ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಶಿಶಿರ ಋತು, ಮಾಘ ಮಾಸೆ, ಕೃಷ್ಣ ಪಕ್ಷದ ದ್ವಿತೀಯ ತಿಥಿ, ಉತ್ತರಫಾಲ್ಗುಣಿ ನಕ್ಷತ್ರ, ಶೂಲ ಯೋಗ, ಗರಜ ಕರಣ, 1ನೇ ತಾರೀಕು ಮಾರ್ಚ್ 2021 ಸೋಮವಾರದ ಪಂಚಾಂಗ ಫಲವನ್ನು ರಾಶಿಗನುಗುಣವಾಗಿ ದಿನಭವಿಷ್ಯವನ್ನು ಶ್ರೀ ರವಿಶಂಕರ್ ಗುರೂಜಿರವರು ನೀಡಿದ್ದಾರೆ.
ಮಕ್ಕಳ ಮೇಲೆ ಆಸೆಯಿದ್ದರೆ ಕೈಕೆಯ ತರ ಆಸೆ ಇರಬೇಕು ಎಂದು ಹೇಳಲಾಗುತ್ತದೆ. ತಂದೆ ತಾಯಿಗೆ ತಮ್ಮ ಮಕ್ಕಳ ಮೇಲೆ ಅಪಾರ ಪೊಸೆಸಿವ್ನೆಸ್ ಇರುವುದು ತಪ್ಪಲ್ಲ. ನಿಮ್ಮ ರಕ್ತ ಬುದ್ಧಿ ದೇಹ ತೇಜಸ್ಸು ಸುಜ್ಞಾನ ಅಣು ಅಣುವೂ ಕೂಡ ತಂದೆ ತಾಯಿಯರಿಂದಲೇ ಆದ್ದರಿಂದ ಮೊದಲು ಮಕ್ಕಳು ತಂದೆಯ ತಾಯಿಯ ಆಸೆಯಂತೆ ನೆಡೆದುಕೊಳ್ಳುವುದು ಉತ್ತಮ. ಮಕ್ಕಳ ಶಕ್ತಿ ಸಾಮರ್ಥ್ಯ ಎಲ್ಲದರ ಬಗ್ಗೆ ತಂದೆ ತಾಯಿಗಳಿಗೆ ಗೊತ್ತಿರುತ್ತದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಂದೆತಾಯಿಗಳು ಚಿಂತಿಸುತ್ತಿರುತ್ತಾರೆ. ಆದ್ದರಿಂದ ತಂದೆ ತಾಯಿಗಳ ಆಸೆಗೆ ಬೆಲೆ ಕೊಡಿ ಗೌರವಿಸಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.
ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :
ಮೇಷರಾಶಿ : ಅಡ್ಡದಾರಿಯಲ್ಲಿ ಮೋಸದಾಟ ಮಾಡಿರುವವರಿಗೆ ಸ್ವಲ್ಪ ಪೆಟ್ಟು ಎಚ್ಚರಿಕೆ.
ವೃಷಭ ರಾಶಿ : ಇಂದು ದಿನವಿಡೀ ಆತಂಕದಲ್ಲಿ ಮಕ್ಕಳ ಬಗ್ಗೆ ಜವಾಬ್ದಾರಿ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳುತ್ತೀರ ಗಾಬರಿಯಾಗಬೇಡಿ. ರುದ್ರ ನಮಕ ಗಮಕ ವನ್ನು ಜೆಪಿಸಿ ಒಳ್ಳೆಯದಾಗುತ್ತದೆ.
ಮಿಥುನ ರಾಶಿ : ಎಲ್ಲಾ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಬೇಕು ಎಂದು ಟೆನ್ಷನ್ ಗೆ ಒಳಗಾಗುತ್ತೀರಿ. ಯಾವುದಕ್ಕೂ ತೀರ ತಲೆಕೆಡಿಸಿಕೊಳ್ಳಲು ಹೋಗಬೇಡಿ. ಅದರದರ ಶಕ್ತಿ ಅದಕ್ಕೆ ಇದ್ದೇ ಇರುತ್ತದೆ ಯಾವುದೂ ಬದಲಾಗುವುದಿಲ್ಲ.
ಕರ್ಕಾಟಕ ರಾಶಿ : ವಿಜಯೋತ್ಸವ ಯಾವ ಕೆಲಸವಾದರೂ ಸರಿ ಧೈರ್ಯವಾಗಿ ಮುಂದಕ್ಕೆ ಹೆಜ್ಜೆ ಇಡಿ ಗೆಲ್ಲುವಿರಿ. ಮನಸ್ಸಿನ ಶಕ್ತಿ ತುಂಬ ಚೆನ್ನಾಗಿದೆ, ದಿಟ್ಟತನದಿಂದ ಗೆಲ್ಲುತ್ತೀರಿ.
ಸಿಂಹ ರಾಶಿ : ಅದ್ಭುತವಾದ ಸ್ವಂತ ವ್ಯವಹಾರ ಸ್ವಂತ ವ್ಯಾಪಾರ ಸ್ವಂತ ಕೆಲಸಗಳಲ್ಲಿ ಇರುವವರೆಗೆ ಅನುಕೂಲವನ್ನು ನೋಡುವಂತಹ ದಿನ.
ಕನ್ಯಾ ರಾಶಿ : ಸ್ವಲ್ಪ ಖರ್ಚಿನ ದಿನ ವ್ಯವಹಾರ ಕುಟುಂಬಕ್ಕೋಸ್ಕರ ಖರ್ಚಾಗುತ್ತದೆ.
ತುಲಾ ರಾಶಿ : ಚೆನ್ನಾಗಿದೆ ಇಂದು ಲಾಭವು ಯಥೇಚ್ಛವಾಗಿರುತ್ತದೆ ಗೌರವವೂ ಯಥೇಚ್ಛವಾಗಿರುತ್ತದೆ ಹಾಗೆಯೇ ಖರ್ಚು ಕೂಡ ಮಾಡಬೇಕಾಗುತ್ತದೆ.
ವೃಶ್ಚಿಕ ರಾಶಿ : ಇಂದು ನೀವು ಯಾವ ಕೆಲಸವನ್ನು ಮಾಡಿದರೂ ಕೂಡ ಅದು ಹಗುರವಾಗಿ ಹೂವು ಎತ್ತಿದಂತೆ ಆಗುತ್ತದೆ. ನಿಷ್ಠೆ ಪ್ರಾಮಾಣಿಕತೆಯಿಂದ ಯಾವ ಕೆಲಸವನ್ನು ಮಾಡಿದರೂ ಕೂಡ ಅದರಿಂದ ಗೆಲುವನ್ನು ಪಡೆಯುತ್ತೀರಾ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.
ಧನಸ್ಸು ರಾಶಿ : ಉದ್ಯೋಗ ದಲ್ಲೊಂದು ಉತ್ತಮವಾದ ಹೆಸರನ್ನು ಗಳಿಸುವಿರಿ ಸ್ವಂತ ಕಾರ್ಯ ಫೈನಾನ್ಸ್ ಬ್ಯಾಂಕಿಂಗ್ ಇನ್ಶೂರೆನ್ಸ್ ಈ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಚೆನ್ನಾಗಿದೆ ತೊಂದರೆಯೇನಿಲ್ಲ ಅದ್ಬುತವಾಗಿದೆ.
ಮಕರ ರಾಶಿ : ತಂದೆತಾಯಿಯ ವಿಚಾರದಲ್ಲಿ ಸಣ್ಣ ಏರುಪೇರು ಕಿರಿಕಿರಿ ಉಂಟಾಗುತ್ತದೆ ಹಲ್ಲು ನೋವು, ಬಾಯಿ ಇನ್ಫೆಕ್ಷನ್ ಗಳುಂಟಾಗುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ಒಂದು ಸ್ಪೂನ್ ಅರಳೆಣ್ಣೆ ಒಂದು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು ಮುಕ್ಕಳಿಸಿ ಹದಿನೈದು ನಿಮಿಷಗಳ ಕಾಲ ಇದ್ದು ಅದನ್ನು ಉಗಿಯಿರಿ.
ಕುಂಭ ರಾಶಿ : ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ಜಾಗ್ರತೆ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ. ಮಂಡಿನೋವು ಸೊಂಟ ನೋವು ವಾಯುವಿಗೆ ಸಂಬಂಧಿಸಿದ ಆಹಾರಗಳನ್ನ ಹಿರಿಯರಿಗೆ ವಯಸ್ಸಾದವರಿಗೆ ಕೊಡಬೇಡಿ.
ಮೀನ ರಾಶಿ: ಇಂದು ನಿಮ್ಮಿಂದ ಬೇರೆಯವರಿಗೆ ಲಾಭ. ಬೇರೆಯವರಿಗೆ ನೀವು ನೆರಳಾಗುತ್ತೀರ.
All Rights reserved Namma Kannada Entertainment.