IT ಕಂಪನಿಗಳು ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಈ ರೀತಿ ಉದ್ಯೋಗಿಗಳಿಗೆ ಕಾಟ ಕೊಡುವುದು ಸರಿಯೇ ?

in ಕನ್ನಡ ಮಾಹಿತಿ 69 views

ಚೀನಾ ದೇಶದಿಂದ ಬಂದಂತಹ ಮಹಾಮಾರಿ ಕೋರೋನಾ ಸೋಂಕಿನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಈ ಮಾರಾಣಾಂತಿಕ ಸೊಂಕು ದಿನನಿತ್ಯದ ಅನೇಕ ದಿನಚರಿಯನ್ನು ಬದಲಾವಣೆ ಮಾಡಿಬಿಟ್ಟಿರುವುದು ತಮಗೆಲ್ಲರಿಗೂ ತಿಳಿದಿದೆ. ಈ ಲಾಕ್ ಡೌನ್ ನಿಂದ ಅನೇಕ ವ್ಯವಹಾರಗಳು ಅಸ್ತವ್ಯಸ್ತವಾಗಿದ್ದರೂ ಐಟಿ ಹಬ್ ಮಾತ್ರ ತನ್ನ ವ್ಯವಹಾರಗಳನ್ನು ಯಾವುದೇ ಏರುಪೇರಿಲ್ಲದೆ ವರ್ಕ್ ಫ್ರಮ್  ಹೋಮ್ ಅಸ್ತ್ರ ಬಳಸಿ ತಮ್ಮ ಕೆಲಸವನ್ನು ಮುಂದುವರೆಸುತ್ತಿದೆ.ಉದ್ಯೋಗಿಗಳು ಕಂಪನಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೋ ಅದೇ ರೀತಿ ತಮ್ಮ ಮನೆಯಲ್ಲೇ ಕುಳಿತು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

Advertisement

Advertisement

ಆದರೂ ಕೂಡ ಈ IT ಕಂಪನಿಗಳು ಮಾತ್ರ ತಮ್ನ ಉದ್ಯೋಗಿಗಳಿಗೆ ಪ್ರತಿ ವರ್ಷ ಕೊಡಬೇಕಾದ ಸಂಬಳ ಹೆಚ್ಚಳಕ್ಕೆ ಕತ್ತರಿ ಹಾಕುವುದಲ್ಲದೇ, ಇದರ ಜೊತೆಗೆ ಉದ್ಯೋಗಿಗಳಿಗೆ ಯಾವುದೇ ಇನ್ಸೆಂಟಿವ್ ಗಳನ್ನು ಸಹ ನೀಡದೆ ಹಗಲು- ರಾತ್ರಿ ಎನ್ನದೇ ದುಡಿಸಿ, ಶನಿವಾರ ಮತ್ತು ಭಾನುವಾರವೆನ್ನದೆ  ಉದ್ಯೋಗಿಗಳಿಗೆ ಕಾಟ ಕೊಡುವುದು ಕಂಡುಬಂದಿದೆ. ಇದರಿಂದ ಬೇಸತ್ತ ಅನೇಕ ಉದ್ಯೋಗಿಗಳು ಮಾನಸಿಕ ಅಸ್ವಸ್ಥರಾಗಿದ್ದು, ಈ ವಿಷಾದ ಸಂಗತಿಯನ್ನು ಯಾರಿಗೂ ಹೇಳಲಾರದೆ ಮನದೊಳಗೆ ಸಂಕಟ ಪಡುತ್ತಿದ್ದಾರೆ.ಈ ಒಂದು ವಿಚಾರವನ್ನು ಹೇಳಿಕೊಂಡರೆ ಎಲ್ಲಿ ತಮಗಿರುವ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ತಮ್ಮ ಬಾಯಿಗಳನ್ನು ಮುಚ್ಚಿಕೊಂಡು ಇದ್ದಾರೆ.ಇದೇ ಮುಂದುವರೆದರೆ ನಿಮ್ಹಾನ್ಸ್ ಆಸ್ಪತ್ರೆ ತುಂಬಾ IT ಉದ್ಯೋಗಿಗಳು ತುಂಬಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಅಲ್ಲವೇ?

Advertisement


ಇನ್ನೂ TCS, Infosis, HCL, Techmahindra ಹಾಗೂ microsoft ಕಂಪನಿಗಳು ಶೇಕಡ ೧೦ ರಿಂದ ೧೫ % ಉತ್ಪಾದಕತೆ ಹೆಚ್ಚಾಗಿದೆ ಹಾಗೂ ಮಹಾಮಾರಿ ಕೊರೋನಾ ಮುಗಿದ ನಂತರವೂ ವರ್ಕ್ ಫ್ರಮ್ ಹೋಮ್ ಅನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದೇ ರೀತಿಯಾದ ಕಿರುಕುಳ ಮಹಾಮಾರಿ ಮುಂದುವರೆದರೆ
ಕೊರೋನಾಗಿಂತ ಅಪಾಯಕಾರಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇದನ್ನು ಸರ್ಕಾರ ಹಾಗೂ ಮಾಧ್ಯಮ ಮಿತ್ರರು ಸರ್ವರಿಗೂ ಗಮನಕ್ಕೆ ತರುವಂತೆ ಮಾಡಿ ಎಂಬುದು ನಮ್ಮ ಕನ್ನಡದ ಮನವಿ. ಈ ಲೇಖನವನ್ನು IT ಉದ್ಯೋಗಿಗಳು ಶೇರ್ ಮಾಡಿ ಹಾಗೂ ತಮ್ಮ ಅನಿಸಿಕೆಯನ್ನು ಕಮೆಂಟ್ ಮುಖಾಂತರ ತಿಳಿಸಿ..

Advertisement

Advertisement
Share this on...