ವಿಜಯದಶಮಿಯ ವಿಶೇಷತೆಗಳ ಬಗ್ಗೆ ನಿಮಗೆಷ್ಟು ಗೊತ್ತು?

in ಕನ್ನಡ ಮಾಹಿತಿ 339 views

ವಿಜಯದಶಮಿ ನವರಾತ್ರಿ ಉತ್ಸವದ ಕೊನೆಯ ದಿನ. ಪಾಂಡವರು ಶ’ತ್ರುಗಳ ಮೇಲೆ ಜಯ ಸಾಧಿಸಿದ ದಿನ ಎಂದೂ ಹೇಳಲಾಗುತ್ತದೆ. ರಾವಣನನ್ನು ಶ್ರೀರಾಮನು ಸಂ’ಹರಿಸಿದ ವಿಜಯೋತ್ಸವದ ದಿನ ಎಂದೂ ಭಾವಿಸಲಾಗಿದೆ. ಒಟ್ಟಾರೆ ದು’ಷ್ಟಶಕ್ತಿಗಳ ವಿರುದ್ಧ ಗೆಲುವು ಸಾಧಿಸಿದ ದಿನವೇ ವಿಜಯದಶಮಿ. ಒಂಭತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ ಕೊನೆಯ ದಿನವೇ ವಿಜಯದಶಮಿ.

Advertisement

ಪುರಾಣದ ಪ್ರಕಾರ:
ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮಿಸುವ ಹಬ್ಬ ದಸರಾ ಎನ್ನುವುದು ಇತಿಹಾಸದಲ್ಲಿ ಕಂಡು ಬರುವ ಉಲ್ಲೇಖವಾದರೂ, ಪುರಾಣದ ಪ್ರಕಾರ ಶಕ್ತಿ ಸ್ವರೂಪಿಣಿಯಾದ ದುರ್ಗಾಮಾತೆಯು ರಾ’ಕ್ಷಸರನ್ನು ಸಂ’ಹಾರ ಮಾಡಲು ಅವತಾರವೆತ್ತಿ, ರಾ’ಕ್ಷಸರನ್ನು ಸಂ’ಹರಿಸಿ ಲೋಕವನ್ನು ಕಾಪಾಡಿ, ಶಿಷ್ಟರಿಗೆ ಜಯ ನೀಡಿದ ದಿನ ವಿಜಯದಶಮಿ.

Advertisement

ಅ’ಸುರರ ದೊರೆಯಾದ ಮಹಿಷಾಸುರನು ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂ’ಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನ ಮೊರೆ ಹೋಗುತ್ತಾರೆ.

Advertisement

 

Advertisement

ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನು ಸೇರಿಸಿ ದುರ್ಗಾಮಾತೆಯನ್ನು ಸೃಷ್ಟಿಸುತ್ತಾರೆ. ಶಕ್ತಿಯ ಸಂಗಮದಿಂದ ಸೃಷ್ಟಿಯಾದ ದುರ್ಗಾದೇವಿಯನ್ನು ದೇವತೆಗಳು ಪೂಜಿಸಿ ಮಹಿಷನನ್ನು ಸಂ’ಹರಿಸುವಂತೆ ಬೇಡಿಕೊಳ್ಳುತ್ತಾರೆ. ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಮಹಿಷಾಸುರನ ಸಂ’ಹಾರಕ್ಕಾಗಿ ಧರೆಗಿಳಿಯುತ್ತಾಳೆ. ಒಂಭತ್ತು ದಿನಗಳ ಯು’ದ್ಧದ ನಂತರ ದಶಮಿಯ ದಿನ ದುರ್ಗೆಯು ಮಹಿಷಾಸುರನನ್ನು ಸಂ’ಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂ’ದು ವಿಜಯ ಸಿಕ್ಕಿದ್ದಕ್ಕೆ ‘ವಿಜಯದಶಮಿ’ ಎಂದು ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ.

ತ್ರೇತಾಯುಗದಲ್ಲಿ ರಾವಣನ ಸಂ’ವಾರ:
ರಾವಣನನ್ನು ಸಂ’ಹಾರ ಮಾಡುವ ಮೊದಲು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆ’ಕ್ರ’ಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವ’ಧಿಸಿದನು. ಹೀಗೆ ವಿಜಯ ದಶಮಿಯಂದೇ ರಾವಣನ ಸೋಲಾಯಿತು. ‘ದಶಹರ’ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂ’ಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎಂಬುದು ಪ್ರತೀತಿ,

ದ್ವಾಪರಾ ಯುಗದಲ್ಲಿ ಪಾಂಡವರ ಮೊದಲ ಜಯ:
ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ಮತ್ಸ್ಯದೇಶದಲ್ಲಿ ಕಳೆಯುತ್ತಾರೆ. ಈ ದೇಶದ ರಾಜನಾದ ವಿರಾಟನ ಆಸ್ಥಾನದಲ್ಲಿ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗನಾದ ವಲಲನಾಗಿ ವೇಷ ಬದಲಾಯಿಸುತ್ತಾರೆ. ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಸೇವೆಯಲ್ಲಿ ನಿಲ್ಲುತ್ತಾಳೆ.

ಪಾಂಡವರ ಅ’ಜ್ಞಾತವಾಸದ ಕೊನೆಯಲ್ಲಿ ಕುರುಸೇನೆ ವಿರಾಟನ ರಾಜ್ಯದಲ್ಲಿರುವ ಗೋವುಗಳನ್ನು ಅ’ಪಹರಿಸಿತ್ತು. ಈ ಸಮಯದಲ್ಲಿ ವಿರಾಟನ ಪುತ್ರನಾದ ಉತ್ತರಕುಮಾರ ನಾನು ಕುರುಸೇನೆಯನ್ನು ಸೆ’ದೆ ಬಡಿಯುತ್ತೇನೆ ಎಂದು ಹೇಳಿ ಜಂಬ ಕೊಚ್ಚಿಕೊಂಡು ಯು’ದ್ಧಕ್ಕೆ ಹೊರಟಿದ್ದ. ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿ ಯುದ್ಧಕ್ಕೆ ಕರೆದುಕೊಂಡು ಹೋದ. ಯುದ್ಧದಲ್ಲಿ ಸೋಲು ಸಮೀಪವಾಗುತ್ತಿದೆ ಎಂದಾಗ ಉತ್ತರ ಕುಮಾರ ‘ಯುದ್ಧದಿಂದ ಹಿಂದಕ್ಕೆ ಸರಿಯುತ್ತೇನೆ. ದಯವಿಟ್ಟು ಇಲ್ಲಿಂದ ತೆರಳೋಣ’ ಎಂದು ಹೇಳುತ್ತಾನೆ. ಈ ವೇಳೆ ಬೃಹನ್ನಳೆ ರೂಪದಲ್ಲಿದ್ದ ಅರ್ಜುನ ಅಜ್ಞಾತವಾಸದ ಸಮಯದಲ್ಲಿ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಶ’ಸ್ತ್ರಾಸ್ತ್ರವನ್ನು ತೆಗೆದು ವಿರಾಟರಾಜನ ಶ’ತ್ರುಗಳನ್ನು ಸೋಲಿಸುತ್ತಾನೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಕುರುಸೇನೆಯನ್ನು ವಿರಾಟ ಸೇನೆ ಸೋಲಿಸುತ್ತದೆ. ಈ ವಿಜಯದ ಕುರುಹಾಗಿ ಒಂಭತ್ತನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ

ಕಲಿಯುಗದಲ್ಲಿ ವಿಜಯದಶಮಿ:
ಅರಸರ ಆಡಳಿತ ಕಾಲದಲ್ಲಿ ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ದಂಡಯಾತ್ರೆಗೆ ಹೊರಟರೆ ವಿಜಯ ದೊರೆಯುತ್ತದೆ ಎಂಬ ನಂಬಿಕೆ ಇತ್ತು. ಹೀಗಾಗಿ ದಶಮಿಯಂದು ಪೂಜೆ ಸಲ್ಲಿಸಿ ದಂಡಯಾತ್ರೆಗೆ ಹೊರಡುತ್ತಿದ್ದರು. ಈ ಪದ್ಧತಿ ಈಗಲೂ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ಕೆಲವು ರಾಜವಂಶಸ್ಥರು ಸಾಂಕೇತಿಕವಾಗಿ ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಹಿಂದಿರುಗುತ್ತಾರೆ.ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಪದ್ಧತಿಯು ಮೈಸೂರು ಒಡೆಯರ ಕಾಲದಲ್ಲೂ ಮುಂದುವರಿದಿದೆ.

ವಿಜಯದಶಮಿ ಆಚರಣೆ:
ಆಶ್ವಯುಜ ಶುಕ್ಲ ದಶಮಿಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿಯ ನಂತರದ ದಿನವಾಗಿದ್ದು ಹಾಗಾಗಿ ಇದನ್ನು ನವರಾತ್ರಿಯ ಸಮಾಪ್ತಿ ದಿನವೆಂದು ಪರಿಗಣಿಸುತ್ತಾರೆ. ಈ ದಿನ ಸೀಮೋಲ್ಲಂಘನ, ಶಮೀ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧ ಪೂಜೆ ಮಾಡಲಾಗುತ್ತದೆ.

ಸೀಮೋಲ್ಲಂಘನ: ಅಪರಾಹ್ನ ಕಾಲದಲ್ಲಿ ಊರಿನ ಗಡಿಯಾಚೆ ಈಶಾನ್ಯ ದಿಕ್ಕಿನ ಕಡೆ ಸೀಮೋಲ್ಲಂಘನಕ್ಕಾಗಿ ಹೋಗುತ್ತಾರೆ ಮತ್ತು ಶಮೀ ವೃಕ್ಷ ಹಾಗೂ ಮಂದಾರ ವೃಕ್ಷವಿರುವಲ್ಲಿ ನಿಲ್ಲುತ್ತಾರೆ. ನಂತರ ಶಮೀ ಪೂಜೆಯನ್ನು ಮಾಡಿ, ಆ ವೃಕ್ಷದ ಬುಡದಲ್ಲಿ ಅಕ್ಕಿ, ಅಡಿಕೆ ಮತ್ತು ಬಂಗಾರದ ನಾಣ್ಯಗಳನ್ನು ಇಡುತ್ತಾರೆ. ನಂತರ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಅದರ ಬುಡದಲ್ಲಿನ ಸ್ವಲ್ಪ ಮಣ್ಣು ಮತ್ತು ಮರದ ಎಲೆಗಳನ್ನು ಮನೆಗೆ ತರುತ್ತಾರೆ. ಶಮಿಯ ಎಲೆಗಳನ್ನಲ್ಲದೇ ಮಂದಾರದ ಎಲೆಗಳನ್ನು ಬಂಗಾರವೆಂದು ದೇವರಿಗೆ ಅರ್ಪಿಸುತ್ತಾರೆ. ಮತ್ತು ಆಪ್ತರಿಗೆ ನೀಡುತ್ತಾರೆ. ಈ ಬಂಗಾರವನ್ನು ಕಿರಿಯರು ಹಿರಿಯರಿಗೆ ಕೊಡಬೇಕೆನ್ನುವ ನಿಯಮವಿದೆ.

Advertisement
Share this on...