ನನಗೆ ಅದೇ ಹಾಡು ಬೇಕು…ತಾತನ ಬಳಿ ಅವರದ್ದೇ ಸಿನಿಮಾ ಹಾಡಿಗೆ ಬೇಡಿಕೆ ಇಟ್ಟ ಕಂದ

in ಮನರಂಜನೆ 52 views

ಲಾಕ್​ಡೌನ್, ಹೋಂ ಕ್ವಾರಂಟೈನ್, ಕೊರೊನಾ…ದಿನಕ್ಕೆ ಎಷ್ಟು ಬಾರಿ ಈ ಪದಗಳನ್ನು ಕೇಳುತ್ತೇವೋ ನಮಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಕೊರೊನಾ ಬಿಟ್ಟು ಬೇರೆ ಸುದ್ದಿಗಳು ಬರುವುದೇ ಅಪರೂಪವಾಗಿದೆ. ಸಿನಿಮಾಗಳು, ಹಳೆಯ ಕಾರ್ಯಕ್ರಮಗಳನ್ನು ನೋಡುತ್ತಾ, ಗೇಮ್ಸ್ ಆಡುತ್ತಾ, ಅಡುಗೆ ಮಾಡುತ್ತಾ ಜನರು ಕಾಲ ಕಳೆಯುತ್ತಿದ್ದಾರೆ.ಈ ಪರಿಸ್ಥಿತಿ ಸಿನಿಮಾ ನಟರಿಗೆ ಕೂಡಾ ಹೊರತಾಗಿಲ್ಲ. ಸಾಮಾನ್ಯ ಜನರಂತೆ ಅವರೂ ಕೂಡಾ ಮನೆಯಲ್ಲಿ ಕುಳಿತಿದ್ದಾರೆ. ತೆಲುಗುನಟ ಚಿರಂಜೀವಿ ಇತ್ತೀಚೆಗೆ ತಮ್ಮ ತಾಯಿಗೆ ಪೆಸರಟ್ಟು ಮಾಡಿಕೊಡುವ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಅವರು ಲಾಕ್​​ಡೌನ್​​​ ದಿನಗಳಿಗೂ ಮುನ್ನ ಮಾಡಿದ ವಿಡಿಯೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಇದೂ ಕೂಡಾ ವೈರಲ್ ಆಗಿದೆ. ವಿಡಿಯೋದಲ್ಲಿ ಚಿರಂಜೀವಿ ಶ್ರೀಜಾ ಹಾಗೂ ಕಲ್ಯಾಣ್ ದಂಪತಿಯ ಒಂದು ವರ್ಷದ ಮಗು ನವಿಷ್ಕಾಳನ್ನು ತೊಡೆ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದಾರೆ.

Advertisement

 

Advertisement

Advertisement

 

Advertisement

ನಿನಗೆ ಯಾವ ಹಾಡು ಬೇಕು ಎಂದು ಚಿರಂಜೀವಿ ಮೊಮ್ಮಗಳನ್ನು ಕೇಳುತ್ತಾರೆ. ಅದಕ್ಕೆ ಮಗು, ಮಿಮ್ಮಿ ಹಾಡು ಬೇಕು ಎಂದು ‘ಖೈದಿ ನಂಬರ್ 150’ ಚಿತ್ರದ ಮಿಮ್ಮಿ ಹಾಡು ಬೇಕು ಎಂದು ಡಿಮ್ಯಾಂಡ್ ಮಾಡುತ್ತಾಳೆ. ಅದಕ್ಕೆ ಚಿರಂಜೀವಿ ಮಿಮ್ಮಿ ಹಾಡನ್ನು ಎಷ್ಟು ಸಾರಿ ಕೇಳುತ್ತೀಯ, ಬೇರೆ ಹಾಡನ್ನು ಕೇಳು ಎನ್ನುತ್ತಾರೆ. ಅದಕ್ಕೆ ಆ ಮಗು ಮಿಮ್ಮಿ ಹಾಡೇ ಬೇಕು ಎಂದು ಹಠ ಹಿಡಿಯುತ್ತಾಳೆ. ಮೊಮ್ಮಗಳ ಬೇಡಿಕೆಗೆ ಚಿರಂಜೀವಿ ಆಕೆ ಕೇಳಿದ ಹಾಡನ್ನು ಪ್ಲೇ ಮಾಡುತ್ತಾರೆ. ಹಾಡು ಕೇಳಿದೊಡನೆ ನವಿಷ್ಕಾ ಖುಷಿಯಿಂದ ಡ್ಯಾನ್ಸ್ ಮಾಡುತ್ತಾ ಹಾಡನ್ನು ಎಂಜಾಯ್ ಮಾಡುತ್ತಾಳೆ.

 

ಇದನ್ನು ಚಿರಂಜಿವಿ ತಮ್ಮ ಇನ್ಸ್​​​ಟಾಗ್ರಾಮ್​​ನಲ್ಲಿ ಷೇರ್ ಮಾಡಿಕೊಂಡಿದ್ದು, ಸಂಗೀತಕ್ಕೆ ಇರುವ ಶಕ್ತಿಯೇ ಅಂತದ್ದು, ಮಗುವಿಗೆ ಒಂದು ವರ್ಷ ಈ ವಯಸ್ಸಿನಲ್ಲೇ ಇಂತದ್ದೇ ಹಾಡು ಬೇಕು ಎಂದು ಕಂಡುಹಿಡಿಯುತ್ತಾಳೆ. ಸಂಗೀತಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುತ್ತಾಳೆ ಎಂದು ಮೊಮ್ಮಗಳನ್ನು ಹೊಗಳಿದ್ದಾರೆ.

Advertisement
Share this on...