ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಾನು ಸತ್ತು ಬದುಕಿದ್ದೆ ಎಂದು ಥ್ರಿಲ್ಲರ್ ಮಂಜು ಹೇಳಲು ಕಾರಣವೇನು.?.

in ಸಿನಿಮಾ 208 views

ಕನ್ನಡ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ನೋಡಿದರೆ ನಮಗೆ ನೆನಪಾಗುವುದು ಥ್ರಿಲ್ಲರ್ ಮಂಜು. ಇದುವರೆಗೂ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಿಗೆ ಫೈಟ್ ಕೊರಿಯೋಗ್ರಫಿ ಮಾಡಿರುವ ಥ್ರಿಲ್ಲರ್ ಮಂಜು ಬಹಳ ಕಷ್ಟಪಟ್ಟು ಮುಂದೆ ಬಂದವರು. ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಶಂಕರ್ ನಾಗ್, ರವಿಚಂದ್ರನ್ ಸೇರಿ ಈಗಿನ ನಾಯಕರ ಸಿನಿಮಾಗಳಿಗೂ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ ಮಂಜು. ಮಂಜು ವೈಯಕ್ತಿಕ ವಿಚಾರಕ್ಕೆ ಬರುವುದಾರೆ ಮಡದಿ, ಇಬ್ಬರು ಹೆಣ್ಣು ಮಕ್ಕಳು ಇರುವ ಸುಖಿ ಕುಟುಂಬ ಅವರದ್ದು. ಪತ್ನಿ, ಹೆಸರು ಗೀತಾ, ಮೊದಲ ಮಗಳು ಹೆಸರು ರಕ್ಷಿತ, ಎರಡನೇ ಪುತ್ರಿ ಹೆಸರು ರಜತ. ಮನೆಯಲ್ಲಿ ಪತ್ನಿ ಜೊತೆ ಜಗಳವಾಡುವುದು ಕೇವಲ ಒಂದೇ ವಿಚಾರಕ್ಕೆ. ನನ್ನ ಪತ್ನಿ ಬಹಳ ಕ್ಲೀನ್, ನಾವು ಮನೆಯನ್ನು ನೀಟ್ ಇಡದಿದ್ದರೆ ಪತ್ನಿ ನಮ್ಮನ್ನು ಬೈಯ್ಯುತ್ತಾರೆ. ಆಗ ನಮ್ಮ ನಡುವೆ ಜಗಳ ಆರಂಭವಾದರೂ ನಾನೇ ಕೊನೆಗೆ ಕಾಂಪ್ರಮೈಸ್ ಆಗುತ್ತೀನಿ ಎನ್ನುತ್ತಾರೆ ಮಂಜು. ಸಿನಿಮಾಗಳಲ್ಲಿ ವಿಲನ್ ಗುಂಪಿನ ನಡುವೆ ನೆಗೆಟಿವ್ ರೋಲ್ನಲ್ಲಿ ಫೈಟ್ ಮಾಡುವ ಮಂಜು, ನಿಜ ಜೀವನದಲ್ಲಿ ಬಹಳ ಮೃದು ಸ್ವಭಾವದವರು.

Advertisement

Advertisement

ಚೈತ್ರದ ಪ್ರೇಮಾಂಜಲಿ, ಕಿತ್ತೂರಿನ ಹುಲಿ, ಶ್, ಸಾಮ್ರಾಟ್, ಓಂ, ದುರ್ಗಿ, ಲಾಕಪ್ ಡೆತ್ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಮಂಜು ಕೈಯಲ್ಲಿ ಸದ್ಯಕ್ಕೆ 5-6 ಸಿನಿಮಾಗಳಿವೆ. ಹಗಲು ರಾತ್ರಿ ಎನ್ನದೆ, ಕಷ್ಟ ಪಟ್ಟು ದುಡಿಯುವ ಮಂಜು ಎಷ್ಟೋ ಬಾರಿ ಅಪಾಯದಲ್ಲಿ ಸಿಲುಕಿದ್ದರಂತೆ, ಸಾಕಷ್ಟು ಬಾರಿ ಅವರಿಗೆ ಪೆಟ್ಟು ಕೂಡಾ ಬಿದ್ದಿದೆಯಂತೆ. ಆದರೆ ಸಿನಿಮಾವೊಂದರ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಾನು ಸತ್ತು ಬದುಕಿದ್ದೆ ಎಂಬ ಆತಂಕದ ವಿಷಯವೊಂದನ್ನು ಥ್ರಿಲ್ಲರ್ ಮಂಜು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ಧಾರೆ. ಅಂಬರೀಶ್, ಅಂಬಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ದಿಗ್ವಿಜಯ’ ಚಿತ್ರದ ವೇಳೆ ಮಂಜು ಫೈಟರ್ ಆಗಿ ಕೆಲಸ ಮಾಡುತ್ತಿದ್ದರು. ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಮಂಜು ಸುಮಾರು 12 ಅಡಿ ಎತ್ತರದಿಂದ ಧುಮುಕಬೇಕಿತ್ತು. ಆದರೆ ಕೆಳಗೆ ಬಿದ್ದಾಗ ಆಯ ತಪ್ಪಿ ನೇರವಾಗಿ ಅವರ ಎದೆಗೆ ಏಟು ತಾಗಿದೆ. ಈ ವೇಳೆ ಮಂಜು ಅವರ ಉಸಿರಾಟ ನಿಂತಿದೆ. ಬದುಕುವುದೇ ಇಲ್ಲ ಎಂದುಕೊಂಡಿದ್ದ ಮಂಜು 5 ನಿಮಿಷದ ನಂತರ ಮತ್ತೆ ಉಸಿರಾಡಲಾರಂಭಿಸಿದ್ದಾರೆ. ‘ನಾನು ಆ ವೇಳೆ ಸತ್ತು ಬದುಕಿದ್ದೇನೆ, ಆ ದಿನ ಸಾವಿನ ಕದ ತಟ್ಟಿ ಬಂದಿದ್ದೆ. ನನಗೆ ಪ್ರಾಣ ಹೋಗುತ್ತಿರುವುದು ಅರಿವಾಗುತ್ತಿತ್ತು. ಆದರೆ ದೇವರ ದಯೆಯಿಂದ ಅಲ್ಲಿದ್ದವರೆಲ್ಲಾ ಪ್ರಥಮ ಚಿಕಿತ್ಸೆ ಮಾಡಿ ನನ್ನನ್ನು ಬದುಕಿಸಿಕೊಂಡರು’ ಎಂದು ಮಂಜು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

Advertisement

Advertisement

ಪ್ರತಿ ಆ್ಯಕ್ಷನ್ ಸನ್ನಿವೇಶ ಮಾಡುವಾಗಲೂ ನಾವು ಬಹಳ ಮುನ್ನೆಚರಿಕೆಯಿಂದ ಇರುತ್ತೇವೆ. ಆದರೆ ಕೆಲವೊಮ್ಮೆ ಅಚಾತುರ್ಯ ಸಂಭವಿಸುತ್ತದೆ. ಎಷ್ಟೋ ಫೈಟ್ ಮಾಸ್ಟರ್ಗಳು, ಫೈಟರ್ಗಳು ಚಿತ್ರೀಕರಣದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ. ಆ್ಯಕ್ಷನ್ ಎಂಬುದು ನೋಡಿದಷ್ಟು ಸುಲಭ ಅಲ್ಲ ಎನ್ನುತ್ತಾರೆ ಮಂಜು. ಹೀರೋಗಳಿಗೆ ಏನೂ ಅಪಾಯವಾಗದಂತೆ ಡ್ಯೂಪ್ ಆಗಿ ನಟಿಸುವ ಇಂತ ಫೈಟರ್, ಫೈಟ್ ಮಾಸ್ಟರ್ಗಳು ನಿಜವಾದ ಹೀರೋಗಳು ಎಂಬುದು ಸತ್ಯದ ಮಾತು.

All Rights Reserved Namma kannada Entertainment.

Advertisement
Share this on...