ಯಡಿಯೂರಪ್ಪ ಬಗ್ಗೆ ನನ್ನ ಬಳಿ ಬೇರೆನೋ ಮಾಹಿತಿ ಇದೆ..!: ಡಿಕೆ ಶಿವಕುಮಾರ್ - Namma Kannada Suddi
dk shivakumar

ಯಡಿಯೂರಪ್ಪ ಬಗ್ಗೆ ನನ್ನ ಬಳಿ ಬೇರೆನೋ ಮಾಹಿತಿ ಇದೆ..!: ಡಿಕೆ ಶಿವಕುಮಾರ್

in ರಾಜಕೀಯ 140 views

ತುಮಕೂರು: ಯಡಿಯೂರಪ್ಪರನ್ನು ಅಧಿಕಾರದಿಂದ ಇಳಿಸಲು ಏನ್ ಮಾಡ್ತಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಬೇರೆಯದೇ ಮಾಹಿತಿ ಇದೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊಸ ಬಾಂ’ಬ್ ಸಿ’ಡಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ನಾಯಕ ಬದಲಾವಣೆ ಕುರಿತು ಎದ್ದಿರುವ ಗ’ದ್ದಲ ಕುರಿತು ತುಮಕೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿಯವರು ಯಡಿಯೂರಪ್ಪನವರನ್ನು ಕೆಳಗಿಳಿಸಲು ಏನೇನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ನಮ್ಮ ಬಳಿಯೂ ಬೇರೆ ಬೇರೆ ಮಾಹಿತಿ ಇದೆ. ಅವರ ಪಾರ್ಟಿ ಅವರು ಏನಾದರೂ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

Advertisement

ಸಿಟಿ ರವಿ, ಅಶ್ವಥ್ ನಾರಾಯಣ ಡಮ್ಮಿ

Advertisement

ನಮ್ಮ ವಿಜಯೇಂದ್ರ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಎರಡು ವಿಧಾನಸಭಾ ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ಯಡಿಯೂರಪ್ಪನವರು ನಿನ್ನೆ ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದ ಮೇಲೆ ಸಿ.ಟಿ ರವಿ, ಅಶ್ವಥ್ ನಾರಾಯಣ ಯಾರೂ ಇಲ್ಲ. ಇವರೆಲ್ಲ ಡಮ್ಮಿ ಅಂತಾ ಗೊತ್ತಾಯಿತಲ್ಲ. ಇಲ್ಲಿ ಬೇರೆಯವರ ನಾಯಕತ್ವವೇ ಇಲ್ಲ. ಇರುವುದು ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಮಾತ್ರ. ಯಡಿಯೂರಪ್ಪ ಅವರೇ ಹೇಳಿದ ಮೇಲೆ ಸಿ.ಟಿ ರವಿಗಾಗಲಿ, ಅಶ್ವಥ್ ನಾರಾಯಣ ಅವರಿಗಾಗಲಿ ಮಾತನಾಡಲು ಏನು ಹಕ್ಕಿದೆ?. ಸಿಟಿ ರವಿ ನಮ್ಮ ಪಕ್ಷದ ನಾಯಕರ ಬೆಂಬಲ ಇದೆ ಅಂತಾರೆ, ಅವರಿಗೆ ಒಳ್ಳೆಯದಾಗಲಿ. ಸಾಮಾನ್ಯ ಪ್ರಜ್ಞೆ ಇರುವವರ ಜತೆ ಮಾತನಾಡಬಹುದು, ಹಳ್ಳಿ ಜನಕ್ಕಾದರೂ ಪ್ರಜ್ಞೆ ಇರುತ್ತೆ. ಆದರೆ ಪ್ರಜ್ಞೆ ಇಲ್ಲದವರ ಹೇಳಿಕೆ ಬಗ್ಗೆ ನಾನು ಏನಂತಾ ಪ್ರತಿಕ್ರಿಯೆ ನೀಡಲಿ? ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಗ್ರಾಮ ಪಂಚಾಯ್ತಿ ಸದಸ್ಯನಂತೆ ಮಾತನಾಡಿದರೆ ಏನು ಹೇಳೋಣ? ಅವರ ಪಕ್ಷದ ಘನತೆ ಏನು ಎಂಬುದು ಅವರ ಮಾತುಗಳೇ ಹೇಳುತ್ತಿವೆ.

Advertisement

Advertisement

ರಾಜ್ಯದಲ್ಲಿ ಸರ್ಕಾರವೇ ಇಲ್ಲ

ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂತ್ರಿಗಳು ಹಿಂದೆಯೂ ಹೋಗಿಲ್ಲ, ಈಗಲೂ ಹೋಗುವುದಿಲ್ಲ. ಒಬ್ಬರು ಪ್ರವಾಹ ಬಂದಿಲ್ಲ ಅಂತಾರೆ, ಮತ್ತೊಬ್ಬರು ಆರೋಗ್ಯ ಸರಿ ಇಲ್ಲ ಅಂತಾರೆ, ಮತ್ತೊಬ್ಬರು ತಮಗೆ ಸಮಸ್ಯೆ ಇದೆ ಅಂತಾರೆ. ಇನ್ನು ಶಿರಾದಲ್ಲಿ ರೈತರು ಬೆಳೆದ ಕಡಲೆಕಾಯಿ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿದ್ದರೂ ಆ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ನನ್ನ ಮೇಲೆ ವಿವಿಧ ಇಲಾಖೆಗಳ ಮೂಲಕ ದಾಳಿ ಮಾಡಿರುವುದು ಒಳ್ಳೆಯದೋ ಅಥವಾ ಕೆಟ್ಟದ್ದೊ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ನಾವು ಸದ್ಯಕ್ಕೆ ಚುನಾವಣೆ ಮಾಡೋಣ. ನಾವು ಚುನಾವಣೆ ಬಗ್ಗೆ ನಮ್ಮ ಆಂತರಿಕ ಸಮೀಕ್ಷೆ ನಡೆಸಿ ವರದಿ ಪಡೆದಿದ್ದೇವೆ. ನಮಗೆ ಅಚ್ಚರಿಯಾಗೋ ರೀತಿಯಲ್ಲಿ ಜನ ಬೆಂಬಲ ತೋರಿಸುತ್ತಿದ್ದಾರೆ. ನಮಗೆ ಶೇ.44ರಷ್ಟು ಜನ ಬೆಂಬಲ ನೀಡಿದರೆ, ಒಂದು ಪಕ್ಷಕ್ಕೆ ಶೇ.22 ಹಾಗೂ ಮತ್ತೊಂದು ಪಕ್ಷಕ್ಕೆ ಶೇ.21ರಷ್ಟು ಬೆಂಬಲ ನೀಡಿದ್ದಾರೆ. ಶಿರಾ ಹಾಗೂ ಆರ್ ಆರ್ ನಗರ ಕ್ಷೇತ್ರಗಳಲ್ಲಿ ನಮಗೆ ಎರಡೂ ಪಕ್ಷಗಳು ನಮಗೆ ನೇರ ಪ್ರತಿಸ್ಪರ್ಧಿಗಳೇ, ಯಾರೂ ಹೆಚ್ಚಲ್ಲ, ಯಾರೂ ಕಡಿಮೆ ಅಲ್ಲ ಎಂದರು.

ಈ ಚುನಾವಣೆ ಆಡಳಿತ ಪಕ್ಷಕ್ಕೆ ಒಂದು ಸೂಚನೆ

ಈ ಚುನಾವಣೆಯಿಂದ ಸರ್ಕಾರ ಬದಲಾಗುತ್ತದೆ ಎಂದು ಭಾವಿಸುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ನಾವು ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಗೆದ್ದೆವು. ಬಳ್ಳಾರಿ ಲೋಕಸಭೆ ಚುನಾವಣೆ ಗೆದ್ದೆವು. ಹೀಗಾಗಿ ಉಪಚುನಾವಣೆ ದಿಕ್ಸೂಚಿ ಎಂದು ಪರಿಗಣಿಸಲು ಆಗಲ್ಲ. ಆದರೆ ಆಡಳಿತ ಪಕ್ಷಕ್ಕೆ ಒಂದು ಸಂದೇಶ ನೀಡಬೇಕು. ಹಾಗಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.

Advertisement
Share this on...

Latest from ರಾಜಕೀಯ

ಅಭಿಮಾನಿ ತಮ್ಮನ್ನು ಬೀಳಿಸಿದರೂ ಕೋಪಗೊಳ್ಳದ ಪವನ್ ಕಲ್ಯಾಣ್…ನಿಮ್ಮ ಸಹನೆಗೆ ಹ್ಯಾಟ್ಸಾಫ್ ಎಂದ ನೆಟಿಜನ್ಸ್​​​​​​..ವಿಡಿಯೋ

ಪವನ್ ಕಲ್ಯಾಣ್, ಆಂಧ್ರ ಹಾಗೂ ತೆಲಂಗಾಣದಲ್ಲಿ ಪವರ್ ಸ್ಟಾರ್ ಎಂದೇ ಫೇಮಸ್. ನಟನಾಗಿ, ರಾಜಕೀಯ ನಾಯಕನಾಗಿ…

ತಮಿಳುನಾಡು ಸಿಎಂ ಭೇಟಿ ಮಾಡಿದ ಶಿವರಾಜ್​​ ಕುಮಾರ್ ದಂಪತಿ….ಭೇಟಿ ಬಗ್ಗೆ ಶಿವಣ್ಣ ಹೇಳಿದ್ದೇನು..?

ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಶಿವರಾಜ್ ಕುಮಾರ್ ಇತ್ತೀಚೆಗೆ ಮೈಸೂರಿನಿಂದ ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿಗೆ ಕರೆತಂದು…

ನನ್ನ ಕೆನ್ನೆಗಳನ್ನು ಇನ್ಮುಂದೆ ಜೋಪಾನವಾಗಿರಿಸಿಕೊಳ್ಳಬೇಕು…ಸಂಸದೆ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ…?

ರಾಜಕೀಯ ಮುಖಂಡರು ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ನೀಡುವ ಕೆಲವೊಂದು ಹೇಳಿಕೆಗಳು ಇತರರ ಬೇಸರಕ್ಕೆ ಕಾರಣವಾಗುತ್ತದೆ. ಈ…

ಪಾಲಿಟಿಕ್ಸ್​​​​ ಬೇಡ ಎನ್ನುತ್ತಿದ್ದ ರಿಯಲ್ ಹೀರೋ, ಪ್ರಕಾಶ್ ರಾಜ್​ ವಿರುದ್ಧ ಮಾ ಚುನಾವಣೆಗೆ ಸ್ಪರ್ಧಿಸ್ತಾರಾ…?

ಕಳೆದ ಲೋಕಸಭೆ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್, ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅವರು…

Go to Top