ವೈರಲ್ ಆಗುತ್ತಿದೆ ಇರ್ಫಾನ್ ಖಾನ್ ಪುತ್ರ ಷೇರ್ ಮಾಡಿರುವ ಈ ವಿಡಿಯೋ

in ಮನರಂಜನೆ 44 views

ಇರ್ಫಾನ್ ಖಾನ್, ಬಾಲಿವುಡ್ ನಟರು ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಬುಧವಾರ ಬೆಳಗ್ಗೆ ಅವರು ಇನ್ನಿಲ್ಲ ಎಂದು ಸುದ್ದಿ ತಿಳಿದು ಅಭಿಮಾನಿಗಳಿಗೆ ನಿಜಕ್ಕೂ ನಂಬಲಾಗಲಿಲ್ಲ. 2 ವರ್ಷಗಳಿಂದ ನ್ಯೂರೋಎಂಡೋಕ್ರೈನ್ ಟ್ಯೂಮರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಇರ್ಫಾನ್ ಗುಣಮುಖರಾಗುತ್ತಿದ್ದಾರೆ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದರು. ಆದರೆ 53 ವರ್ಷದ ಇರ್ಫಾನ್ ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

Advertisement

 

Advertisement

Advertisement

 

Advertisement

ಇರ್ಫಾನ್ ಅವರು ಕಣ್ಮರೆಯಾಗುತ್ತಿದ್ದಂತೆ ಅವರ ಹಳೆಯ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದೆ. ಇದೀಗ ಅವರ ಪುತ್ರ ಬಾಬ್ಬಿ ಖಾನ್ ಕೂಡಾ ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಅಪ್ಪನ ಹಳೆಯ ವಿಡಿಯೋವೊಂದನ್ನು ಷೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇರ್ಫಾನ್ ಖಾನ್ ಪಾನಿಪೂರಿ ತಿನ್ನುತ್ತಾ ಎಂಜಾಯ್ ಮಾಡುತ್ತಿದ್ದಾರೆ. ‘ಶೂಟಿಂಗ್​​​ಗಾಗಿ ಡಯಟ್​​​ನಲ್ಲಿದ್ದ ಅಪ್ಪ ಶೂಟಿಂಗ್ ಮುಗಿದ ಕೂಡಲೇ ಪಾನಿಪೂರಿ ತಿನ್ನುತ್ತಿದ್ದಾರೆ’ ಎಂದು ಬಾಬ್ಬಿ ಈ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಇರ್ಫಾನ್ ನಮ್ಮೊಂದಿಗೆ ಇಲ್ಲವಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

 

ರಾಜಸ್ಥಾನದಲ್ಲಿ ಜನಿಸಿದ ಇರ್ಫಾನ್ ಖಾನ್ ಚಿಕ್ಕಂದಿನಿಂದ ಬಹಳ ಕಷ್ಟಪಟ್ಟು ಮುಂದೆ ಬಂದವರು. ದೆಹಲಿಯ ಎನ್​​ಎಸ್​ಡಿಯಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದವರು. ಇವರಿಗೆ ಪಾಠ ಮಾಡಿದ್ದು ಮೈಸೂರಿನ ರಂಗಕರ್ಮಿ ಪ್ರಸನ್ನ ಅವರು. ಇರ್ಫಾನ್ ಖಾನ್ ಎಷ್ಟು ಸರಳ ಹಾಗೂ ಶ್ರೇಷ್ಠ ವ್ಯಕ್ತಿ ಎಂದರೆ, ಪಾಠ ಕಲಿಸಿದ ಗುರುಗಳ ಮೇಲೆ ಅವರಿಗೆ ಅಪಾರ ಭಕ್ತಿ ಇತ್ತು. ಬದನವಾಳು ಗ್ರಾಮದಲ್ಲಿ ನಡೆದ ಕೈ ಮಗ್ಗ ಉಳಿವು ಸುಸ್ಥಿರ ಅಭಿವೃದ್ಧಿ ಹೋರಾಟದಲ್ಲಿ ಇರ್ಫಾನ್ ಕೂಡಾ ಭಾಗಿಯಾಗಿದ್ದರು. ಗಾಂಧೀಜಿ ಅವರು ತಂಗಿದ್ದ ಪಾಳು ಬಿದ್ದ ಮನೆಯಲ್ಲೇ ಇರ್ಫಾನ್ ಖಾನ್ ಪತ್ನಿ ಸಮೇತ ಉಳಿದುಕೊಂಡಿದ್ದರು. ಪ್ರಸನ್ನ ಅವರು ನೀಡುತ್ತಿದ್ದ ಸರಳವಾದ ಆಹಾರವನ್ನೇ ಸೇವಿಸುತ್ತಿದ್ದರು.

 

 

ಕಳೆದ ಶನಿವಾರವಷ್ಟೇ ಇರ್ಫಾನ್ ತಾಯಿ ರಾಜಸ್ಥಾನದಲ್ಲಿ ನಿಧನರಾಗಿದ್ದರು. ಮುಂಬೈನಲ್ಲಿ ನೆಲೆಸಿದ್ದ ಇರ್ಫಾನ್ ಖಾನ್ ಅಮ್ಮನ ಅಂತ್ಯಕ್ರಿಯೆಗೆ ಹೋಗಲಾಗದೆ ಬಹಳ ವ್ಯಥೆ ಪಟ್ಟಿದ್ದರು. ಮಂಗಳವಾರ ಸಂಜೆ ಆರೋಗ್ಯ ಏರುಪೇರಾದ್ದರಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಅವರು ಇಹಲೋಕ ತ್ಯಜಿಸಿದರು.

Advertisement
Share this on...