ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಶಿಶಿರ ಋತು, ಮಾಘ ಮಾಸೆ, ಶುಕ್ಲ ಪಕ್ಷದ ಪ್ರಥಮಿ ತಿಥಿ, ಪೂರ್ವಾಫಾಲ್ಗುಣಿ ನಕ್ಷತ್ರ, ಧೃತಿ ಯೋಗ, ಕೌಲವ ಕರಣ, 28ನೇ ತಾರೀಕು ಫೆಬ್ರವರಿ 2021 ಭಾನುವಾರದ ಪಂಚಾಂಗ ಫಲವನ್ನು ಸಂಖ್ಯೆಗಳಿಗನುಗುಣವಾಗಿ ಅಥವಾ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ದಿನಭವಿಷ್ಯವನ್ನು ಶ್ರೀ ರವಿಶಂಕರ್ ಗುರೂಜಿರವರು ನೀಡಿದ್ದಾರೆ.
ಯಾವುದೇ ವ್ಯಕ್ತಿಗೆ ನೀವು ಕಷ್ಟಪಟ್ಟು ದುಡಿದು ಕೂಡಿಟ್ಟಂತಹ ಹಣವನ್ನು ಕೊಟ್ಟು ಅದು ನಿಮಗೆ ಹಿಂತಿರುಗಿ ಬರದೆ ಇದ್ದರೆ ಅದಕ್ಕೊಂದು ಅದ್ಭುತವಾದ ಸಂಕಲ್ಪವನ್ನು ಗುರೂಜಿ ರವರು ತಿಳಿಸಿಕೊಡಲಿದ್ದಾರೆ. ಯಾರಿಗಾದರೂ ಹಣವನ್ನ ನೀಡಬೇಕಾದರೆ ಅಧಿಕೃತವಾಗಿ ಬರವಣಿಗೆ ಮೂಲಕವೇ ಕೊಡಿ. ಅತಿ ಮುಖ್ಯವಾಗಿ ಲಕ್ಷ್ಮೀ ನಕ್ಷತ್ರವಾದ ಭರಣಿ ಪೂರ್ವಾಫಾಲ್ಗುಣಿ ಪೂರ್ವಾಷಾಢ ನಕ್ಷತ್ರದ ಇಲ್ಲವೇ ಶುಕ್ರವಾರ ಏಕಾದಶಿ ಬಂದರೆ ಅತ್ಯದ್ಬುತ, ಇಲ್ಲವೇ ಸೋಮವಾರ ಏಕಾದಶಿ ಬಂದರೆ ಅದ್ಭುತ ಈ ದಿನಗಳಂದು ಲಕ್ಷ್ಮಿ ದಿಗ್ಬಂಧನವನ್ನು ಮನೆಗೆ ತಂದು ಅದಕ್ಕೆ ತುಪ್ಪದ ದೀಪವನ್ನು ಹಚ್ಚಿ ತುಪ್ಪಕ್ಕೆ ಒಂದು ಹನಿಯಾದರು ಹೊಂಗೆ ಎಣ್ಣೆಯನ್ನು ಹಾಕಿ, ದೀಪವನ್ನು ಹಚ್ಚಿದ ಮೇಲೆ ವಿಷ್ಣು ಸಹಸ್ರನಾಮ ಕೇಳಿ ಇದರಿಂದ ಅತ್ಯದ್ಭುತವಾದ ಫಲಿತಾಂಶವನ್ನ ಪಡೆಯುತ್ತೀರಿ. ಅವರು ಮಣ್ಣಿನ ದೀಪಗಳನ್ನು ತೆಗೆದುಕೊಂಡು ಅದಕ್ಕೆ ಹೊಂಗೆ ಎಣ್ಣೆಯನ್ನು ಹಾಕಿ ಕೆಂಪು ಅಥವಾ ಕುಂಕುಮದ ಬತ್ತಿಯನ್ನ ಮಾಡಿ ಆರು ದೀಪಗಳನ್ನು ಬಾಲಾಜಿ ದೇವಸ್ಥಾನದಲ್ಲಿ ಪೂಜೆ ದರ್ಶನ ಮಾಡಿ ಲಕ್ಷ್ಮಿ ದೇವಿಗೆ ನಮಸ್ಕರಿಸಿ ಲಕ್ಷ್ಮಿ ದೇವಿಯ ಹೆಸರಿನಲ್ಲಿ ಅರ್ಚನೆ ಮಾಡಿಸಿ ಈ ದೀಪವನ್ನು ಹಚ್ಚಿ . ಇದರಿಂದ ನಿಮಗೆ ಬರಬೇಕಾದಂಥ ಹಣ ಸುಸೂತ್ರವಾಗಿ ನಿಮಗೆ ಬರುತ್ತದೆ.
1,10, 19, 28, ನೇ ತಾರೀಕಿನಲ್ಲಿ ಹುಟ್ಟಿದವರಿಗೆ ಅದ್ಭುತವಾದ ದಿನ. ನಮಗೆ ದುಡ್ಡಿನ ಮೇಲೆ ಆಸೆ ಇರುವುದಿಲ್ಲ ಪೊಜಿಷನ್ ಮೇಲೆ ಆಸೆ ಇರುತ್ತದೆ. ಆ ಪೋಸಿಷನ್ ನಿಮಗೆ ಸಿಗುತ್ತದೆ . ಇಂದು ಪ್ರೀತಿ ಪ್ರೇಮ ಪ್ರಣಯಕ್ಕೆ ಕೊರತೆಯಿರುವುದಿಲ್ಲ.
2, 11, 20, 29 ನೇ ತಾರೀಕಿನಲ್ಲಿ ಹುಟ್ಟಿದವರಿಗೆ ಸ್ವಲ್ಪ ಖರ್ಚಾಗುತ್ತದೆ ಆಗುವ ಖರ್ಚೆಲ್ಲಾ ಒಳ್ಳೆಯದಕ್ಕೆ ಆಗುತ್ತದೆ.
3, 12, 21, 30 ನೇ ತಾರೀಖಿನಂದು ಹುಟ್ಟಿದವರಿಗೆ ಸಿಕ್ಕಾಪಟ್ಟೆ ಖರ್ಚು ಶಾಪಿಂಗ್ ಹೆಚ್ಚು ದುಡ್ಡನ್ನು ಇಟ್ಟುಕೊಂಡು ಹೊರಗಡೆ ಹೋಗಬೇಡಿ.
4, 13, 22, 31 ನೇ ತಾರೀಖಿನಂದು ಹುಟ್ಟಿದವರಿಗೆ ಖಂಡಿತ ಎಂದು ಯಾವುದಾದರೂ ಒಂದು ವಸ್ತುಗಳನ್ನು ಕೊಂಡುಕೊಂಡು ಜಾಗ ಮನೆ ಬಂಗಾರ ಯಾವುದಾದರು ಸರಿ ಕೊಂಡುಕೊಳ್ಳುತ್ತೀರ.
5, 14, 23, ನೇ ತಾರೀಖಿನಂದು ಹುಟ್ಟಿದವರಿಗೆ ಪ್ರೀತಿ ಪ್ರೇಮ ಮದುವೆ ಪ್ರಪೋಸಲ್ ಈ ರೀತಿಯ ಶುಭವಾದ ದಿನ.
6, 15, 24, ನೇ ತಾರೀಖಿನಂದು ಹುಟ್ಟಿದವರಿಗೆ ಗತ್ತಿನ ದಿನ. ನೀವೇ ಒಂದು ಲೆಜೆಂಡ್ ಪ್ರೀತಿ ಪ್ರೇಮ ಭೋಜನ ಸುತ್ತಾಟ ಫಂಕ್ಷನ್ ಎಲ್ಲವನ್ನೂ ನೋಡುವಂತಹ ಅದ್ಭುತವಾದ ದಿನ.
7, 16, 25 ನೇ ತಾರೀಖಿನಂದು ಹುಟ್ಟಿದವರಿಗೆ ತುಂಬಾ ದಿನಗಳ ನಂತರ ಒಳ್ಳೆಯ ಬಟ್ಟೆ ಮುಖದಲ್ಲಿ ಖುಷಿಯ ಛಾಯೆ ಇರುತ್ತದೆ. ವಿಧವಿಧವಾದ ಭಕ್ಷ ಭೋಜನಗಳನ್ನು ಸವಿಯುತ್ತೀರಿ. ಆತ್ಮೀಯರೊಡನೆ ಕಾಲ ಕಳೆಯುತ್ತೀರ
8, 17, 26 ನೇ ತಾರೀಖಿನಂದು ಹುಟ್ಟಿದವರ ಖರ್ಚು ವೆಚ್ಚಗಳನ್ನು ಸಂತ ನಿಭಾಯಿಸುತ್ತೀರಾ ಅದನ್ನು ಬಿಟ್ಟರೆ ಯಾವುದೇ ರೀತಿಯ ತೊಂದರೆಯಿಲ್ಲ ಆತ್ಮೀಯರೊಡನೆ ಒಡನಾಟ ಟೋನಿ ಅಟೋಮೊಬೈಲ್ ಕಾರು ಎಂಟರ್ಟೈನ್ಮೆಂಟ್ ರವಿ ಸೂರಿ ಐಟಮ್ಸ್ ಈ ವಿಭಾಗದಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೆ ಯಥೇಚ್ಚವಾದ ಲಾಭವನ್ನು ನೋಡುತ್ತೀರಿ.
9, 18, 27ನೇ ತಾರೀಖಿನಂದು ಹುಟ್ಟಿದವರಿಗೆ ಎರಡನೇ ಮದುವೆ ಬದುಕು ಎಂಬ ಪ್ರಯತ್ನದಲ್ಲಿರುವವರಿಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
All Rights reserved Namma Kannada Entertainment.