ಸಂಬರ್ಗಿ ವಿರುದ್ಧ ಕಾನೂನು ಹೋರಾಟಕ್ಕೆ ನಾನು ರೆಡಿ…ಚಕ್ರವರ್ತಿ ಚಂದ್ರಚೂಡ್ ಹೀಗೆ ಹೇಳಿದ್ದೇಕೆ…?

in News/ಮನರಂಜನೆ 245 views

ಕಳೆದ ಭಾನುವಾರ ಬಿಗ್​ ಬಾಸ್ ಸೀಸನ್ 8ಕ್ಕೆ ತೆರೆ ಬಿದ್ದಿದ್ದು ಮಂಜು ಪಾವಗಡ ವಿನ್ನರ್ ಆಗಿದ್ದಾರೆ. ಅರವಿಂದ್ ರನ್ನರ್ ಅಪ್ ಹಾಗೂ ದಿವ್ಯಾ ಉರುಡುಗ ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ. ಮಂಜು ಪಾವಗಡ ಅವರು ಸುಮಾರು 45 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ 53 ಲಕ್ಷ ರೂಪಾಯಿ ಬಹುಮಾನ ಕೂಡಾ ಗಳಿಸಿದ್ದಾರೆ. ಬಿಗ್​ ಬಾಸ್ ಮನೆಯಿಂದ ಈಗಾಗಲೇ ಎಲಿಮಿನೇಟ್ ಆದವರು ದೊಡ್ಮನೆಯಲ್ಲಿ ತಾವು ಕಳೆದ ಸಂತೋಷದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ಅಲ್ಲಿ ತಮಗೆ ಪರಿಚಯವಾದ ಹೊಸ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರೆ, ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಮಾತ್ರ ಹಾವು ಮುಂಗುಸಿಯಂತೆ ಜಗಳವಾಡುತ್ತಿದ್ದಾರೆ. ಪ್ರಶಾಂತ್ ಹಾಗೂ ಚಕ್ರವರ್ತಿ ಬಿಗ್​​ ಬಾಸ್ ಮನೆಗೆ ಹೋಗುವ ಮುನ್ನವೇ ಸ್ನೇಹಿತರಾಗಿದ್ದವರು. ಆದರೆ ಅಲ್ಲಿ ಕೆಲವೊಂದು ವಿಚಾರಗಳಿಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಇದು ಹೊರಗೆ ಬಂದ ನಂತರವೂ ಮುಂದುವರೆದಿದೆ.

Advertisement

Advertisement

ಬಿಗ್ ಬಾಸ್​​​ ಮನೆಯಲ್ಲಿ ಸ್ಪರ್ಧಿಗಳ ನಡುವೆ ನಾನಾ ಕಾರಣಗಳಿಗೆ ಜಗಳ ನಡೆಯುವುದು ಸಾಮಾನ್ಯ. ಆದರೆ ಈ ಜಗಳ, ಮನಸ್ತಾಪ ಬಹಳ ದಿನಗಳವರೆಗೂ ಉಳಿಯುವುದಿಲ್ಲ. ಆದರೆ ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರ್ಗಿ ನಡುವಿನ ಜಗಳ ಈಗ ಮತ್ತಷ್ಟು ಹೆಚ್ಚಾಗಿದೆ. ಮನೆಯೊಳಗೆ ಇದ್ದಾಗ ಪ್ರಿಯಾಂಕ ತಿಮ್ಮೇಶ್​​​ಗೆ ಅ’ಶ್ಲೀಲ ಸನ್ನೆ ತೋರಿಸಿದ್ದ ಚಕ್ರವರ್ತಿ ಚಂದ್ರಚೂಡ್ ಅವರ ವರ್ತನೆ, ಸ್ಪರ್ಧಿಗಳು ಮಾತ್ರವಲ್ಲ ರಾಜ್ಯದ ಜನರ ಕೋಪ ತರಿಸಿತ್ತು. ಸುದೀಪ್ ಕೂಡಾ ಈ ವಿಚಾರವಾಗಿ ಮಾತನಾಡಿ ನೀವು ಆ ರೀತಿ ಮಾಡಿತ್ತು ತಪ್ಪು ಎಂದು ಬುದ್ಧಿ ಹೇಳಿದ್ದರು. ಟಾಸ್ಕ್ ಸಮಯದಲ್ಲಿ ವೈಷ್ಣವಿ ಸೇರಿದಂತೆ ಇತರ ಸ್ಪರ್ಧಿಗಳೊಂದಿಗೆ ಕೂಡಾ ಪ್ರಶಾಂತ್ ಸಂಬರ್ಗಿ ಜಗಳ ಮಾಡಿಕೊಂಡಾಗ ಕೂಡಾ ಸುದೀಪ್ ಮಧ್ಯೆ ಬಂದಿದ್ದರು. ನಂತರ ಎಲ್ಲವೂ ಸರಿ ಹೋಯ್ತು. ಆದರೆ ಚಕ್ರವರ್ತಿ ಹಾಗೂ ಪ್ರಶಾಂತ್ ನಡುವಿನ ಮುನಿಸು ಮಾತ್ರ ಮುಗಿಯಲಿಲ್ಲ. ಈಗ ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್ ಸಂಬರ್ಗಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೂಡಾ ಮುಂದಾಗಿದ್ದಾರೆ ಎನ್ನಲಾಗಿದೆ.

Advertisement

ಈ ಬಗ್ಗೆ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್​, ”ನೀವು ಮಾಡಿದ ತಪ್ಪುಗಳು, ಕುತಂತ್ರಗಳು ಜನರ ಮುಂದಿರುವಾಗ ಅದೆಲ್ಲದಕ್ಕೂ ನಾನೇ ಕಾರಣ ಎಂಬ ನಿಮ್ಮ ಅವಿವೇಕದ ಮಾತುಗಳಿಂದ ಬೇಸರವಾಗುತ್ತಿದೆ. ಸುದೀಪ್ ಸರ್ ನನಗೆ ಅನುಮತಿ ನೀಡಿದರೆ ನಾನು ನಿಮ್ಮ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುತ್ತೇನೆ. ಜನರ ಪ್ರೀತಿ ಗಳಿಸಿದ್ದೇನೆ ಎಂದು ಹೇಳುವ ನೀವು ಆ ಪ್ರೀತಿ ಉಳಿಸಿಕೊಳ್ಳಲು ಬಹಳ ಪ್ರಯತ್ನಿಸಬೇಕು, ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸ್ಯಾಂಡಲ್​ವುಡ್​ ಡ್ರ’ಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಆಗ್ಗಾಗ್ಗೆ ನನಗೆ ನೀವು ಕರೆ ಮಾಡಿ ಸಲಹೆ ಕೇಳುತ್ತಿದ್ದಿರಿ, ಬಿಗ್ ಬಾಸ್ ಮನೆಯಲ್ಲಿ ಕೂಡಾ ನಾನು ಎದುರಿದ್ದಾಗ ನನ್ನನ್ನು ನಿಮ್ಮ ಮೆಂಟರ್ ಎಂದೆಲ್ಲಾ ಹೇಳಿಕೊಂಡಿದ್ದಿರಿ. ಆದರೆ ನನ್ನ ಬೆನ್ನ ಹಿಂದೆ ನೀವು ಮಾತನಾಡಿರುವುದನ್ನು ಕೇಳುತ್ತಿದ್ದರೆ ಬಹಳ ಬೇಸರವಾಗುತ್ತಿದೆ.

Advertisement

ನೀವು ಮಾಡಿರುವ ಅಕ್ಷಮ್ಯ ಅಪರಾಧಗಳನ್ನು ನನ್ನ ಮೇಲೆ ಹೊರಿಸುತ್ತಿರುವುದು ಸರಿಯಲ್ಲ. ನನ್ನಅಕ್ಷರಗಳನ್ನು ಮುಖವಾಡ ಎಂದಿದ್ದೀರಿ ಇನ್ನುಅದೇ ಅಕ್ಷರಗಳಿಂದ ನಿಮ್ಮ ಕುತಂತ್ರಗಳನ್ನು ಸಾಕ್ಷಿ ಸಮೇತ ಬಿಚ್ಚಿಡುವೆ ಇಂದಿನಿಂದ ಆರಂಭ” ಎಂದು ಫೇಸ್​ಬುಕ್​​​​ನಲ್ಲಿ ಪ್ರಶಾಂತ್ ಸಂಬರ್ಗಿಗೆ ಸಂದೇಶ ನೀಡಿದ್ದಾರೆ. ಚಕ್ರವರ್ತಿ ಅವರ ಮಾತಿಗೆ ಪ್ರಶಾಂತ್ ಸಂಬರ್ಗಿ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
-ರಕ್ಷಿತ ಕೆ.ಆರ್​​.ಸಾಗರ

Advertisement