apoorva gowda

ಮಲೆನಾಡಿನ ಹುಡುಗಿ ಚೆಂದದ ಬೆಡಗಿ ಅಪೂರ್ವ ಗೌಡ ಬಗ್ಗೆ ನಿಮಗೆಷ್ಟು ಗೊತ್ತು?

in Uncategorized/ಮನರಂಜನೆ/ಸಿನಿಮಾ 6,253 views

ಸಮೀಕ್ಷಾ ಎಂಬ ಹೆಸರಿನ ಜೊತೆಗೆ ಇನ್ನೊಂದು ಹೆಸರು ಇದೆ, ಅದೇ ಅಪೂರ್ವ ಗೌಡ.ಇವರು ಕನ್ನಡ ಚಲನಚಿತ್ರ ಹಾಗೂ ಟೆಲಿವಿಷನ್ ಉದ್ಯಮದಲ್ಲಿ ನಿರತರಾಗಿರುವ ಇಂಡಿಯನ್ ಮಾಡೆಲ್ ಮತ್ತು ನಟಿ ಆಗಿದ್ದಾರೆ. ಮುಖ್ಯವಾಗಿ ಕನ್ನಡ ದೂರದರ್ಶನ ಮತ್ತು ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಇವರು ಡಿಸೆಂಬರ್ 20 1996 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು.ಇವರು ಹುಟ್ಟಿ ಬೆಳೆದಿದ್ದೆಲ್ಲ ಮಲೆನಾಡಿನ ಮಡಿಲಾದ ಮತ್ತು ಮಲೆನಾಡಿನ ಹೆಬ್ಬಾಗಿಲು ಆದ ಶಿವಮೊಗ್ಗ ಜಿಲ್ಲೆಯಲ್ಲಿ.ಇವರು ಶಿವಮೊಗ್ಗದ ಆದಿ ಚುಂಚನಗಿರಿ ಶಿಖಾನ ಟ್ರಸ್ಟ್ ಶಾಲೆಯಲ್ಲಿ ತನ್ನ ಶಾಲಾ ದಿನಗಳನ್ನು ಕಳೆದರು .ಇವರು ತಮ್ಮ ತವರು ಜಿಲ್ಲೆಯಾದ ಶಿವಮೊಗ್ಗದಲ್ಲಿ ಕಾಲೇಜು ಹಂತದ ಶಿಕ್ಷಣವನ್ನು ಪೂರೈಸಿದರು. ನಟನಾ ಕೆಲಸವನ್ನು ಪ್ರಾರಂಭ ಮಾಡಿದ್ದು 2016 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ ಮೀನಾಕ್ಷಿ ಮದುವೆ ‘ ಎಂಬ ಧಾರಾವಾಹಿಯ ಮೂಲಕ ಕನ್ನಡ ಟಿವಿಗೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದರು. ಇದೆ ಇವರ ನಟನಾ ವೃತ್ತಿಗೆ ಒಂದು ಮೆಟ್ಟಿಲಿನ ತರಹ ಆಯಿತು.ನಂತರ ಇವರು ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

Advertisement

Advertisement

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ ಸುಬ್ಬಲಕ್ಷ್ಮಿ ಸಂಸಾರ ‘ ಧಾರಾವಾಹಿಯಲ್ಲಿ ಶಯನ ಎಂಬ ಪಾತ್ರವನ್ನು ಮಾಡುವುದರ ಮೂಲಕ ಜನರಿಗೆ ಇವರು ಇನ್ನೂ ಪರಿಚಿತರಾದರು. ಆ ಧಾರಾವಾಹಿಯಲ್ಲಿ ಇವರು ಮಾಡಿದ್ದು ನೆಗಟಿವ್ ಶೇಡ್ ಹೊಂದಿದ್ದ ವಿಲ್ಲನ್ ಕ್ಯಾರೆಕ್ಟರ್.2018 ರಲ್ಲಿ ಪಿಸಿ ಶೇಖರ್ ನಿರ್ದೇಶನದ ‘ ದಿ ಟೆರರಿಸ್ಟ್ ‘ ಚಿತ್ರದ ಮೂಲಕ ಇವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ನಂತರ ಇವರು 2019 ನಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ” 99″ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.ಇವರ ಮುಂದಿನ ” ನೀರೆ” ಕನ್ನಡ ಚಲನಚಿತ್ರದಲ್ಲಿ ಕಾರ್ತಿಕ್ ಜಯರಾಂ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಇವರು ತಮ್ಮ ವೃತ್ತಿ ಜೀವನವನ್ನು ಮಾಡೆಲಿಂಗ್ ಮೂಲಕ ಶುರು ಮಾಡಿದರು.

Advertisement

 

Advertisement

ಇವಾಗ ಪ್ರಸ್ತುತ ಕನ್ನಡ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ “ಮೂರು ಗಂಟು” ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.ಇದರಲ್ಲಿ ಇವರು ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.ಎರಡು ಪಾತ್ರಗಳು ಕೂಡಾ ವಿಭಿನ್ನವಾಗಿದ್ದು,ಒಂದೇ ತಾಯಿಯ ಎರಡು ಅವಳಿ ಮಕ್ಕಳ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಒಂದು ಪಾತ್ರ ಎಲ್ಲ ತಿಳಿದಿರುವ ಮುಗ್ಧೆ ಮತ್ತು ತಾಳ್ಮೆ ಸ್ವಾಭಾವದ ಹಾಗೂ ಸೂಪರ್ ಸ್ಟಾರ್ ಅಭಿಮಾನಿಯ ಪಾತ್ರವಾದರೆ,ಇನ್ನೊಂದು ಕಡೆ ಆ ಪಾತ್ರಕ್ಕೆ ವಿರುದ್ದವಾದ ಪಾತ್ರವಾಗಿದೆ.ತುಂಬಾ ಮಾಡರ್ನ್ ಹುಡುಗಿ ಹಾಗೂ ಜಂಬದ ಹುಡುಗಿಯ ಇನ್ನೊಂದು ಪಾತ್ರದಲ್ಲಿ ಇವರು ತಮ್ಮನ್ನು ತಾವು ಕಾಣಿಸಿಕೊಂಡಿದ್ದಾರೆ.ಈ ಧಾರಾವಾಹಿಯ ಮೂಲಕ ಕನ್ನಡಿಗರ ಮನಸುಗಳಿಗೆ ಈ ಮಲೆನಾಡಿನ ಚೆಂದದ ಬೆಡಗಿ ಇನ್ನೂ ಹತ್ತಿರವಾಗುತ್ತಿದ್ದಾರೆ.


ಮಲೆನಾಡಿನ ಈ ಬೆಡಗಿಗೆ ಇನ್ನೂ 23 ರ ಹರೆಯ.ಇವರಿಗೆ ಹಲವು ಸಿನಿಮಾ ಆಫರ್ ಬಂದಿವೆಯಂತೆ ಆದರೆ ಈ ಇವರು ಒಳ್ಳೆಯ ಕಥೆಯೊಂದಿಗೆ ಮತ್ತೆ ಬೆಳ್ಳಿ ಪರದೆಯ ಮೇಲೆ ಬರಬೇಕಂದು ಯೋಚನೆ ಮಾಡುತ್ತಿದ್ದಾರೆ. ತುಂಬಾ ಕಡಿಮೆ ವಯಸ್ಸಿನಲ್ಲಿಯೇ ಕಿರುತೆರೆಯಲ್ಲದೇ ಹಿರಿತೆರೆಯಲ್ಲೂ ಇವರು ಕಾಣಿಸಿಕೊಂಡಿದ್ದಾರೆ.ಮತ್ತು ಇವರ ಈ ಸಾಧನೆಯ ದಾರಿ ಎಂಬುದು ಎಂದು ಕೊನೆಯಾಗುವ ಸಂದರ್ಭ ಬರ್ದೆ ಇರಲಿ.ಇವರು ಕನ್ನಡದ ಹುಡುಗಿ ಒಂದು ಕಡೆಯಾದರೆ ಇವರು ನಮ್ಮ ಮಲೆನಾಡಾದ ಶಿವಮೊಗ್ಗದ ಬೆಡಗಿ ಎನ್ನುವುದು ಇನ್ನೊಂದು ಖುಷಿಯ ವಿಷಯವಾಗಿದೆ.ಯಶಸ್ಸಿನ ದಾರಿಯಲಿ ಈ ಬೆಡಗಿಯ ಸುಂದರ ಪಯಣ ಸಾಗುತ್ತಿರಲಿ….

Advertisement
Share this on...