ಕೊನೆಯ ಬಾರಿ ಅಮ್ಮನ ಮುಖ ನೋಡಲಾಗಲಿಲ್ಲ… ಸಲಾಂ ಬಾಂಬೆ’ ಚಿತ್ರದ ನಟ…

in ಸಿನಿಮಾ 26 views

ಕೊರೊನಾದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಮನೆಯಲ್ಲೇ ಇದ್ದರೂ, ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವಶ್ಯಕತೆ ಇದ್ದಾಗ ಹೊರಗೆ ಹೋಗುವಂತಿಲ್ಲ. ಪ್ರೀತಿ ಪಾತ್ರರನ್ನೂ ನೋಡುವಂತಿಲ್ಲ. ಮದುವೆ, ಮುಂಜಿ ಮಾಡುವಂತಿಲ್ಲ, ಮಾಡಿದರೂ 20 ಮಂದಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಇನ್ನು ಯಾರು ಸತ್ತರೂ ಹೋಗುವಂತಿಲ್ಲ. ಒಂದು ವೇಳೆ ಆ ಕಷ್ಟದ ಪರಿಸ್ಥಿತಿಯಲ್ಲಿ ದೂರ ಇದ್ದರೆ ಮುಗಿಯಿತು. ಕೊನೆಯ ಬಾರಿ ಅವರ ಮುಖ ಕೂಡಾ ನೋಡಲು ಸಾಧ್ಯವಿಲ್ಲ.ಬಾಲಿವುಡ್​​ ನಟ ಇರ್ಫಾನ್​ ಖಾನ್ ಅವರ ತಾಯಿ ಸಯಿದಾ ಬೇಗಂ ವಯೋಸಹಜ ಕಾಯಿಲೆಯಿಂದ ಮೊನ್ನೆ ರಾಜಸ್ಥಾನದ ಜೈಪುರದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.ಆದರೆ ಇರ್ಫಾನ್ ಖಾನ್ ಮುಂಬೈನಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ನೆಲೆಸಿದ್ದಾರೆ. ಲಾಕ್​ಡೌನ್ ಇರುವುದರಿಂದ ಇರ್ಫಾನ್ ಖಾನ್ ರಾಜಸ್ಥಾನಕ್ಕೆ ತೆರಳಿ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಸಾಧ್ಯವಾಗಲಿಲ್ಲ. ಕೆಲವೇ ಮಂದಿ ಮಾತ್ರ ಸಯಿದಾ ಬೇಗಂ ಅಂತಿಮ ದರ್ಶನ ಪಡೆದಿದ್ದಾರೆ.

Advertisement

 

Advertisement

 

Advertisement

Advertisement

ಅದೇ ದಿನ ಸಂಜೆ ಜೈಪುರದ ಚುಂಗಿ ನಾಕಾ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಆದರೆ ಇರ್ಫಾನ್ ಮಾತ್ರ ವಿಡಿಯೋ ಕಾಲ್ ಮೂಲಕವೇ ಅಮ್ಮನ ಅಂತಿಮ ದರ್ಶನ ಪಡೆದಿದ್ದಾರೆ. ಕೊನೆಯದಾಗಿ ತಾಯಿ ಮುಖ ನೋಡಲಾಗಲಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸ್ನೇಹಿತರು ಇರ್ಫಾನ್​​ಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.ಬೇಸರದ ವಿಚಾರವೆಂದರೆ ಇರ್ಫಾನ್ ಖಾನ್ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ತಮಗೆ ಈ ಕಾಯಿಲೆ ಇರುವ ವಿಚಾರವನ್ನು 2 ವರ್ಷಗಳ ಹಿಂದೆ ಇರ್ಫಾನ್ ಖಾನ್ ಸೋಷಿಯಲ್ ಮೀಡಿಯಾ ಮುಖಾಂತರ ಅಭಿಮಾನಿಗಳ ಬಳಿ ಹೇಳಿಕೊಂಡಿದ್ದರು. ವಿಷಯ ತಿಳಿದ ಅಭಿಮಾನಿಗಳು, ಹಾಗೂ ಬಾಲಿವುಡ್​​ ಮಂದಿ ಬಹಳ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಅವರು ಶೀಘ್ರ ಗುಣಮುಖವಾಗಲೆಂದು ಪ್ರಾರ್ಥಿಸಿದ್ದರು. ಈ ಕಾಯಿಲೆಗಾಗಿ ಅವರು ವಿದೇಶಕ್ಕೆ ತೆರಳಿ ಟ್ರೀಟ್​ಮೆಂಟ್ ಪಡೆದು ಬಂದಿದ್ದು ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ತಾಯಿ ನಿಧನ ಇರ್ಫಾನ್ ಖಾನ್ ಅವರಿಗೆ ಮತ್ತಷ್ಟು ದು:ಖ ನೀಡಿದೆ.

 

1988 ರಲ್ಲಿ ‘ಸಲಾಂ ಬಾಂಬೆ’ ಚಿತ್ರದ ಮೂಲಕ ಬಾಲಿವುಡ್​​​​​ ಕರಿಯರ್ ಆರಂಭಿಸಿದ ಇರ್ಫಾನ್ ಖಾನ್ , ಇದುವರೆಗೂ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿರುವ ‘ಅಂಗ್ರೇಜಿ ಮೀಡಿಯಂ’ ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಚಿತ್ರದಲ್ಲಿ ಕರೀನಾ ಕಪೂರ್, ರಾಧಿಕಾ ಮದನ್, ಡಿಂಪಲ್ ಕಪಾಡಿಯಾ ಹಾಗೂ ಇನ್ನಿತರರು ನಟಿಸಿದ್ದಾರೆ. ಮಾರ್ಚ್ 20 ರಂದು ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಲಾಕ್​​​ಡೌನ್ ಕಾರಣ ಮುಂದಕ್ಕೆ ಹೋಗಿದೆ.

Advertisement
Share this on...