ಭಾರತದ ಮೊದಲ ಪುರುಷ ಬೆಲ್ಲಿ ಡ್ಯಾನ್ಸರ್​ ಇವರು…ಈತನ ಕಣ್ಣೀರಿನ ಕಥೆಯನ್ನು ನೀವು ತಿಳಿಯಲೇಬೇಕು…!

in Uncategorized/ಮನರಂಜನೆ 90 views

Picture courtsey :  SAGAR HASIJA PHOTOGRAPHY

Advertisement

ನೃತ್ಯ ಎಂದರೆ ನೆನಪಾಗುವುದು ಹೆಣ್ಣು, ಇದಕ್ಕೆಇಂತ ಕಾರಣ ಅಂತ ಏನಿಲ್ಲ, ಆದರೆ ಮೈ,ಕೈ ಕುಣಿಸಿ, ಸೊಂಟ ಬಳುಕಿಸಿ ಬಳ್ಳಿಯ ಮಿಂಚಿನಂತೆ ಡ್ಯಾನ್ಸ್ ಮಾಡುವುದು ಎಂಬ ವಾಕ್ಯ ಕೇಳಿದೊಡನೆ ಕಣ್ಣ ಮುಂದೆ ಬರುವುದೇ ಹೆಣ್ಣು. ಅದರಲ್ಲೂ ಬೆಲ್ಲಿ ಡ್ಯಾನ್ಸ್​ ಎಂದರಂತೂ ನಡುವನ್ನು ಬಳುಕಿಸುವುದೇ ದೊಡ್ಡ ಟಾಸ್ಕ್​​​​​​. ಆದರೆ ಈ ಬೆಲ್ಲಿ ಡ್ಯಾನ್ಸ್ ಹುಡುಗರು ಮಾಡಿದರೆ ಹೇಗೆ…? ಇಶಾನ್ ಹಿಲಾಲ್, ಭಾರತದ ಮೊದಲ ಪುರುಷ ಬೆಲ್ಲಿ ಡ್ಯಾನ್ಸರ್. ಇವರು ಡ್ಯಾನ್ಸ್ ಮಾಡುತ್ತಿದ್ರೆ ಯಾವ ಹುಡುಗಿಗೂ ಕಡಿಮೆ ಇಲ್ಲ ಎನ್ನಿಸುತ್ತದೆ. ಇವರು ಸೊಂಟ ಬಳುಕಿಸಿ ಕುಣಿಯುತ್ತಿದ್ರೆ ಇದು ಹೇಗೆ ಸಾಧ್ಯವಾಯ್ತು ಎಂದು ಆಶ್ಚರ್ಯ ಆಗೋದು ಗ್ಯಾರಂಟಿ. ಆದರೆ ಸತತ ಅಭ್ಯಾಸದಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಬಿಡಿ. ಭಾರತದ ಖ್ಯಾತ ಡ್ಯಾನ್ಸರ್​​​​​​​ಗಳಲ್ಲಿ ಇಶಾನ್ ಕೂಡಾ ಒಬ್ಬರು. ಆದರೆ ಇಶಾನ್ ಈ ಸ್ಥಾನಕ್ಕೆ ಬರಲು ಶ್ರಮ ಮಾತ್ರವಲ್ಲ ಮಾನಸಿಕ ಹಿಂಸೆ ಕೂಡಾ ಅನುಭವಿಸಿದ್ದಾರೆ.

Advertisement

 

Advertisement

Advertisement

 

ಇಶಾನ್​​ ಚಿಕ್ಕ ವಯಸ್ಸಿನಿಂದ ಡ್ಯಾನ್ಸ್ ಎಂದರೆ ಬಹಳ ಇಷ್ಟ. ಅಲ್ಲದೆ ಅವರು ನೋಡಲು ಬಹಳ ಸಣ್ಣ ಇದ್ದರು. ಟಿವಿಯಲ್ಲಿ ಬರುತ್ತಿದ್ದ ಹಿಂದಿ ಹಾಡುಗಳನ್ನು ನೋಡುತ್ತಾ ಇಶಾನ್ ಡ್ಯಾನ್ಸ್ ಮಾಡುತ್ತಿದ್ದರು. ಆಗ ಮನೆಯವರೇ ಇಶಾನ್​​​ಗೆ ಹೊಡೆಯುತ್ತಿದ್ದರಂತೆ. ಇಶಾನ್ 10 ವರ್ಷದವರಿರುವಾಗ ಸ್ಟೇಜ್​​​​ವೊಂದರಲ್ಲಿ ಡ್ಯಾನ್ಸ್ ಮಾಡುವಾಗ ಸ್ವತ: ಅವರ ಅಜ್ಜಿಯೇ ಬಂದು ಅಲ್ಲಿ ನೆರೆದಿರುವವರನ್ನು ಕುರಿತು ನೀವು ಎಂದಾದರೂ ವ್ಯಭಿಚಾರದ ನೃತ್ಯ ನೋಡಿದ್ದೀರ ಎಂದು ಹೇಳುವ ಮೂಲಕ ಇಶಾನ್​​​​​​​ ಅವರನ್ನು ಅಪಹಾಸ್ಯ ಮಾಡಿದ್ದರಂತೆ.

 

ಸ್ಕೂಲ್​​​ನಲ್ಲಿ ಕೂಡಾ ಎಲ್ಲರೂ ಅವರಿಂದ ದೂರ ಇರುತ್ತಿದ್ದರಂತೆ. ನಾನು ಇದರ ಬಗ್ಗೆ ಬಹಳ ಯೋಚಿಸುತ್ತಿದ್ದೆ. ನನ್ನ ಅಣ್ಣನಿಗಿಂತ ನಾನು ಏಕೆ ಬಹಳ ವಿಭಿನ್ನವಾಗಿದ್ದೇನೆ. ಎಲ್ಲರೂ ನನ್ನನ್ನು ಇಷ್ಟು ಕೀಳಾಗಿ ಏಕೆ ಕಾಣುತ್ತಾರೆ ಎಂದು ನನಗೆ ಬಹಳ ದು:ಖವಾಗುತ್ತಿತ್ತು. ತಂದೆ ಕೂಡಾ ನನ್ನನ್ನು ಎಲ್ಲಾದರೂ ಜೊತೆಗೆ ಕರೆದುಕೊಂಡು ಹೋಗಲು ಬಹಳ ಹಿಂಜರಿಯುತ್ತಿದ್ದರು. ಆದರೂ ಡ್ಯಾನ್ಸ್ ಮೇಲೆ ನನಗೆ ಸ್ವಲ್ಪವೂ ಆಸಕ್ತಿ ಕಡಿಮೆಯಾಗಲಿಲ್ಲ. ಏನಾದರೂ ಸಾಧಿಸಬೇಕು ಎಂದು ಮನಸ್ಸಿನಲ್ಲೇ ಹಠ ಬಂತು. ಮನೆಯಲ್ಲಿ ಪ್ರತಿನಿತ್ಯ ಕೇಳುತ್ತಿದ್ದ ಅವಾಚ್ಯ ಶಬ್ಧಗಳಿಂದ ದೂರಾಗಬೇಕು ಎಂದು ನಿರ್ಧರಿಸಿದೆ. ಬೇರೆ ಯಾರಾದರೂ ನನ್ನನ್ನು ನಿಂದಿಸಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ. ಆದರೆ ಮನೆಯವರೇ ನನ್ನನ್ನು ಪ್ರಾಸ್ಟ್ಯುಟ್ಯೂಟ್, ಹಿಜಡಾ ಎಂದು ಮೂದಲಿಸಿ ನನಗೆ ದೈಹಿಕ ಹಿಂಸೆ ನೀಡುತ್ತಿದ್ದದ್ದು ನನಗೆ ಸಹಿಸಲು ಆಗುತ್ತಿರಲಿಲ್ಲ.

 

ನನಗೆ ದೊರೆಯುತ್ತಿದ್ದ ಪಾಕೆಟ್ ಮನಿಯಿಂದ ಕಥಕ್ ಕಲಿಯಲು ನಿರ್ಧರಿಸಿದೆ. ಈ ವಿಚಾರವನ್ನು ಅಮ್ಮನ ಬಳಿ ಮಾತನಾಡಿದೆ. ಆದರೆ ಆಗಲೂ ನನಗೆ ಹೊಡೆತ ಸಿಕ್ಕಿತು. ಅಪ್ಪ ಬಂದು ನನ್ನ ಗೆಜ್ಜೆಗಳನ್ನು ಹೊರಗೆ ಎಸೆದು ಮತ್ತೆ ಮನ ಬಂದಂತೆ ನನ್ನನ್ನು ಬೈದರು. ಮನೆಯಲ್ಲಿ ನನಗೆ ಉಸಿರುಗಟ್ಟುವ ವಾತಾವರಣ ಉಂಟಾಯಿತು. ಒಂದು ದಿನ ಮನೆ ಬಿಟ್ಟು ನೈನಿತಾಲ್​​​​​ಗೆ ಹೊರಟುಬಂದೆ. ಹೋಟೆಲ್​​​​ಗಳಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದೆ. ಕಷ್ಟಪಟ್ಟು ಹಣ ಸಂಪಾದಿಸಿ ಕಥಕ್​​​​, ಬೆಲ್ಲಿ ಡ್ಯಾನ್ಸ್ ಅಭ್ಯಾಸ ಮಾಡತೊಡಗಿದೆ ಎಂದು ನೋವಿನ ಕಥೆ ಹೇಳುತ್ತಾರೆ ಇಶಾನ್.

ಈಗ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಇಶಾನ್. ಅವಶ್ಯಕತೆ ಇದ್ದರೆ ಹುಡುಗಿಯರ ಡ್ರೆಸ್ ಧರಿಸಿ ಇಶಾನ್ ನೃತ್ಯ ಪ್ರದರ್ಶನ ಮಾಡುತ್ತಾರೆ. ಬೆಂಗಳೂರು, ಬಾಂಬೆ, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ನಾನಾ ಕಡೆ ಹಾಗೂ ವಿದೇಶದಲ್ಲಿ ಇಶಾನ್ ನೃತ್ಯ ಪ್ರದರ್ಶನ ನೀಡಿದ್ದಾರೆ. ಈಗ ದೆಹಲಿಯಲ್ಲಿ ಇಶಾನ್ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ.

ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ, ಮನೆಯವರಿಂದಲೇ ದೈಹಿಕ, ಮಾನಸಿಕ ಹಿಂಸೆಗೆ ಒಳಗಾಗಿ ಕೊನೆಗೂ ಸಾಧನೆ ಮಾಡಿದ ಇಶಾನ್ ನಿಜಕ್ಕೂ ಗ್ರೇಟ್. ಅವರು ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸೋಣ.

Advertisement
Share this on...