ಭಾರತೀಯರ ರಕ್ಷಣೆಗೆ ಇರಾನ್ ಕಡೆ ಹೋಗುತ್ತೇವೆ ನಮ್ಮ ಬಲಿಷ್ಠ ಮೂರು ಭಾರತೀಯ ವಿಮಾನಗಳು. ಕಾರಣ ಏನು ಗೊತ್ತಾ

in News 25 views

ಇಡೀ ಪ್ರಪಂಚವನ್ನೇ ಭೂತದಂತೆ ಎದುರಿಸುತ್ತಿರುವ ಕೊರೊನ ವೈರಸ್ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಬಂದಿರುವ ವಿಚಾರ ನಮಗೂ ನಿಮಗೂ ಗೊತ್ತಿರುವುದೇ ಆದರೇ ಇರಾನ್ ದೇಶದಲ್ಲಿ ಕೂಡಾ ಈ ವೈರಸ್ ಬಂದಿರುವ ಕಾರಣದಿಂದಾಗಿ ಇರಾನ್ ದೇಶದಲ್ಲಿರುವ ನಮ್ಮ ಭಾರತೀಯರನ್ನು ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ನಮ್ಮ ದೇಶದ ಬಲಿಷ್ಠ ಮೂರು ವಿಮಾನಗಳು ಇರಾನ್ ದೇಶಕ್ಕೆ ಹೊರಡಲಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ತಿಳಿಸಿದೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ಭಾರತ ವಾಯು ಪಡೆಗೆ ಸೇರಿದ C-17 ಗ್ಲೋಬ್ ಮಾಸ್ಟರ್ ವಿಮಾನವನ್ನು ಇರಾನ್ ದೇಶಕ್ಕೆ ಕಳುಹಿಸಲಾಗಿತ್ತು ಮತ್ತು ಈ ವಿಮಾನದ ಮೂಲಕ ಕೂಡಾ ನಮ್ಮ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆದುಕೊಂಡು ಬಂದಿದ್ದರು.

Advertisement

Advertisement

ನಮ್ಮ ಭಾರತದ ಈ ಸೇನಾ ವಿಮಾನವು 31 ಜನ ಭಾರತೀಯ ಮಹಿಳೆಯರು ಮತ್ತು 25 ಜನ ಪುರುಷರನ್ನು ಇರಾನ್ ದೇಶದಿಂದ ಕರೆದುಕೊಂಡು ಬಂದಿತು ಈಗ ಇರಾನ್ ದೇಶದಲ್ಲಿ ಸಿಲುಕಿಕೊಂಡಿರುವ ಅಂತಹ ಭಾರತೀಯರನ್ನು ವಾಪಸ್ ಕರೆತರಲು ಮತ್ತೆ ಮೂರು ವಿಮಾನಗಳನ್ನು ಕಳಿಸಿಕೊಟ್ಟಿದೆ ನಮ್ಮ ಭಾರತೀಯ ವಾಯುಸೇನೆ ಎನ್ನಲಾಗಿದ್ದು ವಿಶೇಷವಾಗಿ ಇರಾನ್ ದೇಶದಲ್ಲಿ ಇರುವ ಭಾರತೀಯ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿ ಎಂದು ನಮ್ಮ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಟ್ಟು ಸೂಚನೆಗಳನ್ನು ಕೂಡಾ ಕೊಟ್ಟಿದೆ ಎನ್ನಲಾಗಿದೆ ‌ಇದೇ ವಿಚಾರವಾಗಿ ಇಂದು ನಮ್ಮ ಲೋಕಸಭೆಯಲ್ಲಿ ಕೂಡಾ ವಿಶೇಷ ಚರ್ಚೆ ಕೂಡ ನಡೆಯಿತು.

Advertisement

Advertisement

ನಮ್ಮ ಭಾರತ ದೇಶದ ವಿದೇಶಾಂಗ ಸಚಿವ ಜೈ ಶಂಕರ್ ಅವರು ಮಾತನಾಡುತ್ತಾ ಇರಾನ್ ದೇಶದಲ್ಲಿ ಇರುವ ನಮ್ಮ ಭಾರತೀಯ ವಿದ್ಯಾರ್ಥಿಗಳ ಪೋಷಕರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು ಅವರನ್ನು ವಾಪಸ್ ಕರೆತರಲು ಕೂಡಾ ಹೇಳಿದ್ದೇವೆ ಎಂದಿದ್ದಾರೆ ಒಟ್ಟಾರೆ ಕೊರೊನಾ ಎಂಬ ಭೂತದಿಂದ ಜನರು ತತ್ತರಿಸಿ ಹೋಗಿದ್ದು ಮಾತ್ರ ನಿಜ ಈ ಕೊರೊನ ವೈರಸ್ ನಿಯಂತ್ರಣಕ್ಕೆ ಬೇಕಾಗಿರುವ ಮುನ್ನೆಚ್ಚರಿಕೆಯ ಕ್ರಮಗಳ ಕಡೆ ವಿಶೇಷ ಗಮನವನ್ನು ಕೊಟ್ಟಿದ್ದೇವೆ ಎಂದು ನಮ್ಮ ಕೇಂದ್ರ ಸರ್ಕಾರ ತಿಳಿಸಿದೆ.

Advertisement
Share this on...