5 ವರ್ಷದ ಈ ಬಾಲಕಿ ಮಾಡಿರುವ ಸಾಧನೆ ಕೇಳಿದ್ರೆ ನಿಜಕ್ಕೂ ಹೆಮ್ಮೆಯಾಗುತ್ತೆ…! ಈಕೆ ಈಗ ಸಖತ್ ಫೇಮಸ್..!

in ಮನರಂಜನೆ 89 views

ರ್‍ಯಾಪ್​​​ ಸಾಂಗ್ ಎನ್ನುವುದು ಸಂಗೀತದ ಒಂದು ಪ್ರಾಕಾರ. ಬಹಳ ವರ್ಷಗಳ ಹಿಂದೆ ಈ ರ್‍ಯಾಪ್​​​ ಸಾಂಗ್ ಎನ್ನುವುದು ಹಾಲಿವುಡ್​, ಬಾಲಿವುಡ್​​​ಗಷ್ಟೇ ಸೀಮಿತವಾಗಿತ್ತು. ಕಾಲ ಕಳೆದಂತೆ ಬಹುತೇಕ ಎಲ್ಲಾ ಭಾಷೆಗಳಲ್ಲೂ ರ್‍ಯಾಪರ್​​​​​​ಗಳು ಹುಟ್ಟಿಕೊಂಡ್ರು. ಅದಕ್ಕೂ ಮುನ್ನ ರ್‍ಯಾಪರ್​​​​​​ಗಳಿದ್ದರೂ ಅವರಿಗೆ ಅಷ್ಟು ಮನ್ನಣೆ ಇರಲಿಲ್ಲ. ಆದರೆ ಈಗ ಕನ್ನಡದಲ್ಲಿ ಕೂಡಾ ಸಾಕಷ್ಟು ರ್‍ಯಾಪರ್​​​​​ಗಳಿದ್ದಾರೆ. ಅನೇಕ ಕನ್ನಡ ರ್‍ಯಾಪ್​​ ಹಾಡುಗಳು ಈಗ ಸಖತ್ ಫೇಮಸ್ ಆಗಿವೆ.

Advertisement

 

Advertisement

Advertisement

ಯಶಿಕಾ ರಾಜ್​​ ಎಂಬ ಈ ಮುದ್ದು ಬಾಲಕಿ ಭಾರತದ ಮೊದಲ ಕಿರಿಯ ರ್‍ಯಾಪರ್. ಮುದ್ದಾಗಿ ಹಾಡುತ್ತಾ, ಕುಣಿಯುತ್ತಿರುವ ಈಕೆಯನ್ನು ನೋಡುವುದೇ ಚೆನ್ನ. ‘ಓ ಮೈ ಗಾಡ್’ ಎಂಬ ಈ ಹೊಸ ವಿಡಿಯೋ ಸಾಂಗ್​​​ನಲ್ಲಿ ಯಶಿಕಾ ವಿಧ ವಿಧವಾದ ಕಾಸ್ಟ್ಯೂಮ್​ನಲ್ಲಿ ಮಿಂಚಿದ್ದಾಳೆ. ಈಕೆಯನ್ನು ನೋಡಿದರೆ ಭವಿಷ್ಯದಲ್ಲಿ ಹಿರೋಯಿನ್ ಆಗುವ ಲಕ್ಷಣಗಳು ಕೂಡಾ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಕ್ಯಾಮರಾ ಮುಂದೆ ತನ್ನ ಪ್ರತಿಭೆ ಪ್ರೂವ್ ಮಾಡಿರುವ ಈ ಮಗು ಎಲ್ಲರ ಕೇಂದ್ರಬಿಂದುವಾಗಿದ್ದಾಳೆ.

Advertisement

 

ಯಶಿಕಾ ಅವರ ಈ ವಿಡಿಯೋವನ್ನು ಡಿ ಬೀಟ್ಸ್ ಮ್ಯೂಸಿಕ್ ವರ್ಡ್​ ತನ್ನ ಯೂಟ್ಯೂಬ್​​ನಲ್ಲಿ ಅಪ್​​ಲೋಡ್ ಮಾಡಿದೆ. ‘ಓ ಮೈ ಗಾಡ್’ ಸಾಹಿತ್ಯವನ್ನು ಮಾರ್ಟಿನ್​ ಬರೆದಿದ್ದರೆ ಎಂ.ಸಿ. ಬಿಜ್ಜು ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ಮಾಣ ಹಾಗೂ ನಿರ್ದೇಶನ ಕೂಡಾ ಮಾರ್ಟಿನ್ ಅವರದ್ದೇ. ಈ ವಿಡಿಯೋ ಹಾಡಿಗೆ ಸಿದ್ ಅವರ ಕ್ಯಾಮರಾ ಹಾಗೂ ಛಾಯಾಗ್ರಹಣವಿದೆ. ಹಿಪ್​​ಅಪ್ ಕನ್ನಡಿಗರು ಅರ್ಪಿಸುವ ಈ ವಿಡಿಯೋ ಸಾಂಗನ್ನು ಯೂಟ್ಯೂಬ್​​​ನಲ್ಲಿ ಇದುವರೆಗೂ 77 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

5 ವರ್ಷದ ಯಶಿಕಾ ರಾಜ್​​ ಮುಂದೆ ಇನ್ನೂ ಹೆಚ್ಚು ರ್‍ಯಾಪ್​​​ ಹಾಡುಗಳನ್ನು ಹಾಡಿ ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟದವರೆಗೂ ಕೊಂಡೊಯ್ಯಲ್ಲಿ ಎಂದು ಹಾರೈಸೋಣ.

ಪ್ರೋತ್ಸಾಹಿಸಲು ಲೈಕ್ ಮಾಡಿ..ಶೇರ್ ಮಾಡಿ..

Advertisement
Share this on...