ರವಾಸಿಗರು ಇದೇ ರೀತಿಯ ಕೆಲವು ಘಟನೆಗಳನ್ನು ಸಹ ಉಲ್ಲೇಖಿಸಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕಾಡನ್ನು ನೋಡಲು ಬರುವವರು ಸ್ವಲ್ಪ ಸಮಯದವರೆಗೆ ಕಣ್ಮರೆಯಾಗಿ, ನಂತರ ಹಿಂತಿರುತ್ತಾರಂತೆ.
ಈ ಕಾಡಿನಲ್ಲಿ ನಿಗೂಢ ಶಕ್ತಿಗಳು ವಾಸಿಸುತ್ತವೆ ಎಂದು ಜನರು ಹೇಳುತ್ತಾರೆ.

 

 

ಇಲ್ಲಿ ಜನರು ವಿಚಿತ್ರವಾದ ಧ್ವನಿಗಳನ್ನು ಸಹ ಕೇಳುತ್ತಾರೆ. ಜನರು ಈ ಕಾಡಿನಲ್ಲಿ ಇರಲು ಇಷ್ಟಪಡದಿರಲು ಇದು ಸಹ ಕಾರಣವಾಗಿದೆ. 1870 ರಲ್ಲಿ ಈ ಕಾಡಿಗೆ ಹತ್ತಿರದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ರೈತನ ಮಗಳು ಆಕಸ್ಮಿಕವಾಗಿ ಈ ಅರಣ್ಯಕ್ಕೆ ಪ್ರವೇಶಿಸಿ, ಆ ನಂತರ ಕಣ್ಮರೆಯಾದಳು. ಸರಿಯಾಗಿ ಐದು ವರ್ಷಗಳ ನಂತರ ಆ ಹುಡುಗಿ ಕಾಡಿನಿಂದ ಹಿಂತಿರುಗಿದಾಗ ಜನರು ಆಶ್ಚರ್ಯಚಕಿತರಾದರು. ಆದರೆ ಅವಳು ತನ್ನ ಸ್ಮರಣೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಳು. ಆದರೆ ಸ್ವಲ್ಪ ಸಮಯದ ನಂತರ ಆಕೆ ನಿಧನಳಾದಳು.

Advertisement
Share this on...