ಮಾತು ಬಿಟ್ಟಿದ್ದ ಅಪ್ಪ ನನ್ನ ಸಿನಿಮಾ ನೋಡಿ ರಸ್ತೆಯಲ್ಲೇ ಕಣ್ಣೀರು ಹಾಕಿದ್ರು..ಜಗ್ಗೇಶ್ ಹೇಳಿದ್ದು ಯಾವ ಚಿತ್ರದ ಬಗ್ಗೆ…?

in ಸಿನಿಮಾ 40 views

ಚಿತ್ರರಂಗದಲ್ಲಿ ಕಷ್ಟಪಟ್ಟು ಮುಂದೆ ಬಂದ ನಟರಲ್ಲಿ ಜಗ್ಗೇಶ್ ಕೂಡಾ ಒಬ್ಬರು. ಯಾವ ಕಾರ್ಯಕ್ರಮಕ್ಕೆ ಹೋದರೂ ತಮ್ಮ ಹಳೆಯ ಜೀವನವನ್ನು ನೆನಪಿಸಿಕೊಳ್ಳುವ ಜಗ್ಗೇಶ್ ತಾವು ಹತ್ತಿ ಬಂದ ಏಣಿಯನ್ನು ಎಂದಿಗೂ ಒದೆಯುವ ಕೆಲಸ ಮಾಡಿಲ್ಲ. ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ ಜಗ್ಗೇಶ್, ಈಗ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

Advertisement

 

Advertisement

Advertisement

 

Advertisement

ಇನ್ನು ಕೋಮಲ್ ಮದುವೆಯನ್ನು ಕಣ್ತುಂಬಿಕೊಂಡ ಅಮ್ಮ ಅದಾದ 20 ದಿನಗಳಲ್ಲೇ ನಿಧನರಾದ ಸುದ್ದಿಯನ್ನು ಹೇಳಿಕೊಂಡು ಬೇಸರಗೊಂಡಿದ್ದ ಜಗ್ಗೇಶ್, ತಂದೆ ತನ್ನೊಂದಿಗೆ ಮಾತು ಬಿಟ್ಟದ್ದು, ನಂತರ ತಾವು ಅಭಿನಯಿಸಿದ್ದ ಸಿನಿಮಾವನ್ನು ನೋಡಿ ಅತ್ತಿದ್ದ ವಿಚಾರವನ್ನು ಕೂಡಾ ಹೇಳಿಕೊಂಡಿದ್ದಾರೆ. ತಾವು ಮೊದಲು ನಟಿಸಿದ್ದ ‘ಶ್ವೇತ ಗುಲಾಬಿ’ ಚಿತ್ರದ ವಿಡಿಯೋ ಕ್ಲಿಪಿಂಗನ್ನು ತಮ್ಮ ಟ್ವಿಟ್ಟರ್​​​ನಲ್ಲಿ ಹಂಚಿಕೊಂಡಿರುವ ಜಗ್ಗೇಶ್​​​ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

 

ಅದು ಜಗ್ಗೇಶ್ ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಅಲೆದಾಡುತ್ತಿದ್ದ ದಿನಗಳು. ಜಗ್ಗೇಶ್ ತಂದೆಗೆ ಮಗ ಓದಿ ಕೆಲಸಕ್ಕೆ ಸೇರಬೇಕೆಂಬ ಆಸೆ ಇತ್ತು. ಆದರೆ ಜಗ್ಗೇಶ್​​​​​​ಗೆ​​​ ಮಾತ್ರ ಸಿನಿಮಾದಲ್ಲೇ ಏನಾದರೂ ಸಾಧಿಬೇಕೆಂಬ ಆಸೆ. ಇದೇ ವಿಚಾರಕ್ಕೆ ಅಪ್ಪ-ಮಗನ ನಡುವೆ ಎಷ್ಟೋ ಬಾರಿ ಜಗಳ ನಡೆದು ಮಾತು ಕೂಡಾ ಬಿಟ್ಟಿದ್ದರಂತೆ. ಒಂದು ದಿನ ಇದೇ ವಿಚಾರಕ್ಕೆ ಜಗ್ಗೇಶ್​​​​ ಮೇಲೆ ಅವರ ತಂದೆ ಕೈ ಮಾಡಿದ್ದಾರೆ. ಆಗ ತಾಯಿ ನನ್ನನ್ನು ಕರೆದು 500 ರೂಪಾಯಿ ನೀಡಿ ಮಂತ್ರಾಲಯಕ್ಕೆ ಹೋಗಿ ನಿನ್ನ ಆಸೆಯನ್ನು ರಾಯರಿಗೆ ಒಪ್ಪಿಸು, ಖಂಡಿತ ನಿನ್ನ ಆಸೆ ಈಡೇರುತ್ತದೆ ಎಂದು ಆಶೀರ್ವದಿಸಿದ್ದರು. ಅಮ್ಮ ಹೇಳಿದಂತೆ ಮಂತ್ರಾಲಯಕ್ಕೆ ಹೋಗಿ ಬಂದೆ.

ರಾಯರು ಕೊನೆಗೂ ನನ್ನನ್ನು ಆಶೀರ್ವದಿಸಿದ್ದರಿಂದ ನನಗೆ ಆ ವೇಳೆ ‘ಶ್ವೇತ ಗುಲಾಬಿ’ ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ಆಗ ನನಗೆ 22 ವರ್ಷ. ಚಿತ್ರ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ 100 ದಿನಗಳ ಕಾಲ ಪ್ರದರ್ಶನವಾಯ್ತು. ಅಪ್ಪ, ಅಮ್ಮನನ್ನು ಸಿನಿಮಾ ನೋಡಲು ಕರೆದೊಯ್ದಿದ್ದೆ. ಚಿತ್ರ ನೋಡಿ ವಾಪಸ್ ಬರುವಾಗ ಅಪ್ಪ-ಅಮ್ಮ ಇಬ್ಬರೂ ರಸ್ತೆಯಲ್ಲೇ ಕಣ್ಣೀರು ಹಾಕಿಬಿಟ್ಟರು. ಗುರು ರಾಯರ ದಯೆಯಿಂದ, ನನ್ನ ತಾಯಿ ಅದು ಹರಸಿದ್ದರ ಫಲದಿಂದ ಇಂದಿಗೂ ನನ್ನ ಜೀವನ ಚೆನ್ನಾಗಿ ನಡೆಯುತ್ತಿದೆ ಎಂದು ಜಗ್ಗೇಶ್​ ಅಂದಿನ ದಿನವನ್ನು ನೆನಪು ಮಾಡಿಕೊಂಡಿದ್ದಾರೆ. ಅಲ್ಲದೆ ತನಗೆ ಅವಕಾಶ ನೀಡಿದ ಕೆ.ವಿ. ಜಯರಾಮ್‌ ಅವರಿಗೂ ಜಗ್ಗೇಶ್ ಕೃತಜ್ಞತೆ ಅರ್ಪಿಸಿದ್ದಾರೆ ಜಗ್ಗೇಶ್.

Advertisement
Share this on...