ಇದು ಭಾರತದ ಶ್ರೀಮಂತ ಹಳ್ಳಿ, ಇಲ್ಲಿನ ರೈತರ ವಾರ್ಷಿಕ ಆದಾಯ ಕೇಳಿದ್ರೆ ಖಂಡಿತ ಬೆರಗಾಗ್ತೀರಾ…!

in ಕನ್ನಡ ಮಾಹಿತಿ 161 views

ಇಂದಿನ ಕಾಲದಲ್ಲಿ ಜನರು ಹಣ ಸಂಪಾದಿಸಲು ಎಷ್ಟು ಶ್ರಮಿಸಬೇಕು ಅಲ್ಲವೇ? ಇಂತಹ ಪರಿಸ್ಥಿತಿಯಲ್ಲಿ, ಹಿಮಾಚಲ ಪ್ರದೇಶದ ಬಳಿಯಿರುವ ಹಳ್ಳಿಯ ಜನರು ಲಕ್ಷಾಂತ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ. ಹೌದು, ಶಿಮ್ಲಾ ಬಳಿ ಮದವಾಗ್ ಎಂಬ ಒಂದು ಹಳ್ಳಿ ಇದ್ದು, ಇಲ್ಲಿನ ರೈತರು ಅತ್ಯದ್ಭುತ ಕೆಲಸ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಈ ಗ್ರಾಮದಲ್ಲಿ ಒಬ್ಬ ಕೈಗಾರಿಕೋದ್ಯಮಿ ಅಥವಾ ಪ್ರಸಿದ್ಧ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಲ್ಲ. ಆದರೆ ಇಲ್ಲಿನ ಪ್ರತಿ ಕುಟುಂಬದ ವಾರ್ಷಿಕ ಆದಾಯ 70 ರಿಂದ 75 ಲಕ್ಷ ರೂಪಾಯಿಗಳು. ಮದವಾಗ್ ಗ್ರಾಮವು 7774 ಅಡಿ ಎತ್ತರದಲ್ಲಿದ್ದು, ಶಿಮ್ಲಾದಿಂದ 92 ಕಿ.ಮೀ ದೂರದಲ್ಲಿದೆ. ನಿಮಗೆ ನೆನಪಿರಬೇಕು. 2019 ರಲ್ಲಿಈ ಮದವಾಗ್ ಹಳ್ಳಿಯನ್ನು ಭಾರತದ ಶ್ರೀಮಂತ ಹಳ್ಳಿಯ ಪಟ್ಟಿಗೆ ಸೇರಿಸಲಾಯಿತು. ಹಾಗಾದರೆ ಇದಕ್ಕೆ ಕಾರಣವೇನು? ಅಲ್ಲಿನ ಜನರು ಹೇಗೆ ಸಂಪಾದನೆ ಮಾಡುತ್ತಿದ್ದಾರೆ ಮುಂತಾದ ಮಾಹಿತಿಗಾಗಿ ಮುಂದೆ ಓದಿ…

Advertisement

 

Advertisement

 

Advertisement

Advertisement

ಇಷ್ಟೆಲ್ಲಾ ಕೇಳಿದ ಮೇಲೆ ಮದವಾಗ್ ಹಳ್ಳಿಯ ರೈತರು ಏನು ಮಾಡುತ್ತಿದ್ದಾರೆ ಎಂದು ನಿಮಗೆ ಕುತೂಹಲವಿರಬಹುದು. ಆದರೆ ನಾವೆಲ್ಲಾ ಅಂದುಕೊಂಡ ಹಾಗೆ ಅವರು ಯಾವುದೇ ಬ್ಯುಸಿನೆಸ್ ಮಾಡುತ್ತಿಲ್ಲ. ಬದಲಿಗೆ ಸೇಬು ಹಣ್ಣನ್ನು ಬೆಳೆಯುತ್ತಿದ್ದಾರೆ. ಅವರು ವರ್ಷಕ್ಕೆ ಸುಮಾರು 7 ಲಕ್ಷ ಪೆಟ್ಟಿಗೆಗಳಷ್ಟು ಸೇಬನ್ನು ಉತ್ಪಾದಿಸಿ, ಈಗ ಶ್ರೀಮಂತ ರೈತರು ಅನಿಸಿಕೊಂಡಿದ್ದಾರೆ. ಹೌದು, ಮದವಾಗ್ನ ರೈತರು ಉತ್ತಮ ಗುಣಮಟ್ಟದ ಸೇಬನ್ನು ಬೆಳೆಯುತ್ತಿದ್ದು, ಇಲ್ಲಿ ರಾಯಲ್ ಆಪಲ್, ರೆಡ್ ಗೋಲ್ಡ್, ಗೇಲ್ ಗಾಲಾದಂತಹ ಉತ್ತಮ ಗುಣಮಟ್ಟದ ಸೇಬನ್ನು ಬೆಳೆಯುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ 1989 ರವರೆಗೆ ಇಲ್ಲಿ ಸೇಬಿನ ಒಂದು ಕುರುಹು ಕೂಡ ಇರಲಿಲ್ಲ. ಆದರೆ 1990 ರಲ್ಲಿ ಒಬ್ಬ ರೈತ ಪ್ರಯೋಗ ಮಾಡಿದಾಗ, ಅವನು ಯಶಸ್ವಿಯಾದನು.

 

ಈ ಯಶಸ್ವಿ ಪ್ರಯತ್ನದ ನಂತರ, ಅದೇ ಸಮಯದಲ್ಲಿ ಜನರು ಇಲ್ಲಿ ಸೇಬುಗಳನ್ನು ಬೆಳೆಸಲು ಪ್ರಾರಂಭಿಸಿದರು. ಮದವಾಗ್ ಸೇಬಿನ ಗಾತ್ರವು ತುಂಬಾ ದೊಡ್ಡದಾಗಿದ್ದು, ಸೇಬುಗಳು ತಮ್ಮ ಗುಣಮಟ್ಟಕ್ಕೆ ಹೆಸರು ಮಾಡಿವೆ. ಅಷ್ಟೇ ಅಲ್ಲ, ಬೇರೆ ಸೇಬುಗಳಂತೆ ಇದು ಬೇಗನೆ ಹಾಳಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಜನರು ತಮ್ಮ ಸೇಬಿನ ತೋಟಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಸೇಬಿನ ತೋಟಗಳಲ್ಲಿ ಅವರು ಹಾಕಿದ ಶ್ರಮದ ಫಲಕ್ಕೆ ಇಂದು ಇದು ಶ್ರೀಮಂತ ಹಳ್ಳಿಗಳ ಪಟ್ಟಿಗೆ ಸೇರಿಕೊಂಡಿದೆ.

Advertisement
Share this on...