ಚೀನಾದ ‘ಟಿಕ್ ಟ್ಯಾಕ್’ಗೆ ಟಕ್ಕರ್ ಕೊಡುತ್ತಿವೆ ಈ ಆ್ಯಪ್’ಗಳು !

in ಕನ್ನಡ ಮಾಹಿತಿ 59 views

ಟಿಕ್ ಟಾಕ್ ಆಪ್ ಬಹಳ ಜನಪ್ರಿಯವಾಗಿದ್ದರೂ, ಭಾರತ ಮತ್ತು ಚೀನಾ ನಡುವಿನ ವಿವಾದದ ನಂತರ ಇದನ್ನು ನಿಷೇಧಿಸುವ ಬೇಡಿಕೆ ಹೆಚ್ಚುತ್ತಲಿದೆ. ಈ ಹಿನ್ನೆಲೆಯಲ್ಲಿ ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ಬಳಸದಂತೆ ಸೂಚಿಸಲಾಗಿದೆ. ಇತ್ತೀಚೆಗೆ, ಟಿಕ್ಟಾಕ್ ಸೇರಿದಂತೆ ಚೀನಾಕ್ಕೆ ಸಂಬಂಧಿಸಿದ 52 ಮೊಬೈಲ್ ಅಪ್ಲಿಕೇಶನ್ಗಳನ್ನು ನಿರ್ಬಂಧಿಸಲು ಅಥವಾ ಅದನ್ನು ಬಳಸುವುದನ್ನು ನಿಲ್ಲಿಸುವಂತೆ, ಜನರಿಗೆ ಸಲಹೆ ನೀಡುವಂತೆ ಭಾರತೀಯ ಗುಪ್ತಚರ ಸಂಸ್ಥೆಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದವು. ಆದ್ದರಿಂದ ಇಂದು ನಾವು ನಿಮಗೆ ಕೆಲವು ಮೊಬೈಲ್ ಅಪ್ಲಿಕೇಶನ್ಗಳ ಬಗ್ಗೆ ಹೇಳುತ್ತಿದ್ದು, ಇವು ಟಿಕ್ ಟಾಕ್’ಗೆ ಟಫ್ ಕಾಂಪೀಟೇಶನ್ ಕೊಟ್ಟಿವೆ. ಹಾಗಾದರೆ ಬನ್ನಿ ಆ ಮೊಬೈಲ್ ಅಪ್ಲಿಕೇಶನ್ಗಳ ಬಗ್ಗೆ ನೋಡೋಣ.

Advertisement

 

Advertisement


ಡಬ್ಸ್ಮ್ಯಾಶ್ ಅಪ್ಲಿಕೇಶನ್
ಡಬ್ಸ್ಮ್ಯಾಶ್ ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಅಪ್ಲಿಕೇಶನ್ನಲ್ಲಿ ವಿಭಿನ್ನ ಫಿಲ್ಟರ್ಗಳೊಂದಿಗೆ ವೀಡಿಯೊಗಳನ್ನು ಮಾಡುವ ಮೂಲಕ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳಬಹುದು. ಈ ಅಪ್ಲಿಕೇಶನ್ನಲ್ಲಿ ಲಿಪ್ ಸಿಂಕ್ ಮೂಲಕ ವೀಡಿಯೊಗಳನ್ನು ಮಾಡುವ ಸೌಲಭ್ಯವನ್ನು ಬಳಕೆದಾರರು ಪಡೆಯಬಹುದು. 100 ಮಿಲಿಯನ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಇಲ್ಲಿಯವರೆಗೆ ಡೌನ್ಲೋಡ್ ಮಾಡಿದ್ದಾರೆ.

Advertisement

 

Advertisement


ರೊಪೊಸೊ ಅಪ್ಲಿಕೇಶನ್
ರೊಪೊಸೊ ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಈ ಅಪ್ಲಿಕೇಶನ್ನಲ್ಲಿ ಟಿಕ್ಟಾಕ್ನಂತಹ ವೀಡಿಯೊಗಳು ಮತ್ತು ಆಡಿಯೊಗಳನ್ನು ಮಾಡುವ ಮೂಲಕ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೀಡಿಯೊಗಳು ಮತ್ತು ಆಡಿಯೊವನ್ನು ಹಂಚಿಕೊಳ್ಳಬಹುದು. ಈ ಅಪ್ಲಿಕೇಶನ್ ಅನ್ನು ಇದುವರೆಗೆ 5 ಮಿಲಿಯನ್ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದು 4.3 ಪಾಯಿಂಟ್ಗಳ ರೇಟಿಂಗ್ ಪಡೆದಿದೆ.

ಮಿಟ್ರಾನ್ ಅಪ್ಲಿಕೇಶನ್
ಭಾರತದಲ್ಲಿ ಟಿಕ್ ಟಾಕ್ ಅಪ್ಲಿಕೇಶನ್ ವಿರುದ್ಧ ಸ್ಪರ್ಧಿಸಲು ಮಿಟ್ರಾನ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಶನ್ ಅನ್ನು ಇದುವರೆಗೆ 50 ಲಕ್ಷ ಬಳಕೆದಾರರು ಡೌನ್ಲೋಡ್ ಮಾಡಿದ್ದಾರೆ. ಈ ಆ್ಯಪ್ ಅನ್ನು ರೂರ್ಕಿಯ ಐಐಟಿ ವಿದ್ಯಾರ್ಥಿ ಶಿವಂಕ್ ಅಗರ್ವಾಲ್ ಸಿದ್ಧಪಡಿಸಿದ್ದಾರೆ. ಮಿಟ್ರಾನ್ ಅನ್ನು ಟಿಕ್ಟಾಕ್’ನ ತದ್ರೂಪು ಎಂದೇ ನೀವು ಹೇಳಬಹುದು. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿನ ಟಾಪ್ ಫ್ರೀ ಚಾರ್ಟ್ನಲ್ಲಿ ಟಾಪ್ -10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಈ ಅಪ್ಲಿಕೇಶನ್ನಲ್ಲಿ ನೀವು ಟಿಕ್ಟಾಕ್ನ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯುವುದಿಲ್ಲ.

ಬೊಲೊ ಇಂಡ್ಯಾ ಅಪ್ಲಿಕೇಶನ್
ಬೊಲೊ ಇಂಡ್ಯಾ ಸ್ಥಳೀಯ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಚೀನೀ ಟಿಕ್ಟಾಕ್ ಅಪ್ಲಿಕೇಶನ್ಗೆ ಟಫ್ ಕಾಂಪಿಟೇಶನ್ ಕೊಡಲಿದೆ. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ 4.7 ಪಾಯಿಂಟ್ಗಳ ರೇಟಿಂಗ್ ಪಡೆದಿದೆ. ಈ ಅಪ್ಲಿಕೇಶನ್ನಲ್ಲಿ ಬಳಕೆದಾರರು ಇಂಗ್ಲಿಷ್ ಕಲಿಯುವುದು ಮತ್ತು ಅಡುಗೆಗೆ ಸಂಬಂಧಿಸಿದ ವಿಷಯವನ್ನು ಅಪ್ಲೋಡ್ ಮಾಡಬಹುದು. ಇದು ಇತರ ಬಳಕೆದಾರರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ.

Advertisement
Share this on...