ತಮ್ಮ ಪತ್ರಿಕೆಯ ಹೆಸರನ್ನೇ ಸಿನಿಮಾಗೆ ಇಟ್ಟ ಇಂದ್ರಜಿತ್ ಲಂಕೇಶ್ ..!

in ಕನ್ನಡ ಮಾಹಿತಿ/ಮನರಂಜನೆ/ಸಿನಿಮಾ 107 views

ಇಂದ್ರಜಿತ್ ಲಂಕೇಶ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ಅವರು ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಲಂಕೇಶ್ ಪತ್ರಿಕೆ ಸ್ಥಾಪಕ, ಸಂಪಾದಕರಾಗಿದ್ದ ಪಿ.ಲಂಕೇಶ್ ಅವರ ಪುತ್ರ. ಇಂದ್ರಜಿತ್ ಲಂಕೇಶ್ ಅವರ ಸಹೋದರಿಯರು ಗೌರಿ ಲಂಕೇಶ್ ಹಾಗೂ ಕವಿತ ಲಂಕೇಶ್. ಇಂದ್ರಜಿತ್ ಲಂಕೇಶ್ ಅವರು 1976 ರಲ್ಲಿ ಶಿವಮೊಗ್ಗದಲ್ಲಿ ಜನಿಸುತ್ತಾರೆ. ಆದರೆ ಅವರು ಬೆಳೆದದ್ದು ಬೆಂಗಳೂರಿನಲ್ಲಿ. ಅವರ ಶೈಕ್ಷಣಿಕ ಜೀವನ ಸಹ ಬೆಂಗಳೂರಿನಲ್ಲೇ ನಡೆಯಿತು. ಪ್ರಸ್ತುತ ಇಂದ್ರಜಿತ್ ಲಂಕೇಶ್ ಅವರಿಗೆ ಈಗ 44 ವರ್ಷ. ನಟರಾಗಿ, ನಿರ್ದೇಶಕರಾಗಿ ಹಾಗೂ ಪತ್ರಕರ್ತರಾಗಿ ಇಂದ್ರಜಿತ್ ಲಂಕೇಶ್ ಅವರು ಗುರುತಿಸಿಕೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ಅವರಿಗೆ ಬಾಲ್ಯದಲ್ಲಿ ಕ್ರಿಕೆಟ್ ಮೇಲೆ ಬಹಳ ಆಸಕ್ತಿ ಇತ್ತು. ಇಂದ್ರಜಿತ್ ಲಂಕೇಶ್ ಅವರು ಕರ್ನಾಟಕ ರಾಜ್ಯ ಜೂನಿಯರ್ ಲೆವೆಲ್ ನಲ್ಲಿ ಹಾಗೂ ದಕ್ಷಿಣ ವಲಯದ ಜೂನಿಯರ್ ಲೆವೆಲ್ ನಲ್ಲಿ ಕ್ರಿಕೆಟ್ ಆಡಿದ್ದಾರೆ.

Advertisement

Advertisement

ಇಂದ್ರಜಿತ್ ಲಂಕೇಶ್ ಅವರು 1993 ರಲ್ಲಿ ತಮ್ಮ ತಂದೆಯವರ ಲಂಕೇಶ್ ಪತ್ರಿಕೆಯಲ್ಲಿ ಮೊದಲು ಸಬ್ ಎಡಿಟರ್ ಆಗಿ ಕೆಲ ಕಾಲ ಕೆಲಸ ಮಾಡುತ್ತಿದ್ದರು. ನಂತರದಲ್ಲಿ 2001 ರ ಹೊತ್ತಿಗೆ ಇಂದ್ರಜಿತ್ ಲಂಕೇಶ್ ಅವರು ಕನ್ನಡ ಸಿನಿಮಾ ರಂಗಕ್ಕೂ ಧುಮುಕಿದರು. 2001 ರಲ್ಲಿ ಅನಿರುದ್ಧ್, ರೇಖಾ, ಛಾಯಾಸಿಂಗ್ ಅವರ ಅಭಿನಯದ ತುಂಟಾಟ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡರು. ನಂತರ ತಮ್ಮ ಪತ್ರಿಕೆಯ ಹೆಸರನ್ನೇ ಸಿನಿಮಾಗೆ ಇಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಾಯಕತ್ವದಲ್ಲಿನ ಲಂಕೇಶ್ ಪತ್ರಿಕೆ ಎಂಬ ಸಿನಿಮಾವನ್ನು ಇಂದ್ರಜಿತ್ ಲಂಕೇಶ್ ಅವರು ನಿರ್ದೇಶಿಸಿದರು.

Advertisement

ಇದಾದ ನಂತರ ಇಂದ್ರಜಿತ್ ಲಂಕೇಶ್ ಅವರು ನಟ ಧ್ಯಾನ್ ಅವರ ಅಭಿನಯದ ಒಂದು ಸುಂದರ ಪ್ರೇಮ ಕಥೆಯುಳ್ಳ ಚಿತ್ರ ಮೊನಾಲಿಸ ಎಂಬ ಸಿನಿಮಾವನ್ನು ನಿರ್ದೇಶಿಸಿದರು. ಮೊನಾಲಿಸ ಸಿನಿಮಾಗೆ ಉತ್ತಮ ನಿರ್ದೇಶಕ ಮತ್ತು ಉತ್ತಮ ಸಿನಿಮಾ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ಇಂದ್ರಜಿತ್ ಲಂಕೇಶ್ ಅವರಿಗೆ ದೊರಕಿದೆ. ಇದಾದ ನಂತರ 2006 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಐಶ್ವರ್ಯ ಸಿನಿಮಾವನ್ನು ನಿರ್ದೇಶಿಸಿದರು. ಈ ಸಿನಿಮಾಗೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಅವರು ನಾಯಕಿಯಾಗಿದ್ದರು. ಐಶ್ವರ್ಯ ಸಿನಿಮಾಗೆ ಇಂದ್ರಜಿತ್ ಲಂಕೇಶ್ ಅವರಿಗೆ ಉತ್ತಮ ನಿರ್ದೇಶಕ ಎಂದು ಫಿಲಂ ಫೇರ್ ಪ್ರಶಸ್ತಿ ಸಹ ಇವರಿಗೆ ದೊರೆತಿದೆ.

Advertisement

2012 ರಲ್ಲಿ ದಿಗಂತ್ ಅವರ ಅಭಿನಯದ ದೇವ್ s/o ಮುದ್ದೇಗೌಡ ಸಿನಿಮಾವನ್ನು ನಿರ್ದೇಶಿಸಿದರು. ಇದಲ್ಲದೆ ಇನ್ನೂ ಕೆಲವು ಸಿನಿಮಾಗಳನ್ನು ಇಂದ್ರಜಿತ್ ಲಂಕೇಶ್ ಅವರು ನಿರ್ದೇಶಿಸಿದ್ದಾರೆ. ಇನ್ನು ಇವರು ಕಡೆಯದಾಗಿ 2015 ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಭೂಮಿ ಚಾವ್ಲಾ ಅವರ ಅಭಿನಯದ ಲವ್ ಯು ಆಲಿಯಾ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದರು. ಇನ್ನು ಇವರ ಪತ್ನಿಯ ಹೆಸರು ಅರ್ಪಿತಾ ಲಂಕೇಶ್. ಇಂದ್ರಜಿತ್ ಲಂಕೇಶ್ ಅವರಿಗೆ ಇಬ್ಬರು ಮಕ್ಕಳು. ಸಮರ್ ಜಿತ್ ಲಂಕೇಶ್ ಹಾಗೂ ಸಮಯ ಜಿತ್ ಲಂಕೇಶ್. ಪ್ರಸ್ತುತ ಇಂದ್ರಜಿತ್ ಲಂಕೇಶ್ ಅವರು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾಮಿಡಿ ಶೋ ಮಜಾ ಟಾಕೀಸ್ ನಲ್ಲಿ ಸೆಲೆಬ್ರಿಟಿ ಜಡ್ಜ್ ಆಗಿ ಭಾಗವಹಿಸಿ ಪ್ರೇಕ್ಷಕರಿಗೆ ತಮ್ಮ ಹಾಸ್ಯದ ಮಾತುಗಳ ಮೂಲಕ ಇಂದ್ರಜಿತ್ ಲಂಕೇಶ್ ಅವರು ರಂಜಿಸುತ್ತಿದ್ದಾರೆ.

– ಸುಷ್ಮಿತಾ

Advertisement
Share this on...