ಕೊರೊನಾ ವಿರುದ್ಧ ಹೋರಾಡಲು ವಿಶೇಷ ರೀತಿಯಲ್ಲಿ ಅರಿವು ಮೂಡಿಸುತ್ತಿರುವ ಹೃತಿಕ್

in News/ಕನ್ನಡ ಮಾಹಿತಿ 35 views

ಕೊರೊನಾ ವೈರಸ್ ವಿಶ್ವದ ಎಲ್ಲಡೆ ಜನರ ಜೀವಕ್ಕೆ ಹಾನಿಯನ್ನುಂಟು ಮಾಡಿದೆ. ಇದರಿಂದ ಜನರು ಭೀತಿಗೆ ಒಳಗಾಗಿದ್ದಾರೆ. ಇಡೀ ದೇಶ ಲಾಕ್ ಡೌನ್ ಆಗಿದೆ. ಸದ್ಯ ಸೋಂಕಿಗೆ ಒಳಗಾಗಿರುವ ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ಖ್ಯಾತನಾಮರೂ ಸಹ ಮನೆಯಿಂದ ಆಚೆ ಬರದ ಹಾಗೆ ಕೆಲವು ನಿಯಮಗಳನ್ನು ರೂಪಿಸಲಾಗಿದೆ.
ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ಅನೇಕ ಬಾಲಿವುಡ್ ತಾರೆಯರು ಕಿರುಚಿತ್ರವೊಂದರಲ್ಲಿ ನಟಿಸಿದ್ದು, ಆ ವಿಡಿಯೋವನ್ನು ನೀವೆಲ್ಲರೂ ನೋಡಿರಬೇಕು. ‘ಫ್ಯಾಮಿಲಿ’ ಹೆಸರಿನ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಜನಿಕಾಂತ್, ಶಿವರಾಜ್ ಕುಮಾರ್, ಚಿರಂಜೀವಿ, ರಣಬೀರ್ ಕಪೂರ್, ಆಲಿಯಾ ಭಟ್, ಪ್ರಿಯಾಂಕ ಚೋಪ್ರಾ, ಮುಮ್ಮಟ್ಟಿ ಮುಂತಾದ ಖ್ಯಾತ ತಾರೆಯರು ಇದ್ದಾರೆ.

Advertisement

 

Advertisement

Advertisement

 

Advertisement

ಅಂದಹಾಗೆ ಕೊರೊನಾ ವಿರುದ್ಧ ಹೋರಾಡಲು ಸೂಪರ್ ಸ್ಟಾರ್ ಹೃತಿಕ್ ರೋಷನ್ ಕೂಡ ಒಂದು ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.  ಈ ವೈರಸ್ ಬಗ್ಗೆ ಜನರಿಗೆ ಹೃತಿಕ್ ವಿಶೇಷ ರೀತಿಯಲ್ಲಿ ಅರಿವು ಮೂಡಿಸುತ್ತಿದ್ದಾರೆ. 18 ಗಂಟೆಯ ಹಿಂದೆ ಇನ್ಸ್ಟಾಗ್ರಾಮ್’ನಲ್ಲಿ ತನ್ನ ಮಗನ ಚಿತ್ರವಿರುವ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು ಕೊರೊನಾ ವಿರುದ್ಧದ ಯುದ್ಧವನ್ನು ಚೆಸ್ ಆಟಕ್ಕೆ ಹೋಲಿಸಿದ್ದಾರೆ. ಇದರಲ್ಲಿ ಹೃತಿಕ್ ಮತ್ತು ಅವರ ಮಗ ಚೆಸ್ ಆಡುವುದನ್ನು ನೀವು ಕಾಣಬಹುದು.

 

 

ಹೃತಿಕ್ ಈ ಚಿತ್ರದ ಕೆಳಗೆ ಶೀರ್ಷಿಕೆಯೊಂದನ್ನೂ ಬರೆದಿದ್ದು, ಅದರ ಸಾರಾಂಶ ಹೀಗಿದೆ.. ಫೋಕಸ್… ವಸ್ತುನಿಷ್ಠವಾಗಿರಿ… ಎಲ್ಲಾ ನಿಯಮಗಳನ್ನು ಅನುಸರಿಸಿ. ಮುಂದೆ ಕೆಲವು ಹಂತಗಳನ್ನು ಯೋಜಿಸಿ. ಯಾವಾಗಲೂ ಸಿದ್ಧರಾಗಿರಿ …ಸರಿಯೆನಿಸಿದರೆ ನೀವು ಕೆಲವು ವಿಷಯಗಳನ್ನು ತ್ಯಾಗ ಮಾಡಬೇಕಾಗಬಹುದು, ನಿಮ್ಮ ಪ್ರತಿಯೊಂದು ನಡೆಯ ಸಾಧಕ-ಬಾಧಕಗಳ ಬಗ್ಗೆ ಯೋಚಿಸಿ, ತಪ್ಪುಗಳು ಪ್ರಾಣಹಾನಿಗೆ ಕಾರಣವಾಗಬಹುದು…”ಎಂದು ಬರೆದುಕೊಂಡಿದ್ದಾರೆ.

 

ಅಷ್ಟೇ ಅಲ್ಲ, ” ದೂರವಿದ್ದಷ್ಟು ಗುರಿ ಸಾಧಿಸಬಹುದು. ತುಂಬಾ ಹತ್ತಿರ ಹೋಗಬೇಡಿ. ನಿಮ್ಮನ್ನು ಮತ್ತು ನಿಮ್ಮ ಬಂಧು ಬಾಂಧವರನ್ನು ರಕ್ಷಿಸಿ. ಭಯಪಡಬೇಡಿ, ಇದು ಕೇವಲ ಆಟವಲ್ಲ. ಓಹ್, ನೀವು ಏನೇ ಪ್ರಾರಂಭಿಸುವ ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ. ನಮ್ಮ ಜೀವನದಲ್ಲಿ ಎಲ್ಲಾ ರೀತಿಯ ಯುದ್ಧಗಳಿಗೆ ನಿಯಮಗಳು ಒಂದೇ ಆಗಿರುತ್ತವೆ ಎಂದು ನಾನು ಭಾವಿಸುತ್ತೇನೆ. ಇದನ್ನು ಗೆಲ್ಲೋಣ” ಎಂದು ಅಭಿಮಾನಿಗಳ ಬಳಿ ಕೋರಿದ್ದಾರೆ ಹೃತಿಕ್.  ಹೃತಿಕ್ ಈ ಸಂದೇಶಕ್ಕೆ ಈಗಾಗಲೇ ನೂರಾರು ಅಭಿಮಾನಿಗಳು ಸಕಾರಾತ್ಮಕ ಹಾಗೂ ನಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಈಗಲೂ ಕಮೆಂಟ್’ಗಳ ಮಹಾಪೂರವೇ ಹರಿದುಬರುತ್ತಿದೆ.

Advertisement
Share this on...