ನಭಾ ನಟೇಶ್ ಬಗ್ಗೆ ಕೇಳಿ ಬಂದ ಈ ಸುದ್ದಿ ನಿಜಾನಾ ?

in ಸಿನಿಮಾ 28 views

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಟಾಲಿವುಡ್ ಚಿತ್ರ ‘ಇಸ್ಮಾರ್ಟ್ ಶಂಕರ್’ ನಂತರ ಸ್ಯಾಂಡಲ್’ವುಡ್ ಬ್ಯೂಟಿ ನಭಾ ನಟೇಶ್ ಲಕ್ಕು ಬದಲಾಯಿತು. ಆ ಚಿತ್ರದಲ್ಲಿನ ಬೋಲ್ಡ್ ಮತ್ತು ಗ್ಲಾಮರ್ ದೃಶ್ಯಗಳು ಪಡ್ಡೆ ಹೈಕಳಿಗೆ ಸಾಕಷ್ಟು ಮೋಡಿ ಮಾಡಿತು. ಸೌಂದರ್ಯ ಮತ್ತು ಪ್ರತಿಭೆ ಎರಡೂ ಇರುವುದರಿಂದ ನಭಾ ನಟೇಶ್ ಟಾಪ್ ನಾಯಕಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹಲವರು ಭಾವಿಸಿದ್ದರು. ಆದರೆ ಈಗ ಕೇಳಿಬರುತ್ತಿರುವ ವಿಚಾರವೇ ಬೇರೆ. ಹೌದು, ಬಲ್ಲ ಮೂಲಗಳ ಪ್ರಕಾರ ನಭಾ ನಟೇಶ್ ಹಣದ ಹಿಂದೆ ಬಿದ್ದು, ಚಿತ್ರಗಳ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ಚಿತ್ರಗಳನ್ನು ಆಯ್ಕೆ ಮಾಡುವಾಗ ಸ್ಕ್ರಿಪ್ಟ್ ಮತ್ತು ಆಕೆಯ ಪಾತ್ರವನ್ನು ನೋಡುತ್ತಿಲ್ಲ ಎಂದು ವರದಿಯಾಗಿದೆ . ಕೇವಲ ಸಂಭಾವನೆಯ ಮೇಲೆ ಮಾತ್ರ ಕೇಂದ್ರೀಕರಿಸುತ್ತಿದ್ದಾರೆ. ಅದಕ್ಕಾಗಿಯೇ ಇದುವರೆಗೂ ನಭಾಗೆ ಸ್ಟಾರ್ ಹೀರೋಗಳ ಜೊತೆ ಜೋಡಿಯಾಗಿ ನಟಿಸುವ ಅವಕಾಶ ಸಿಗುತ್ತಿಲ್ಲ.
ನಭಾ ಕೈಯ್ಯಲ್ಲಿ ಈಗ ಸಾಯಿ ತೇಜ್ ಅವರ ‘ಸೋಲೋ ಬದುಕೇ ಸೋ ಬೆಟರ್’ ಚಿತ್ರವಿದೆ. ಇದರಲ್ಲಿ ಆಕೆಯದು ಮುಖ್ಯ ಪಾತ್ರ ಎಂಬುದು ಸುದ್ದಿ. ಈ ಹಿನ್ನೆಲೆಯಲ್ಲಿ ನಭಾ ತನ್ನ ಪಾತ್ರಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳುವ ಸಮಯ ಇದು ಎನ್ನುತ್ತಿದ್ದಾರೆ ಸಿನಿ ಪ್ರಿಯರು.

Advertisement

 

Advertisement


2015 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ `ವಜ್ರಕಾಯ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ನಭಾ ತಮ್ಮ ನಟನೆಯಿಂದ ವಿಮರ್ಶಕ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು. ನಂತರ `ಲೀ’,`ಸಾಹೇಬ’ ಚಿತ್ರಗಳಲ್ಲಿ ನಟಿಸಿ, 2018 ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು. ತೆಲುಗಿನ ‘ನನ್ನು ದೊಚುಕುಂಡವಟೆ’ ಮತ್ತು ‘ಅಧುಗೊ’ ಸಿನಿಮಾಗಳು ದೊಡ್ಡ ಯಶಸ್ಸು ತಂದುಕೊಡಲಿಲ್ಲ. ಆದರೆ, ಕಳೆದ ವರ್ಷ ತೆರೆಕಂಡ ಅವರ ನಟನೆಯ ‘ಇಸ್ಮಾರ್ಟ್ ಶಂಕರ್’ ಚಿತ್ರ ದೊಡ್ಡ ದಾಖಲೆಯನ್ನೇ ಬರೆಯಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ರಾಮ್ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಈ ಸಿನಿಮಾ ಯಾವ ಮಟ್ಟದ ಬ್ರೇಕ್ ನೀಡಿತೋ, ಅದೇ ಥರ ನಭಾ ಪಾಲಿಗೂ ಅದೃಷ್ಟದ ಸಿನಿಮಾವಾಯ್ತು.

Advertisement

 

Advertisement

ಇದೀಗ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಭಾ ಬ್ಯುಸಿ. ಡಿಸ್ಕೋ ರಾಜ’, ‘ಸೋಲೋ ಬದುಕೇ ಸೋ ಬೆಟರ್’ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ್ ಜೊತೆಗಿನ ಸಿನಿಮಾಗಳು ನಭಾ ಮುಂಬರುವ ಚಿತ್ರಗಳು. ಇದೆಲ್ಲದರ ಜೊತೆಗೆ ಇನ್ನಷ್ಟು ಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಡೌಟ್ ಇಲ್ಲ.

Advertisement
Share this on...