ಲಾಕ್ ಡೌನ್ ಸಮಯದಲ್ಲಿ ಜಾಕ್ವೆಲಿನ್ ತುಂಬಾ ಬ್ಯೂಸಿ ಆಗಿದ್ರಂತೆ, ಅದ್ಹೇಗೆ ?

in ಮನರಂಜನೆ 28 views

ಬಾಲಿವುಡ್’ನ ಅತ್ಯಂತ ಸುಂದರ ನಟಿಯರ ಪೈಕಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಒಬ್ಬರು. ಅವರು ಲಾಕ್ ಡೌನ್ ಸಮಯವನ್ನು ಚೆನ್ನಾಗಿ ಬಳಸಿಕೊಂಡಿದ್ದು,ಇತ್ತೀಚೆಗೆ ಪ್ರಮುಖ ವೆಬ್ ಸೈಟ್ ಒಂದರ ಜೊತೆ ಮಾತನಾಡುತ್ತಾ, ಲಾಕ್ ಡೌನ್ ಸಮಯದಲ್ಲಿಯೂ ಕಾರ್ಯನಿರತವಾಗಿದ್ದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. “ನನ್ನ ಚಲನಚಿತ್ರ ಬಿಡುಗಡೆ, ಪ್ರಚಾರ, ಸಲ್ಮಾನ್ ಜೊತೆ ಹಾಡು, ಬಾದ್ಶಾ ಗಾಯನ, ಮ್ಯಾಗಜಿನ್ ಚಿತ್ರೀಕರಣ ಮತ್ತು ಈಗ ಶೋಗಳಿವೆ. ಹಾಗಾಗಿ ನಾನು ಲಾಕ್ ಡೌನ್’ನಲ್ಲಿದ್ದೇನೆ ಎಂದು ನನಗೆ ಅನಿಸುವುದಿಲ್ಲ, ಅದೃಷ್ಟವಶಾತ್ ಕೆಲಸ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ. “ವೈಯಕ್ತಿಕವಾಗಿ ನಾನು ಧನಾತ್ಮಕವಾಗಿರಲು ಪ್ರಯತ್ನಿಸುತ್ತಿದ್ದೇನೆ. ನನ್ನನ್ನು ಕಾರ್ಯನಿರತವಾಗಿರಿಸಿಕೊಳ್ಳಲು ಎಲ್ಲಾ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ದೈನಂದಿನ ಕೆಲಸಕ್ಕೆ ಹೋಗುತ್ತಿಲ್ಲ, ಒಟ್ಟಾರೆಯಾಗಿ ಎಲ್ಲರಿಗೂ ಕಷ್ಟಕರ ಸಮಯವಾಗಿದೆ. ಆದರೂ ಈ ಸಮಯದಲ್ಲಿ ನಾನು ಕಾರ್ಯನಿರತವಾಗಿದ್ದೇನೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತಿದೆ.

Advertisement

 

Advertisement

Advertisement

ನಾವು ಈ ಸಮಯವನ್ನು ಸಾಧ್ಯವಾದಷ್ಟು ಉತ್ತಮವಾಗಿ ಬಳಸಿಕೊಳ್ಳಬೇಕು. ಈ ಕಷ್ಟದ ಸಮಯದಲ್ಲಿ ನಾವು ಎಲ್ಲರೂ ನಮ್ಮ ಜೀವನವನ್ನು ಮತ್ತೊಮ್ಮೆ ಪ್ರಾರಂಭಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.  ಜಾಕ್ವೆಲಿನ್ ‘ತೇರೆ ಬಿನಾ’, ‘ಮೇರೆ ಅಂಗನೇ ಮೇ’ ಮತ್ತು ‘ಗೆಂಡಾ ಫೂಲ್’ ಜೊತೆಗೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ ಈ ವರ್ಷದ ಕೆಲವು ಅತ್ಯುತ್ತಮ ಹಿಟ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಲಾಕ್ ಡೌನ್ ಸಮಯದಲ್ಲಿ ಪ್ರೇಕ್ಷಕರನ್ನು ರಂಜಿಸಲು ಮನೆಯಲ್ಲಿ ‘ಹೋಮ್ ಡ್ಯಾನ್ಸರ್’ ಎಂಬ ಕಾರ್ಯಕ್ರಮವನ್ನೂ ಅವರು ಮಾಡಿದರು. ಈ ಹಿಂದೆ ಜಾಕ್ವೆಲಿನ್, ನಾನು ಲಾಸ್ ಎಂಜಲೀಸ್ನಲ್ಲಿ ನಟನಾ ತರಬೇತಿ ಪಡೆದು ಬಂದಿದ್ದೇನೆ ಎಂದು ಸತ್ಯ ಹೇಳಿ ಹಲವರು ಬಾಯಿಬಾಯಿ ಬಿಡುವಂತೆ ಮಾಡಿದ್ದರು.

Advertisement

 

ಶ್ರೀಲಂಕಾ ಮೂಲದ ಜಾಕ್ವೆಲಿನ್ ಅಮೆರಿಕಾದ ಲಾಸ್ ಎಂಜಲೀಸ್ನಲ್ಲಿ ಹಾಲಿವುಡ್ ನಟಿ ಇವಾನಾ ಚಿಬುಕ್ ಅವರಿಂದ ಆಕ್ಟಿಂಗ್ ತರಬೇತಿ ಪಡೆದಿದ್ದಾರೆ. ಇವಾನಾ ಅವರು ಪ್ರತಿಷ್ಠಿತ ಆಸ್ಕರ್ ಪಡೆದಿರುವ ಅನೇಕ ನಟನಟಿಯರಿಗೆ ತರಬೇತಿ ನೀಡಿದ್ದಾರಂತೆ. “ನಾನು ಇವಾನಾ ನಡೆಸುವ ಆಕ್ಟಿಂಗ್ ಕೋರ್ಸ್ ಸೇರಿ ಅವರಿಂದ ತರಬೇತಿ ಪಡೆದಿದ್ದೇನೆ” ಎಂದು ಜಾಕ್ವೆಲಿನ್ ಸಂದರ್ಶನವೊಂದರಲ್ಲಿ ಬಹಿರಂಗಗೊಳಿಸಿದ್ದರು.ಅಷ್ಟೇ ಅಲ್ಲ, “ನನಗೆ ಕ್ಯಾಮೆರಾ ಮುಂದೆ ಭಯವಾಗಲೀ ಅಥವಾ ನಟನೆ ಮಾಡಲು ಕಷ್ಟವಾಗಲೀ ಆಗುವುದಿಲ್ಲ. ನನಗೆ ನಿಜವಾಗಿಯೂ ಆ ಕೋರ್ಸ್ ತುಂಬಾ ಸಹಾಯ ಮಾಡಿತು” ಎಂದಿದ್ದರು ಜಾಕ್ವೆಲಿನ್.

Advertisement
Share this on...