ಮಳೆಗಾಲದ ಮನೆ ಮದ್ದುಗಳು…

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 128 views

ಮಳೆಗಾಲ ಆರಂಭವಾಗುತ್ತಿದ್ದಂತೆ ನಮಗೆಲ್ಲರಿಗೂ ಮನಸಿನಲ್ಲಿ ಕಳವಳ ಶುರುವಾಗುತ್ತದೆ.ಹೇಗೆ ನಮ್ಮ ಆರೋಗ್ಯವನ್ನು ಕಾಪಡಿಕೊಳ್ಳುವುದು ಎಂಬ ಚಿಂತೆ ಆರಂಭವಾಗುತ್ತದೆ. ಏಕೆಂದರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಜನರು ಅನಾರೋಗ್ಯಕ್ಕೀಡಾಗುತ್ತಾರೆ. ಕಾರಣ ಗಾಳಿಯಲ್ಲಿನ ತೇವಾಂಶವು ಅನೇಕ ರೀತಿಯ ಹಾನಿಕಾರಕ ಜೀವಿಗಳ ಬೆಳವಣಿಗೆಯನ್ನು ಪ್ರಚೋದಿಸುತ್ತವೆ. ಹೀಗಾಗಿ ಮಳೆಗಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಜಾಗರೂಕರಾಗಿರಬೇಕು. ಮಳೆಗಾಲದಲ್ಲಿ ಸಾಮಾನ್ಯವಾಗಿ ಬಾಯಿ ಕೇಳುವುದೇ ಹೆಚ್ಚು ಹೀಗಾಗಿ ಜನರು ಮಳೆಗಾಲದಲ್ಲಿ ಸಂಜೆಯಾಗುತ್ತಿದ್ದಂತೆ ಚಾಟ್ ಹಾಗೂ ಪಕೊಡಾವನ್ನು ಹೆಚ್ಚು ಸೇವನೆ ಮಾಡುತ್ತಾರೆ. ಅಂತಹ ಸಮಯದಲ್ಲಿ ಆ ಆಹಾರ ಸೇವನೆ ಮಾಡುವುದು ಉತ್ತಮವಲ್ಲ. ಸೂಪ್ ಸೇವನೆ ಆರೋಗ್ಯಕ್ಕೆ ಹಿತಕರ ಕಾರಣ ಸೂಪ್ ಗಳು ಪೌಷ್ಠಿಕಾಂಶಗಳಿಂದ ತುಂಬಿದ್ದು,ಬಾಯಿಗೂ ರುಚಿ ನೀಡುವುದಲ್ಲದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.ಶುಂಠಿ ,ಬೆಳ್ಳುಳ್ಳಿ, ಕಾಳು ಮೆಣಸಿನೊಂದಿಗೆ ಸಿದ್ಧ ಪಡಿಸಿದ ಸೂಪ್ ಕುಡಿದರೆ ಒಳ್ಳೆಯದು. ಗ್ರೀನ್ ಟೀ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಜನರು ಟೀ, ಕಾಫಿ ಕುಡಿಯಲು ಬಯಸುತ್ತಾರೆ.

Advertisement

Advertisement

ಆ ಸಮಯದಲ್ಲಿ ಗ್ರೀನ್ ಟೀ ಕುಡಿಯುವುದು ಒಳ್ಳೆಯದು. ಗ್ರೀನ್ ಟೀ ಯಲ್ಲಿ ಖನಿಜಗಳು, ವಿಟಮಿನ್ ಗಳು ಸಮೃದ್ಧವಾಗಿದ್ದು,ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ನೀಡುತ್ತವೆ.ಇದರ ಸೇವನಯಿಂದ ಹೃದಯದ ತೊಂದರೆ ಕಡಿಮೆಯಾಗುತ್ತದೆ. ಜೊತೆಗೆ ಹಲವು ಬಗೆಯ ಕ್ಯಾನ್ಸರ್ ಗಳಿಂದಲೂ ರಕ್ಷಣೆ ಒದಗಿಸುತ್ತದೆ. ಬೇವಿನ ಸೊಪ್ಪು ಎಂದಾಕ್ಷಣ ಕಹಿ ನೆನಪಾಗಿ ಮೂಗು ಮುರಿಯುವವರೇ ಹೆಚ್ಚು. ಆದರೆ,ಬೇವಿನ ಸೊಪ್ಪು ಎಷ್ಟು ಕಹಿಯಾಗಿರುತ್ತದೆಯೋ ಅಷ್ಟೇ ಒಳ್ಳೆಯದು.ಪ್ರತಿನಿತ್ಯ ಬೇವಿನ ಸೊಪ್ಪನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಎದುರಾಗುವ ತೊಂದರೆಗಳು ದೂರಾಗುತ್ತದೆ.

Advertisement

ಅಲೋವರಾ(ಲೋಳೆಸರ)ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಪದಾರ್ಥವಾಗಿದೆ.20 ಕ್ಕೂ ಹೆಚ್ಚು ಅಮೈನೋ ಆಮ್ಲಗಳು, ಕ್ಯಾಲ್ಸಿಯಂ, ಮೆಗ್ನೀಷಿಯಂ ಜೊತೆಗೆ ಜೀವಸತ್ವಗಳನ್ನು ಒಳಗೊಂಡಿದೆ.ಇದು ಕೂದಲು ಮತ್ತು ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಜೇನುತುಪ್ಪ ಹಲವಾರು ಶತಮಾನಗಳಿಂದ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸುತ್ತಿದ್ದರು. ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಉಸಿರಾಟ ಸಮಸ್ಯೆಯ ಚಿಕಿತ್ಸೆಗೆ ಜೇನುತುಪ್ಪ ಬಳಕೆ ಮಾಡುತ್ತಿದ್ದರು. ಕಫ,ಕೆಮ್ಮು,ಅಸ್ತಮಾ ಸಮಸ್ಯೆಗಳನ್ನು ದೂರಮಾಡಬಹುದು. ಮನುಷ್ಯನ ದೇಹದಲ್ಲಿರುವ ಹಾನಿಕಾರಕ ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ಪ್ರತಿರೋಧಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Advertisement

ಆಲಿವ್ ಆಯಿಲ್ ಎಣ್ಣೆಯು ಒಮೆಗಾ -6 ಕೊಬ್ಬಿನ ಆಮ್ಲಗಳ ಮೂಲವಾಗಿದೆ. ಹೃದಯ,ಯಕೃತ್,ಮತ್ತು ಮೂತ್ರಪಿಂಡದ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇವುಗಳ ಸೇವನೆಯಿಂದ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು.”ಆರೋಗ್ಯವೇ ಭಾಗ್ಯ” ಎಂಬ ನುಡಿಯಂತೆ ಎಲ್ಲರೂ ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇಂದು ಅನಿವಾರ್ಯವಾಗಿದೆ, ಪ್ರತಿಯೊಬ್ಬರೂ ಈ ಮನೆಮದ್ದುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

– ಶರತ್ ಕುಮಾರ್ ಟಿ
ಸಾರಗಾನ ಜೆಡ್ಡು.

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...