‘ಕೆಜಿಎಫ್​​​​​-2’ ಡೈಲಾಗ್​​​​​​​​​​, ಪೋಸ್ಟರ್​​​​​​​​​​​​ ಮೂಲಕ ಜನರಿಗೆ ಸಂಚಾರಿ ನಿಯಮದ ಪಾಠ ಹೇಳಿದ ಹೈದರಾಬಾದ್ ಪೊಲೀಸರು

in ಸಿನಿಮಾ 151 views

ಜನರಲ್ಲಿ ಸಾಮಾಜಿಕ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಲಕ್ಷಾಂತರ ಮಂದಿ ಫಾಲೋ ಮಾಡುವ ಸೆಲಬ್ರಿಟಿಗಳನ್ನು ಕೂಡಾ ತಮ್ಮ ಈ ಕಾರ್ಯಕ್ಕೆ ಸರ್ಕಾರ ಕರೆತಂದಿರುವ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇದೀಗ ಹೈದರಾಬಾದ್ ಪೊಲೀಸರು ಜನರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಯಶ್ ಹಾಗೂ ‘ಕೆಜಿಎಫ್​​​ 2’ ಚಿತ್ರದ ಮೊರೆ ಹೋಗಿದ್ದಾರೆ. ಅರೆ, ಹೌದಾ…! ಯಶ್​ ಯಾವುದಾದರೂ ಸಂಚಾರಿ ನಿಯಮಕ್ಕೆ ಸಂಬಂಧಿಸಿದ ಜಾಹೀರಾತು ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರಾ ಎಂದುಕೊಳ್ಳಬೇಡಿ. ಹೈದರಾಬಾದ್ ನಗರ ಪೊಲೀಸರು ಯಶ್​​​ ಅಭಿನಯದ ‘ಕೆಜಿಎಫ್​​​​-2’ ಚಿತ್ರದ ಪೋಸ್ಟರ್​​​​ವೊಂದರ ಮೇಲೆ ಮೀಮ್ಸ್ ಸೃಷ್ಟಿಸಿ ಅದರ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

Advertisement

‘ಕೆಜಿಎಫ್​​​-2’ ಟ್ರೇಲರ್​​​​​​​​​​​​​​ನಲ್ಲಿ ಬರುವ ಯಶ್​​​​ ಡೈಲಾಗನ್ನು ಈ ಮೀಮ್ಸ್​​​​​​ಗೆ ಬಳಸಿಕೊಳ್ಳಲಾಗಿದೆ. ವೈಲೆನ್ಸ್ ವೈಲೆನ್ಸ್ ವೈಲೆನ್ಸ್​​​….ಐ ಡೋಂಟ್ ಲೈಕ್ ಇಟ್..ಐ ಅವಾಯ್ಡ್​​…ಬಟ್ ವೈಲೆನ್ಸ್ ಲೈಕ್ಸ್ ಮಿ ಎಂಬ ಡೈಲಾಗ್​​​​​ ಬದಲಿಗೆ, ಆ ದೃಶ್ಯದ ಸ್ಕ್ರೀನ್​​​ ಶಾಟ್​​​​​ ಬಳಸಿಕೊಂಡು ಹೆಲ್ಮೆಟ್..ಹೆಲ್ಮೆಟ್​​​​..ಹೆಲ್ಮೆಟ್​​…ಐ ಡೋಂಟ್ ಲೈಕ್ ಇಟ್​​​…ಬಟ್ ಹೆಲ್ಮೆಟ್​ ಸೇವ್ಸ್ ಮಿ..ಐ ಕಾಂಟ್ ಅವಾಯ್ಡ್​​​​​​​​​​​​ (ನನಗೆ ಹೆಲ್ಮೆಟ್ ಎಂದರೆ ಇಷ್ಟವಿಲ್ಲ, ಆದರೆ ಹೆಲ್ಮೆಟ್ ನನ್ನ ಪ್ರಾಣವನ್ನು ಉಳಿಸಿದೆ, ಆದ್ದರಿಂದ ಅದರನ್ನು ಕಡೆಗಣಿಸುವಂತಿಲ್ಲ) ಎಂಬರ್ಥದಲ್ಲಿ ಮೀಮ್ಸ್​ ಸೃಷ್ಟಿಸಲಾಗಿದೆ. ಈ ಫೋಟೋವನ್ನು ಹೈದರಾಬಾದ್ ಸಿಟಿ ಪೊಲೀಸ್ ತಮ್ಮ ಅಧಿಕೃತ ಟ್ವಿಟ್ಟರ್ ಪೇಜ್​​​​​​ನಲ್ಲಿ ಹಂಚಿಕೊಂಡಿದ್ದಾರೆ.

Advertisement

”ದ್ವಿಚಕ್ರ ವಾಹನವನ್ನು ನಡೆಸುವಾಗ ತಪ್ಪದೆ ಹೆಲ್ಮೆಟ್ ಧರಿಸುವ ಮೂಲಕ ಸುರಕ್ಷಿತವಾಗಿ ನಿಮ್ಮ ಸ್ಥಳವನ್ನು ಸೇರಿಕೊಳ್ಳಿ. ಟ್ರಾಫಿಕ್ ನಿಯಮವನ್ನು ಪಾಲಿಸೋಣ, ಮತ್ತೊಬ್ಬರಿಗೆ ಆದರ್ಶವಾಗಿ ಇರೋಣ” ಎಂಬ ವಾಕ್ಯಗಳ ಮೂಲಕ ಜನರಿಗೆ ಸಂಚಾರಿ ನಿಯಮದ ಸುರಕ್ಷತೆ ಬಗ್ಗೆ ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೂ ಮುನ್ನ ರಾಜಮೌಳಿ ನಿರ್ದೇಶನದ ಆರ್​​​ಆರ್​​ಆರ್​ ಸಿನಿಮಾದ ಪೋಸ್ಟರ್ ಬಿಡುಗಡೆಯಾದಾಗಲೂ ಇದೇ ಹೈದರಾಬಾದ್ ಪೊಲೀಸರು ಆ ಪೋಸ್ಟರ್ ಬಳಸಿ ಮೀಮ್ಸ್​ ಮಾಡಿದ್ದರು. ಜ್ಯೂನಿಯರ್ ಎನ್​​​ಟಿಆರ್​​​ ಹಾಗೂ ರಾಮ್​ಚರಣ್ ತೇಜ ಬೈಕ್​​​​​ ಏರಿ ಬರುತ್ತಿರುವ ಪೋಸ್ಟರ್​​​​​​​ ಎಡಿಟ್ ಮಾಡಿದ್ದ ಪೊಲೀಸರು ಬೈಕ್​​​ಗೆ ನಂಬರ್ ಪ್ಲೇಟ್, ಜ್ಯೂ.ಎನ್​​​ಟಿಆರ್​​ ಹಾಗೂ ರಾಮ್​ಚರಣ್​​​​​​ ತಲೆಗೆ ಹೆಲ್ಮೆಟ್​​​​​​​​​ ಹಾಕಿಸಿದ್ದರು. ಪೊಲೀಸರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಯಶ್​ ಅಭಿನಯದ ‘ಕೆಜಿಎಫ್​​​-2’ ಸಿನಿಮಾ ಏಪ್ರಿಲ್ 14 ರಂದು ತೆರೆ ಕಾಣುತ್ತಿದೆ. ಈಗಾಗಲೇ ಮುಂಗಡ ಬುಕಿಂಗ್ ಆರಂಭವಾಗಿದ್ದು ಅಲ್ಲಿಯೂ ಸಿನಿಮಾ ದಾಖಲೆ ಬರೆದಿದೆ. ಅಭಿಮಾನಿಗಳು ಸಿನಿಮಾ ನೋಡಲು ದಿನಗಣನೆ ಮಾಡುತ್ತಿದ್ದಾರೆ.
-ರಕ್ಷಿತ ಕೆ.ಆರ್​​.ಎಸ್

Advertisement
Share this on...